ದಿನ ಭವಿಷ್ಯ: ಈ ರಾಶಿಯವರಿಗಿಂದು ಹಣಕಾಸಿನ ಸ್ಥಿತಿ ಉತ್ತಮವಾಗಿರಲಿದೆ

Nitya Bhavisya Vijayavani
Published on

ಮೇಷ: ಉದ್ಯೋಗಾಕಾಂಕ್ಷಿಗಳಿಗೆ ನೆಮ್ಮದಿಯ ದಿನ. ಹಣಕಾಸಿನ ಸ್ಥಿತಿ ಉತ್ತಮ. ಪ್ರಯಾಣದಿಂದ ಆರೋಗ್ಯಕ್ಕೆ ತೊಂದರೆ ಆಗಬಹುದು. ಶುಭಸಂಖ್ಯೆ: 5

ವೃಷಭ: ಸಮಾಜದಲ್ಲಿ ಪ್ರತಿಷ್ಠಿತ ಸ್ಥಾನ. ಖರ್ಚು ಸರಿದೂಗಿಸಲು ಸಾಹಸ ಪಡಬೇಕು. ಸಾರಿಗೆ ವಹಿವಾಟು ನಡೆಸುತ್ತಿರುವವರಿಗೆ ಲಾಭ. ಶುಭಸಂಖ್ಯೆ:1

ಮಿಥುನ: ರಾಜಕೀಯ ಕ್ಷೇತ್ರದವರಿಗೆ ಪ್ರಗತಿ. ಶಾರೀರಿಕ ಗಾಯ. ಅತಿಯಾದ ಆತ್ಮವಿಶ್ವಾಸದಿಂದ ಸಮಸ್ಯೆ ತಲೆದೋರಬಹುದು, ಹುಷಾರು. ಶುಭಸಂಖ್ಯೆ: 8

ಕಟಕ: ದಾಖಲೆ ಪತ್ರಗಳ ವ್ಯವಹಾರದಲ್ಲಿ ಕಾರ್ಯಸಿದ್ಧಿ. ಅಪರೂಪದ ಬಂಧುಗಳ ಆಗಮನದಿಂದ ಕುಟುಂಬದಲ್ಲಿ ಸಂತಸದ ಕ್ಷಣಗಳು. ಶುಭಸಂಖ್ಯೆ: 8

ಸಿಂಹ: ಸ್ತ್ರೀಯರ ಮಾಲೀಕತ್ವದ ಅಂಗಡಿಯಿಂದ ಧನ ಲಾಭ. ಗ್ರಂಥ ರಚನೆಯಲ್ಲಿ ಆಸಕ್ತಿ ತಾಳುವಿರಿ. ಭೂಮಿ ಖರೀದಿಸುವ ಯೋಗ. ಶುಭಸಂಖ್ಯೆ: 6

ಕನ್ಯಾ: ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಅನುಕೂಲ. ಕೃಷಿಕರಿಗೆ ನಿರೀಕ್ಷಿಸಿದ್ದಕ್ಕಿಂತ ಅಧಿಕ ಇಳುವರಿ. ಕೆಲಸದ ಒತ್ತಡದಿಂದ ದೇಹಯಾಸ. ಶುಭಸಂಖ್ಯೆ: 3

ತುಲಾ: ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಖರ್ಚು. ಸ್ನೇಹಿತರೊಂದಿಗೆ ವಾದ ವಿವಾದ. ಸಾಲ ಮರುಪಾವತಿ ಮಾಡುವುದು ಸಮಸ್ಯೆಯಾಗಲಿದೆ. ಶುಭಸಂಖ್ಯೆ: 9

ವೃಶ್ಚಿಕ:  ಔಷಧ ವ್ಯಾಪಾರಿಗಳಿಗೆ ಗೊಂದಲ. ಮಕ್ಕಳಿಂದ ಮಾನಸಿಕ ಕಿರಿಕಿರಿ. ತಲೆ ನೋವಿನಿಂದ ಕಿರಿಕಿರಿ. ಪೋಷಕರಿಗೆ ಶಸ್ತ್ರ ಚಿಕಿತ್ಸೆ ಸಾಧ್ಯತೆ. ಶುಭಸಂಖ್ಯೆ: 1

ಧನಸ್ಸು: ಪ್ರವಾಸದಿಂದ ಮಾನಸಿಕ ಸಮಾಧಾನ. ಸಹೋದರಿಯರಿಂದ ಆಸ್ತಿ ವಿವಾದಕ್ಕೆ ಪರಿಹಾರ. ಸಂಗಾತಿಗೆ ಅನಾರೋಗ್ಯ ಕಾಡೀತು. ಶುಭಸಂಖ್ಯೆ: 8

ಮಕರ: ವಿದ್ಯಾರ್ಥಿಗಳಿಗೆ ಓದಿನಲ್ಲಿ ನಿರಾಸಕ್ತಿ. ತಾಯಿಯಿಂದ ಹೂಡಿಕೆಗೆ ಧನ ಸಹಾಯ. ಕೃಷಿ ಉತ್ಪನ್ನಗಳಿಂದ ನಿರೀಕ್ಷಿತ ಲಾಭ. ಶುಭಸಂಖ್ಯೆ:4

ಕುಂಭ: ನಿವೇಶನ ಖರೀದಿಯಲ್ಲಿ ಆತುರ ತೋರುವಿರಿ. ವಾಣಿಜ್ಯ ಮಳಿಗೆಗಳ ವ್ಯಾಪಾರದಲ್ಲಿ ಮುನ್ನಡೆ. ಮಾತಿನಲ್ಲಿ ಒರಟುತನ ಬೇಡ. ಶುಭಸಂಖ್ಯೆ:6

ಮೀನ: ಸರ್ಕಾರಿ ಕೆಲಸಗಳಿಗಾಗಿ ಹೆಚ್ಚು ವೆಚ್ಚವಾಗಲಿದೆ. ನಟರಿಗೆ ಹೆಚ್ಚಿನ ಅವಕಾಶಗಳು ದೊರೆಯುತ್ತವೆ. ಸ್ಥಿರಾಸ್ತಿ ಲಭ್ಯವಾಗುತ್ತದೆ. ಶುಭಸಂಖ್ಯೆ: 7

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net