ನಿತ್ಯಭವಿಷ್ಯ: ಈ ರಾಶಿಯವರಿಗಿಂದು ಲೇವಾದೇವಿ ವ್ಯವಹಾರದಲ್ಲಿ ನಷ್ಟ

Nitya Bhavisya Vijayavani
Published on

ಮೇಷ: ರೇಷ್ಮೆ ವಸ್ತ್ರ ವ್ಯಾಪಾರಿಗಳಿಗೆ ಆದಾಯ. ಲೇವಾದೇವಿ ವ್ಯವಹಾರದಲ್ಲಿ ನಷ್ಟ. ಮಾತಿನಿಂದ ಕಲಹ. ಕುಲದೇವತೆಯನ್ನು ಆರಾಧಿಸಿ. ಶುಭಸಂಖ್ಯೆ: 9

ವೃಷಭ: ಹೊಸ ವ್ಯಕ್ತಿಗಳ ಪರಿಚಯವಾಗುವುದು. ಕಲಾವಿದರಿಗೆ ಅನಿರೀಕ್ಷಿತ ಗೌರವ ಸಿಗಲಿದೆ. ಗಾಯಕಿಯರಿಗೆ ಅನಿರೀಕ್ಷಿತ ತಿರುವು. ಶುಭಸಂಖ್ಯೆ: 4

ಮಿಥುನ: ಸಾಮಾಜಿಕ ಸೇವೆಗಳಲ್ಲಿ ನೆಮ್ಮದಿ ದೊರೆಯಲಿದೆ. ಕುಟುಂಬದಲ್ಲಿ ಸಂತೋಷದ ಸಮಯ. ಆಸ್ತಿ ವಿವಾದದಲ್ಲಿ ನಿಮಗೆ ಜಯ. ಶುಭಸಂಖ್ಯೆ: 9

ಕಟಕ: ಗೃಹನಿರ್ವಣಕ್ಕೆ ಮಿತ್ರರಿಂದ ಹಣದ ಸಹಕಾರ. ಮಕ್ಕಳಿಂದ ಶುಭವಾರ್ತೆ. ಶೈಕ್ಷಣಿಕ ಕ್ಷೇತ್ರದವರಿಗೆ ಪುರಸ್ಕಾರ ದೊರೆಯಲಿದೆ. ಶುಭಸಂಖ್ಯೆ: 1

ಸಿಂಹ: ಬಂಧುಗಳ ಜೊತೆಯಲ್ಲಿ ಭಿನ್ನಾಭಿಪ್ರಾಯ ದೂರವಾಗುವುದು. ಭೂ ವ್ಯವಹಾರದಲ್ಲಿ ಆದಾಯ. ಹೋಟೆಲ್ ವ್ಯವಹಾರದಲ್ಲಿ ನಷ್ಟ. ಶುಭಸಂಖ್ಯೆ: 3

ಕನ್ಯಾ: ಪಿತ್ರಾರ್ಜಿತ ಆಸ್ತಿ ವ್ಯವಹಾರದಲ್ಲಿ ಗೆಲುವು. ಮಹಿಳಾ ಪ್ರತಿಭೆಗಳಿಗೆ ಯಶಸ್ಸು. ಕೈಗಾರಿಕೋದ್ಯಮಿಗಳಿಗೆ ವಿದೇಶ ಪ್ರಯಾಣ ಸಾಧ್ಯತೆ. ಶುಭಸಂಖ್ಯೆ: 8

ತುಲಾ: ಉದ್ಯೋಗಾಕಾಂಕ್ಷಿಗಳಿಗೆ ಶುಭ. ನಿರ್ಧಾರಗಳಲ್ಲಿ ಎಚ್ಚರ ವಹಿಸಿ. ಆಮದು-ರಫ್ತು ವ್ಯಾಪಾರಸ್ಥರಿಗೆ ಉತ್ತಮ ಬೆಲೆ ಸಿಗಲಿದೆ. ಶುಭಸಂಖ್ಯೆ: 7

ವೃಶ್ಚಿಕ: ಕೃಷಿಕರಿಗೆ ಲಾಭದ ದಿನ. ಚಲನಚಿತ್ರ ಕ್ಷೇತ್ರದವರಿಗೆ ವೈಫಲ್ಯ ಕಾಡಲಿದೆ. ಹಣಕಾಸಿನ ವ್ಯವಹಾರಸ್ಥರಿಗೆ ಹಿನ್ನಡೆಯಾಗುವ ಸಾಧ್ಯತೆ. ಶುಭಸಂಖ್ಯೆ: 4

ಧನಸ್ಸು: ಸಂಗೀತ ಕಾರ್ಯಕ್ರಮಗಳಲ್ಲಿ ಭಾಗಿ. ಉದ್ಯಮಶೀಲ ಮಹಿಳೆಯರಿಗೆ ಯಶಸ್ಸು. ರಾಜಕೀಯ ಕ್ಷೇತ್ರದವರಿಗೆ ಸಾಮಾಜಿಕ ಗೌರವ. ಶುಭಸಂಖ್ಯೆ: 8

ಮಕರ: ಮಂಗಳ ಕಾರ್ಯಗಳಿಂದ ಬದುಕಿನಲ್ಲಿ ಯಶಸ್ಸು ಸಿಗಲಿದೆ. ವಕೀಲರಿಗೆ ಲಾಭವಾಗುವುದು. ಐಟಿ ಉದ್ಯೋಗಿಗಳಿಗೆ ಅಭಿವೃದ್ಧಿ. ಶುಭಸಂಖ್ಯೆ: 6

ಕುಂಭ: ಕಟ್ಟಡ ಮಾರಾಟದ ಏಜೆಂಟ್​ಗಳಿಗೆ ಆದಾಯ. ಮನರಂಜನಾ ಕಲಾವಿದರಿಗೆ ಬೇಡಿಕೆ. ಕೃಷಿ ಉತ್ಪನ್ನದಲ್ಲಿ ಲಾಭ. ಉದ್ಯೋಗ ನಷ್ಟ. ಶುಭಸಂಖ್ಯೆ: 9

ಮೀನ: ವೈಜ್ಞಾನಿಕ ಸಂಶೋಧಕರಿಗೆ ನಿರೀಕ್ಷಿತ ಯಶ. ಅಧ್ಯಾಪಕರು ವರ್ಗಾವಣೆಯನ್ನು ನಿರೀಕ್ಷಿಸಬಹುದು. ವಾಹನ ದುರಸ್ತಿಗೆ ಖರ್ಚು. ಶುಭಸಂಖ್ಯೆ: 1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net