ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ಸಾಲದಿಂದ ಮುಕ್ತಿ ಸಿಗುವುದು

Nitya Bhavisya Vijayavani
Published on

ಮೇಷ: ಹಣ ಬಂದರೂ ಉಳಿಯುವುದಿಲ್ಲ. ಆಧ್ಯಾತ್ಮಿಕ ವಿದ್ಯಾಭ್ಯಾಸದಲ್ಲಿ ಆಸಕ್ತಿ ತಾಳುವಿರಿ. ಮಾನಸಿಕ ಒತ್ತಡ ಹೆಚ್ಚಾಗಲಿದೆ. ಶುಭಸಂಖ್ಯೆ: 5

ವೃಷಭ: ಸಾಲದಿಂದ ಮುಕ್ತಿ ಸಿಗುವುದು. ದಂಡ ಕಟ್ಟುವಿರಿ. ಗೆಳೆಯರ ಕಷ್ಟದಲ್ಲಿ ಭಾಗಿಯಾಗುವಿರಿ. ತೀರ್ಥಯಾತ್ರಾ ದರ್ಶನ. ಶುಭಸಂಖ್ಯೆ:1

ಮಿಥುನ: ಆಲಸ್ಯ ಮನೋಭಾವ ಬೇಡ. ಶ್ರಮಕ್ಕೆ ತಕ್ಕ ಫಲವಿದೆ. ದೇವತಾ ಕಾರ್ಯಗಳಲ್ಲಿ ಭಾಗಿ. ನೌಕರಿಯಲ್ಲಿ ಹೆಚ್ಚಿನ ಜವಾಬ್ದಾರಿ. ಶುಭಸಂಖ್ಯೆ: 9

ಕಟಕ:ಅರಣ್ಯ ಉತ್ಪನ್ನಗಳ ವ್ಯಾಪಾರದಲ್ಲಿ ಸಾಧಾರಣ ಲಾಭ. ಹಿರಿಯ ಅಧಿಕಾರಿಗಳಿಂದ ನಿಂದನೆ. ಪತಿ-ಪತ್ನಿಯರಲ್ಲಿ ವಿರಸ. ಶುಭಸಂಖ್ಯೆ: 4

ಸಿಂಹ: ಸ್ತ್ರೀಯರು ತಾಳ್ಮೆಯಿಂದ ವರ್ತಿಸಿ. ಹಣಕಾಸಿನ ವಿಷಯದಲ್ಲಿ ಎಚ್ಚರಿಕೆ ಇರಲಿ. ಅಮೂಲ್ಯ ವಸ್ತು ಖರೀದಿಗೆ ದುಂದುವೆಚ್ಚ. ಶುಭಸಂಖ್ಯೆ:7

ಕನ್ಯಾ: ಸೌಜನ್ಯದಿಂದ ಇರಿ. ಮಕ್ಕಳಿಂದ ನೆಮ್ಮದಿ. ಅಕಾಲ ಭೋಜನದಿಂದ ಅನಾರೋಗ್ಯ. ವಿಚ್ಛೇದಿತರಿಗೆ ಮರುವಿವಾಹ . ಚಿಂತೆ. ಶುಭಸಂಖ್ಯೆ:6

ತುಲಾ:ಆಹಾರ ಸೇವನೆಯಲ್ಲಿ ವ್ಯತ್ಯಾಸವಾಗುವುದು. ಸಾಲ ಮರುಪಾವತಿಸುವ ಸಾಧ್ಯತೆ. ಕುತಂತ್ರದಿಂದ ಪದವಿ ಕೈ ತಪ್ಪಬಹುದು. ಶುಭಸಂಖ್ಯೆ: 2

ವೃಶ್ಚಿಕ: ಅತಿಯಾದ ಭಯ. ವಾದ-ವಿವಾದಗಳಲ್ಲಿ ಸೋಲು. ದೂರ ಪ್ರಯಾಣ. ವಿದೇಶ ವ್ಯಾಪಾರ ವ್ಯವಹಾರಗಳಲ್ಲಿ ನಿರೀಕ್ಷಿತ ಲಾಭ. ಶುಭಸಂಖ್ಯೆ:8

ಧನುಸ್ಸು: ದೃಢ ನಿರ್ಧಾರ ಕೈಗೊಳ್ಳುವಲ್ಲಿ ಗೊಂದಲ. ಪರಸ್ತ್ರೀಯಿಂದ ತೊಂದರೆ. ಪತಿಯೊಂದಿಗೆ ಕಲಹ ಸಂಭವ. ಮಾತುಗಳಿಂದ ಅನರ್ಥ. ಶುಭಸಂಖ್ಯೆ:3

ಮಕರ: ಇಷ್ಟ ವಸ್ತುಗಳ ಖರೀದಿ. ಸರ್ಕಾರಿ ಕೆಲಸಗಳಲ್ಲಿ ಜಯ. ಪಿತ್ರಾರ್ಜಿತ ಆಸ್ತಿ ಗಳಿಕೆ. ಭದ್ರತಾ ಇಲಾಖೆಯ ಅಧಿಕಾರಿಗಳಿಗೆ ವರ್ಗಾವಣೆ. ಶುಭಸಂಖ್ಯೆ: 5

ಕುಂಭ: ವಾಹನ ಚಾಲಕರಿಗೆ ತೊಂದರೆಯಾಗಬಹುದು, ಎಚ್ಚರ. ಗುರು ಹಿರಿಯರಿಂದ ಶುಭ ಹಾರೈಕೆ. ಪ್ರಿಯ ಜನರ ಭೇಟಿಯಾಗಲಿದೆ. ಶುಭಸಂಖ್ಯೆ: 4

ಮೀನ: ಮಾನಸಿಕ ಒತ್ತಡ ಹೆಚ್ಚಾಗಲಿದೆ. ಪಾಲುದಾರಿಕೆಯ ಮಾತುಕತೆ ವಿಫಲ. ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ. ಸ್ವಜನ ಪ್ರೀತಿ. ಶುಭಸಂಖ್ಯೆ: 4

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net