ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ಪತ್ನಿಯಿಂದ ಸಾಲ ತೀರಿಸಲು ನೆರವು

Nitya Bhavisya Vijayavani
Published on

ಮೇಷ: ಹೂಡಿಕೆಯ ವಿಚಾರದಲ್ಲಿ ಎಚ್ಚರಿಕೆ ವಹಿಸಿ. ಮರಗೆಲಸ ಮಾಡುವವರಿಗೆ ಉತ್ತಮ ಆದಾಯ. ಶುಭ ಕಾರ್ಯದ ಸಂಭ್ರಮ. ಶುಭಸಂಖ್ಯೆ: 7

ವೃಷಭ: ವಿವಿಧ ಮೂಲಗಳಿಂದ ಧನಾದಾಯ. ಕೇಂದ್ರ ಸರ್ಕಾರಿ ಉದ್ಯೋಗಿಗಳು ಪ್ರಶಂಸೆಗೆ ಪಾತ್ರರಾಗುವಿರಿ. ಪ್ರಯಾಣದಲ್ಲಿ ಎಚ್ಚರಿಕೆ. ಶುಭಸಂಖ್ಯೆ:1

ಮಿಥುನ: ಸಂದಭೋಚಿತ ವಿವೇಚನೆಯಿಂದ ಕಾರ್ಯಗಳಲ್ಲಿ ಜಯ. ಮಾನಸಿಕ ಸಂತುಷ್ಟಿ. ವ್ಯವಹಾರದಲ್ಲಿ ನಿರೀಕ್ಷೆಗೂ ಮೀರಿ ಸಫಲತೆ. ಶುಭಸಂಖ್ಯೆ:9

ಕಟಕ: ಸ್ತ್ರೀ ಮೂಲಕ ಕಲಹ. ಕೌಟುಂಬಿಕವಾಗಿ ಅಶಾಂತಿ ತಲೆದೋರೀತು. ಆಸ್ತಿ ವಿಚಾರಕ್ಕೆ ಸಂಬಂಧಿಸಿದ ಕೆಲಸ ಕಾರ್ಯಗಳಲ್ಲಿ ಜಯ. ಶುಭಸಂಖ್ಯೆ:3

ಸಿಂಹ: ಪತಿಯ ಆರೋಗ್ಯದಲ್ಲಿ ಎಚ್ಚರಿಕೆ. ಪಾಲುದಾರಿಕೆ ವ್ಯವಹಾರ ಪ್ರಾರಂಭಿಸಲು ಸುದಿನ. ಉದರಬಾಧೆ ಬಾಧಿಸುವ ಸಾಧ್ಯತೆಯಿದೆ. ಶುಭಸಂಖ್ಯೆ:1

ಕನ್ಯಾ: ಆಪ್ತರ ಸಹಕಾರ ಲಭ್ಯವಾಗುವುದು. ಖಾಸಗಿ ಉದ್ಯೋಗದಲ್ಲಿ ಉನ್ನತಿ ಸಾಧಿಸುವಿರಿ. ಸಂದರ್ಶನದಲ್ಲಿ ಯಶಸ್ಸು ಗಳಿಸಲಿದ್ದೀರಿ. ಶುಭಸಂಖ್ಯೆ: 6

ತುಲಾ: ಮನಸ್ಸಿನ ಚಿಂತೆ ದೂರವಾಗುತ್ತದೆ. ರಾಜಕಾರಣಿಗಳಿಗೆ ಜನರಿಂದ ಪ್ರಶಂಸೆ ಸಿಗುತ್ತದೆ. ಅನಗತ್ಯ ವಿಷಯಗಳತ್ತ ಆಸಕ್ತಿ. ಶುಭಸಂಖ್ಯೆ:3

ವೃಶ್ಚಿಕ: ಕಾನೂನಾತ್ಮಕ ಹೋರಾಟದಲ್ಲಿ ಹಿನ್ನಡೆಯಾಗಲಿದೆ. ಅಧಿಕ ದ್ವಂದ್ವ, ಗೊಂದಲಗಳು ಕಾಡುತ್ತವೆ. ಶಾಂತಿಯಿಂದ ವ್ಯವಹರಿಸಿ. ಶುಭಸಂಖ್ಯೆ:8

ಧನುಸ್ಸು: ಮಗಳ ವಿವಾಹದ ಪ್ರಯತ್ನದಲ್ಲಿ ಕಾರ್ಯಸಿದ್ಧಿ. ಪತ್ನಿಯಿಂದ ಸಾಲ ತೀರಿಸಲು ನೆರವು. ಕೌಟುಂಬಿಕ ಸಂಕಷ್ಟಗಳಿಗೆ ಪರಿಹಾರ. ಶುಭಸಂಖ್ಯೆ:5

ಮಕರ: ಗೃಹ ನಿರ್ವಣಕ್ಕೆ ಆರ್ಥಿಕ ಬಿಕ್ಕಟ್ಟು. ನ್ಯಾಯಾಲಯದಲ್ಲಿ ನಿಮ್ಮ ಪರವಾದ ವಾದದಲ್ಲಿ ಹಿನ್ನಡೆ. ನಿರೀಕ್ಷೆಗೂ ಮೀರಿ ಸಂಪಾದನೆ. ಶುಭಸಂಖ್ಯೆ:3

ಕುಂಭ: ಮಕ್ಕಳ ವಿಚಾರದಲ್ಲಿ ಪ್ರಗತಿಯಾಗಲಿದೆ. ಕೋರ್ಟು ವಿಚಾರದಲ್ಲಿ ಜಯ ನಿಮ್ಮೆಡೆಗಿದೆ. ಸಾಮಾಜಿಕ ಜೀವನದಲ್ಲಿ ಉನ್ನತಿ. ಶುಭಸಂಖ್ಯೆ:7

ಮೀನ: ಪದೇಪದೆ ಅನಾರೋಗ್ಯ ಸಮಸ್ಯೆಯಿಂದ ಅಧಿಕ ಚಿಂತೆ. ಮಕ್ಕಳಿಂದ ಸಹಾಯ. ಗೃಹೋಪಯೋಗಿ ವಸ್ತು ಖರೀದಿಸುವಿರಿ. ಶುಭಸಂಖ್ಯೆ:8

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net