ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ದೂರದಿಂದ ಶುಭ ಸುದ್ದಿ ಕೇಳುವಿರಿ

Nitya-Bhavisya-FILEminimizer-2
Published on

ಮೇಷ: ಕೃಷಿ ಬೆಳೆ ನಷ್ಟದ ಬಗ್ಗೆ ಚಿಂತೆ. ವಿದ್ಯಾರ್ಥಿಗಳಿಗೆ ಮರೆವಿನ ಸಮಸ್ಯೆ ಕಾಡುವುದು. ಸಾಹಿತಿಗಳಿಗೆ ವಿಶೇಷ ಬಹುಮಾನ ಸಿಗಲಿದೆ. ಶುಭಸಂಖ್ಯೆ: 5

ವೃಷಭ: ಸರ್ಕಾರಿ ನೌಕರರಿಗೆ ವೇತನ ಜಾಸ್ತಿಯಾಗಲಿದೆ. ತಂದೆಯ ಆರೋಗ್ಯದಲ್ಲಿ ಏರಿಳಿತ. ಧರ್ಮ ಕಾರ್ಯದಲ್ಲಿ ಸಮಾಧಾನ. ಶುಭಸಂಖ್ಯೆ: 8

ಮಿಥುನ: ಆಸ್ತಿ ಗಳಿಕೆ ಪ್ರಯತ್ನ ಸಫಲವಾಗುವುದು. ಉದ್ಯೋ ಗಸ್ಥ ಮಹಿಳೆಯರಿಗೆ ವಿಶ್ರಾಂತಿಯ ಅಗತ್ಯವಿದೆ. ವಾಹನ ಮಾಲೀಕರಿಗೆ ಲಾಭ. ಶುಭಸಂಖ್ಯೆ:1

ಕಟಕ: ಉದ್ಯೋಗದ ನಿಮಿತ್ತ ಸ್ಥಳಾಂತರ. ಕಚೇರಿಯಲ್ಲಿ ಉದ್ವಿಗ್ನತೆಯನ್ನು ಕಡಿಮೆ ಮಾಡಿಕೊಳ್ಳಿ. ದೂರದಿಂದ ಶುಭ ಸುದ್ದಿ ಕೇಳುವಿರಿ. ಶುಭಸಂಖ್ಯೆ: 9

ಸಿಂಹ: ಐಟಿ ಅಧಿಕಾರಿಗಳಿಗೆ ವರ್ಗಾವಣೆಯಾಗುವ ಸಾಧ್ಯತೆ. ವಿದ್ಯಾಭ್ಯಾಸದಲ್ಲಿ ಗೊಂದಲ. ಮನೆ ಖರೀದಿಗೆ ತಾಯಿಯಿಂದ ಸಹಕಾರ.ಶುಭಸಂಖ್ಯೆ: 3

ಕನ್ಯಾ: ನ್ಯಾಯಾಲಯದಲ್ಲಿ ಜಯ ಲಭ್ಯ. ವಂಶಾಧಾರಿತ ಉದ್ಯೋಗದಲ್ಲಿ ಯಶಸ್ಸು. ವಿವಾದಗಳಿಂದ ದೂರವಿರಿ. ಸೈನಿಕ ವೃತ್ತಿಗೆ ಕರೆ. ಶುಭಸಂಖ್ಯೆ:4

ತುಲಾ: ವಿಚ್ಛೇದಿತರಿಗೆ ವಿವಾಹ ಯೋಗ. ಆರೋಗ್ಯಕ್ಕಾಗಿ ಹಣ ವ್ಯಯ. ಆಸ್ತಿಯ ವಿಚಾರವಾಗಿ ಸಹೋದರರೊಂದಿಗೆ ಘರ್ಷಣೆ. ಶುಭಸಂಖ್ಯೆ: 6

ವೃಶ್ಚಿಕ: ಗಾರ್ವೆಂಟ್ಸ್ ಕೆಲಸದಲ್ಲಿ ಒತ್ತಡ. ಮಾಡೆಲಿಂಗ್ ವೃತ್ತಿದಾರರಿಗೆ ಹಣ ಬರಲಿದೆ. ಕೆಲಸಗಾರರ ಸಮಸ್ಯೆ. ಖರೀದಿಯಲ್ಲಿ ಮೋಸ. ಶುಭಸಂಖ್ಯೆ: 5

ಧನುಸ್ಸು: ಪಿತ್ರಾರ್ಜಿತ ಆಸ್ತಿಯಿಂದ ಆದಾಯ. ಯಂತ್ರೋಪ ಕರಣ ಬಳಕೆಯಲ್ಲಿ ಎಚ್ಚರ. ಮಹಿಳೆಯರಿಗೆ ಆತ್ಮವಿಶ್ವಾಸ ತುಂಬುವ ಘಟನೆ. ಶುಭಸಂಖ್ಯೆ:4

ಮಕರ: ಭಾಷಣ ವೃತ್ತಿಯಲ್ಲಿ ಗಳಿಕೆ. ಸಂಶೋಧಕರಿಗೆ ಶುಭ. ದೂರ ಪ್ರಯಾಣ ಯೋಗ. ಅರಣ್ಯ ಇಲಾಖೆ ಉದ್ಯೋಗಿಗಳಿಗೆ ವರ್ಗಾವಣೆ. ಶುಭಸಂಖ್ಯೆ: 7

ಕುಂಭ: ಆದಾಯದಷ್ಟೇ ಖರ್ಚು. ಕುಲದೇವತಾ ಕಾರ್ಯಗಳಲ್ಲಿ ಭಾಗಿಯಾಗುವಿರಿ. ನೂತನ ಮನೆ ಖರೀದಿಗೆ ನಿರ್ಧಾರ ಮಾಡುವಿರಿ. ಶುಭಸಂಖ್ಯೆ: 3

ಮೀನ: ಆದಾಯ ತೆರಿಗೆ ಉದ್ಯೋಗದಲ್ಲಿ ಬದಲಾವಣೆ. ಕಟ್ಟಡ ನಿರ್ಮಾಣ ಅರ್ಧಕ್ಕೆ ನಿಲ್ಲುತ್ತದೆ. ವೈದ್ಯಕೀಯ ವಿದ್ಯಾರ್ಥಿಗಳಿಗೆ ಯಶಸ್ಸು. ಶುಭಸಂಖ್ಯೆ:1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net