

ಮೇಷ: ಮರಳು, ಸಿಮೆಂಟ್ ವ್ಯಾಪಾರದಲ್ಲಿ ಧನ ನಷ್ಟ. ಮಹಿಳೆಯರಿಗೆ ಮನಕ್ಲೇಷ. ಅಮೂಲ್ಯ ವಸ್ತುಗಳ ಕಳವು. ಮಾತಿನ ಚಕಮಕಿ. ಶುಭಸಂಖ್ಯೆ:1
ವೃಷಭ:ಲೇವಾದೇವಿ ವ್ಯವಹಾರದಲ್ಲಿ ಮೋಸ. ಕುಲದೇವರ ದೇವಾಲಯಕ್ಕೆ ಭೇಟಿ ಕೊಡುವಿರಿ. ಸ್ನೇಹಿತನ ಆರೋಗ್ಯದಲ್ಲಿ ಏರುಪೇರು. ಶುಭಸಂಖ್ಯೆ:3
ಮಿಥುನ: ಪುಸ್ತಕ ವ್ಯಾಪಾರಿಗಳಿಗೆ ಧನಲಾಭವಾಗುವುದು. ವಾಹನ ಖರೀದಿ ಯೋಗವಿದೆ. ಹಿರಿಯರಿಂದ ಉಪದೇಶ ಕೇಳಬೇಕಾಗುವುದು. ಶುಭಸಂಖ್ಯೆ: 9
ಕಟಕ:ಗಣಕ ಯಂತ್ರದಿಂದ ಲಾಭವಿದೆ. ಅಲಂಕಾರಿಕ ವಸ್ತು ಖರೀದಿಯಿಂದ ಖರ್ಚು ಜಾಸ್ತಿಯಾಗುವುದು. ವೃಥಾ ಧನ ನಷ್ಟವಾಗಿ ಬೇಸರ. ಶುಭಸಂಖ್ಯೆ: 1
ಸಿಂಹ: ಮೇಲಧಿಕಾರಿಗಳಿಂದ ತೊಂದರೆ. ಶರೀರದಲ್ಲಿ ಉಷ್ಣಾಂಶ ಹೆಚ್ಚುವುದು. ಸಾಲ ಮರುಪಾವತಿಗೆ ದಾರಿ ದೊರೆತು ಸಮಾಧಾನ. ಶುಭಸಂಖ್ಯೆ: 7
ಕನ್ಯಾ: ಭೂಮಿ ಖರೀದಿಸುವ ಯೋಗ ಕೂಡಿಬಂದಿದೆ. ಸಹೋದರರ ಜೊತೆ ಕಲಹ ಉಂಟಾಗುವುದು. ಅಧಿಕಾರಿಗಳಿಂದ ಪ್ರಶಂಸೆ. ಶುಭಸಂಖ್ಯೆ:4
ತುಲಾ: ಮಕ್ಕಳ ವಿಷಯದಲ್ಲಿ ಮಾನಸಿಕ ವೇದನೆ ಅನುಭವಿಸು ವಿರಿ. ಅಗ್ನಿಭಯವಿದೆ, ಎಚ್ಚರ. ಕುಟುಂಬದಲ್ಲಿ ಅಶಾಂತಿಯ ವಾತಾವರಣ. ಶುಭಸಂಖ್ಯೆ:3
ವೃಶ್ಚಿಕ: ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು. ಅನಗತ್ಯವಾಗಿ ಮಾತಿನ ಚಕಮಕಿ. ಆರಕ್ಷಕ ವೃತ್ತಿಯವರಿಗೆ ಬಡ್ತಿಯಲ್ಲಿ ಅಡಚಣೆ. ಶುಭಸಂಖ್ಯೆ: 7
ಧನುಸ್ಸು: ಹೊಸ ಯೋಜನೆಗಳನ್ನು ಪ್ರಾರಂಭಿಸಲು ಸುಸಮಯ. ವ್ಯವಸಾಯದಲ್ಲಿ ಲಾಭವಾಗುವುದು. ವ್ಯಾಪಾರದಲ್ಲಿ ಉತ್ತಮ ಆದಾಯ. ಶುಭಸಂಖ್ಯೆ: 8
ಮಕರ: ಅನಿರೀಕ್ಷಿತವಾಗಿ ಹಣ ಪ್ರಾಪ್ತಿಯಾಗಲಿದೆ. ಗುರುಹಿರಿಯರ ದರ್ಶನ. ಬಂಧುಗಳಿಂದ ಮಾನ್ಯತೆ. ಟ್ರಾವೆಲ್ಸ್ನವರಿಗೆ ಅಧಿಕ ಲಾಭ. ಶುಭಸಂಖ್ಯೆ:5
ಕುಂಭ:ಅನಗತ್ಯ ಅಲೆದಾಟ ಮಾಡಬೇಕಾಗುವುದು. ಊಟಕ್ಕೂ ಪುರುಸೊತ್ತು ಇರದಷ್ಟು ಒತ್ತಡ. ಹೊಸ ಕೆಲಸ ದೊರೆತು ಸಮಾಧಾನ. ಶುಭಸಂಖ್ಯೆ:2
ಮೀನ:ಶರೀರದಲ್ಲಿ ತಳಮಳ ಅನುಭವಿಸುವಿರಿ. ವೈದ್ಯರ ಭೇಟಿಯಾಗಲಿದೆ. ಅತಿಯಾದ ನೋವು, ಬೇಸರ. ಶತ್ರುವಿನಿಂದ ತೊಂದರೆ. ಶುಭಸಂಖ್ಯೆ: 1