ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ಸಜ್ಜನರ ಸಂಪರ್ಕದಿಂದ ಸಂತೋಷ

astrology
Published on

ಮೇಷ: ಕಾರ್ಖಾನೆ ಮಾಲೀಕರಿಗೆ ಕೆಲಸಗಾರರ ಕೊರತೆ ಬಗೆಹರಿಯುತ್ತದೆ. ಖರ್ಚಿನಲ್ಲಿ ಹಿಡಿತವಿರಲಿ. ಭೂ ವ್ಯವಹಾರದಲ್ಲಿ ಲಾಭವಿದೆ. ಶುಭಸಂಖ್ಯೆ: 9

ವೃಷಭ: ಪ್ರಯಾಣದಿಂದ ಆರ್ಥಿಕ ಲಾಭವಾಗಲಿದೆ. ಸಜ್ಜನರ ಸಂಪರ್ಕದಿಂದ ಸಂತೋಷ. ಧಾರ್ವಿುಕ ಕ್ಷೇತ್ರದ ವೃತ್ತಿಪರರಿಗೆ ಹಣ ಲಾಭ. ಶುಭಸಂಖ್ಯೆ: 8

ಮಿಥುನ: ಆರೋಗ್ಯದಲ್ಲಿ ಚೇತರಿಕೆ ಉಂಟಾಗುತ್ತದೆ. ಪತ್ನಿಯ ಸಲಹೆ ಪಡೆದು ಸಮಸ್ಯೆಯಿಂದ ಹೊರಬರುವಿರಿ. ಕಲಾವಿದರಿಗೆ ಸನ್ಮಾನ. ಶುಭಸಂಖ್ಯೆ:5

ಕಟಕ: ಸಂತಾನಾಕಾಂಕ್ಷಿಗಳಿಗೆ ಶುಭ ಸೂಚನೆ. ಪಾಲುದಾರಿಕೆಯಲ್ಲಿ ಆದಾಯ. ನಿಮ್ಮ ಪರಿಶ್ರಮಕ್ಕೆ ಹಿರಿಯ ಅಧಿಕಾರಿಗಳಿಂದ ಪ್ರಶಂಸೆ. ಶುಭಸಂಖ್ಯೆ: 7

ಸಿಂಹ: ಬೇಕರಿ ವ್ಯಾಪಾರದಲ್ಲಿ ಲಾಭ. ಸ್ವಉದ್ಯೋಗಿ ಮಹಿಳೆಯರಿಗೆ ಅನಿರೀಕ್ಷಿತ ಧನ ಲಾಭ. ಕುಟುಂಬದಲ್ಲಿ ಆರ್ಥಿಕ ಸಮಸ್ಯೆ ನಿವಾರಣೆ. ಶುಭಸಂಖ್ಯೆ:1

ಕನ್ಯಾ: ಅವಿವಾಹಿತರಿಗೆ ಕಂಕಣ ಬಲ ಒದಗಲಿದೆ. ವಾಹನ ಮಾಲೀಕರಿಗೆ ಲಾಭ. ಭತ್ತ ಮತ್ತು ತೆಂಗು ಬೇಸಾಯದಲ್ಲಿ ಉತ್ತಮ ಆದಾಯ. ಶುಭಸಂಖ್ಯೆ:3

ತುಲಾ: ಸಗಟು ವ್ಯಾಪಾರದಲ್ಲಿ ಲಾಭ. ಪೀಠೋಪಕರಣ, ಹಣ್ಣು, ಹಾಲು ವ್ಯಾಪಾರದಲ್ಲಿ ಆದಾಯ. ಕುಟುಂಬದೊಂದಿಗೆ ವಿದೇಶ ಪ್ರವಾಸ.ಶುಭಸಂಖ್ಯೆ:9

ವೃಶ್ಚಿಕ: ಇಲಾಖೆ ಪರೀಕ್ಷೆಗಳಲ್ಲಿ ತೇರ್ಗಡೆ. ಲೋಹಗಳ ವ್ಯಾಪಾರದಲ್ಲಿ ನಷ್ಟವಿಲ್ಲ. ಹೊಸ ಪಾಲುದಾರರ ಜತೆ ಉದ್ಯಮ ಸ್ಥಾಪನೆಗೆ ನಿರ್ಧಾರ. ಶುಭಸಂಖ್ಯೆ:9

ಧನುಸ್ಸು: ಬ್ಯಾಂಕ್ ಉದ್ಯೋಗಿಗಳಿಗೆ ಶುಭದಿನ. ರಾಜಕೀಯ ಪ್ರವೇಶಿಸಲು ಸಕಾಲ. ಕಲಾವಿದರಿಗೆ ಆತ್ಮವಿಶ್ವಾಸದ ಕೊರತೆ ಕಾಡಬಹುದು. ಶುಭಸಂಖ್ಯೆ:6

ಮಕರ: ಬರಹಗಾರರಿಗೆ ಬೇಡಿಕೆ ಹೆಚ್ಚಲಿದೆ. ಕಮಿಷನ್ ವ್ಯವಹಾರದಲ್ಲಿ ಆದಾಯ. ಆಸ್ತಿ ವಿಚಾರದಲ್ಲಿ ಸಹೋದರರೊಂದಿಗೆ ರಾಜಿ. ಶುಭಸಂಖ್ಯೆ: 4

ಕುಂಭ: ನ್ಯಾಯಾಲಯದ ಕೆಲಸದಲ್ಲಿ ವಿಳಂಬ. ವೈದ್ಯಕೀಯ, ತಾಂತ್ರಿಕ ವಿದ್ಯಾರ್ಥಿಗಳಿಗೆ ಪ್ರಯತ್ನ ಅಗತ್ಯ. ಹೈನುಗಾರಿಕೆಯಲ್ಲಿ ಲಾಭ. ಶುಭಸಂಖ್ಯೆ: 8

ಮೀನ: ವ್ಯವಹಾರದಲ್ಲಿ ಲಾಭ. ಮಹಿಳಾ ರಾಜಕಾರಣಿಗಳಿಗೆ ಪದವಿ ಪ್ರಾಪ್ತಿ. ಹೃದಯ ಸಂಬಂಧಿ ರೋಗಿಗಳು ವೈದ್ಯರ ಸಲಹೆ ಪಾಲಿಸಿ. ಶುಭಸಂಖ್ಯೆ:8

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net