ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ಸಾಲಗಾರರ ಕಾಟ

Nitya Bhavisya Vijayavani
Published on

ಮೇಷ:ರೋಗ ಭಯ ಕಾಡಲಿದೆ. ತಂದೆ-ತಾಯಿಯ ಗೃಹ ನಿರ್ವಣದಲ್ಲಿ ಅನಿರೀಕ್ಷಿತ ಸಮಸ್ಯೆ. ಉದ್ಯೋಗದಲ್ಲಿ ಲಾಭದಾಯಕ ದಿನ. ಶುಭಸಂಖ್ಯೆ: 9

ವೃಷಭ:ಅನಾರೋಗ್ಯ ಸಮಸ್ಯೆ ಎದುರಾದೀತು, ಎಚ್ಚರ.ಅನಿರೀಕ್ಷಿತ ಪ್ರಯಾಣ ಮಾಡಬೇಕಾಗುವುದು. ಸಾಲ ಮಾಡುವ ಆಲೋಚನೆ. ಶುಭಸಂಖ್ಯೆ: 2

ಮಿಥುನ: ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ. ಫ್ಯಾನ್ಸಿ ಸ್ಟೋರ್ ಮಾಲೀಕರಿಗೆ ಲಾಭ. ಸಗಟು ವ್ಯಾಪಾರದಲ್ಲಿ ಹೊಸ ಹೂಡಿಕೆಗೆ ನಿರ್ಧಾರ. ಶುಭಸಂಖ್ಯೆ:5

ಕಟಕ:ಬಂಧುಗಳಿಂದ ಹಣ ಸಹಾಯ ಒದಗಿ ಬರಲಿದೆ. ಸಾಲಗಾರರ ಕಾಟ. ಶತ್ರುಗಳಿಂದ ನಿಮ್ಮ ಪ್ರಗತಿಗೆ ತೊಂದರೆಯಾಗಬಹುದು. ಶುಭಸಂಖ್ಯೆ:3

ಸಿಂಹ:ಮನೆ ಬದಲಾವಣೆ ಮಾಡುವ ಸಾಧ್ಯತೆ. ಕೋರ್ಟ್ ವ್ಯವಹಾರಗಳಲ್ಲಿ ಎಚ್ಚರ. ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಹಿನ್ನಡೆಯಾದೀತು. ಶುಭಸಂಖ್ಯೆ:8

ಕನ್ಯಾ: ಉದ್ಯೋಗಸ್ಥ ಮಹಿಳೆಯರಿಗೆ ಅಧಿಕ ಒತ್ತಡ. ಆತ್ಮವಿಶ್ವಾಸದಿಂದ ಕಷ್ಟನಷ್ಟಗಳು ದೂರಾಗಲಿವೆ. ಬ್ಯಾಂಕ್ ಉದ್ಯಮಿಗಳಿಗೆ ಶುಭ. ಶುಭಸಂಖ್ಯೆ:4

ತುಲಾ: ವ್ಯಾಪಾರ ವ್ಯವಹಾರದಲ್ಲಿ ನಷ್ಟವಾದೀತು. ಉದ್ಯೋಗ ಬದಲಿಸಲು ನಿರ್ಧಾರ. ಮಾನಸಿಕ ಒತ್ತಡ ನಿವಾರಣೆಗೆ ದಾರಿ ಸಿಗಲಿದೆ. ಶುಭಸಂಖ್ಯೆ:7

ವೃಶ್ಚಿಕ: ಪತ್ರ ವ್ಯವಹಾರಗಳಲ್ಲಿ ಗೊಂದಲ ಆಗಬಹುದು. ವ್ಯಾಪಾರೋದ್ಯಮದಲ್ಲಿ ಆತಂಕ. ಗೃಹ ಕಾರ್ಯದ ಯೋಜನೆಯಲ್ಲಿ ಯಶಸ್ವಿ. ಶುಭಸಂಖ್ಯೆ: 6

ಧನುಸ್ಸು: ಪೊಲೀಸ್ ಇಲಾಖೆಯವರಿಗೆ ಒಳ್ಳೆಯ ದಿನ. ಕೆಲಸ ಕಾರ್ಯಗಳು ಸುಗಮವಾಗಿ ಸಾಗುವವು. ವಿವಾಹ ಕಾರ್ಯಗಳಲ್ಲಿ ವಿಘ್ನ. ಶುಭಸಂಖ್ಯೆ:4

ಮಕರ: ಪತ್ನಿಗೆ ಉದ್ಯೋಗ ಭಾಗ್ಯ ಒದಗಿ ಬರುವುದು. ಕುಟುಂಬದಲ್ಲಿ ಅಶಾಂತಿ. ವಿದ್ಯಾರ್ಥಿಗಳಿಗೆ ಓದಿನಲ್ಲಿ ಆಸಕ್ತಿ ಕಡಿಮೆಯಾಗಲಿದೆ. ಶುಭಸಂಖ್ಯೆ:1

ಕುಂಭ: ದುಡುಕುತನದಿಂದ ಕೆಲಸದಲ್ಲಿ ನಷ್ಟ. ತಾಯಿಗೆ ಅನಾರೋಗ್ಯ ಕಾಡಬಹುದು. ಹೃದ್ರೋಗಿಗಳು ಆರೋಗ್ಯದ ಕಡೆ ಗಮನಹರಿಸಿ. ಶುಭಸಂಖ್ಯೆ:7

ಮೀನ: ಪಾಲುದಾರಿಕೆಯಲ್ಲಿ ಲಾಭ ಬರಲಿದೆ. ಹಠಮಾರಿತನದಿಂದ ತೊಂದರೆಯಾಗಬಹುದು. ಆತುರದ ನಿರ್ಧಾರದಿಂದ ಅಪಾಯ. ಶುಭಸಂಖ್ಯೆ: 6

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net