

ಮೇಷ: ಲೇವಾದೇವಿ ವ್ಯವಹಾರದಲ್ಲಿ ಎಚ್ಚರಿಕೆಯಿಂದ ಇರಿ. ಜೇನು ಕೃಷಿಯಿಂದ ಹಣ ಬರಲಿದೆ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೇರ್ಗಡೆ. ಶುಭಸಂಖ್ಯೆ: 8
ವೃಷಭ: ತಾಂತ್ರಿಕ ಪರಿಣಿತರಿಗೆ ಕೃಷಿ ಕಡೆ ಒಲವು ಹೆಚ್ಚಾಗಲಿದೆ. ಮಹಿಳಾ ವೈದ್ಯರಿಗೆ ಹೆಚ್ಚಿದ ಬೇಡಿಕೆ. ನಿರ್ಧಾರ ಕೈಗೊಳ್ಳುವಲ್ಲಿ ಗೊಂದಲ. ಶುಭಸಂಖ್ಯೆ: 2
ಮಿಥುನ: ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಶತ್ರುಗಳಿಂದ ತೊಂದರೆ. ಹೊಸ ನಿವೇಶನ ಖರೀದಿಸುವಿರಿ. ಪುಸ್ತಕ ವ್ಯಾಪಾರಿಗಳಿಗೆ ಲಾಭ. ಶುಭಸಂಖ್ಯೆ: 9
ಕಟಕ: ಸಮಾಜಸೇವೆಯಿಂದ ರಾಜಕಾರಣಿಗಳಿಗೆ ಮನ್ನಣೆ. ಮಗನ ವಿವಾಹಕ್ಕೆ ಸಿದ್ಧತೆ. ಪದವಿ ಪ್ರಾಪ್ತಿಯಲ್ಲಿ ಬಂಧುಗಳಿಂದ ಅಡೆತಡೆ. ಶುಭಸಂಖ್ಯೆ: 2
ಸಿಂಹ: ಚರ್ಮವ್ಯಾಧಿ ಹೆಚ್ಚಾಗಲಿದೆ. ಕಲಾವಿದರಿಗೆ ಅವಕಾಶ ಗಳು ಹರಿದು ಬರಲಿವೆ. ವಾಣಿಜ್ಯ, ಕಾನೂನು ವಿದ್ಯಾರ್ಥಿಗಳಿಗೆ ಸೋಲು. ಶುಭಸಂಖ್ಯೆ:6
ಕನ್ಯಾ: ಹೂ ಮತ್ತು ತರಕಾರಿ ವ್ಯಾಪಾರದಲ್ಲಿ ಲಾಭವಾಗುವುದು. ಅಡಿಕೆ ಮತ್ತು ಕಾಫಿ ಬೆಳೆಗಾರರಿಗೆ ನಷ್ಟ. ದಿನಸಿ ವ್ಯಾಪಾರದಲ್ಲಿ ತೊಂದರೆ. ಶುಭಸಂಖ್ಯೆ: 9
ತುಲಾ: ಕಟ್ಟಡಗಳ ಮಾರಾಟಗಾರರಿಗೆ ಲಾಭ. ನೂತನ ಕಚೇರಿಯಲ್ಲಿ ಸಂತಸ. ವೀಸಾ ಸಮಸ್ಯೆಯಿಂದ ವಿದೇಶ ಪ್ರಯಾಣ ವಿಳಂಬ. ಶುಭಸಂಖ್ಯೆ: 7
ವೃಶ್ಚಿಕ: ಸಂಗಾತಿ ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ. ಸರ್ಕಾರಿ ಟೆಂಡರ್ ಸಿಗಲಿದೆ. ನಟರಿಗೆ ಜಾಹೀರಾತು ಸಂಸ್ಥೆಯಲ್ಲಿ ಅವಕಾಶ. ಶುಭಸಂಖ್ಯೆ: 4
ಧನುಸ್ಸು: ಕುರಿ, ಹಸು ಸಾಕುವ ರೈತರಿಗೆ ಅನಿರೀಕ್ಷಿತ ಲಾಭ. ಕೃಷಿ ಜಮೀನು ಖರೀದಿಗೆ ನಿರ್ಧಾರ. ಸಾಲ ತೀರಿಸಲು ಕಾರ್ಯ ಯೋಜನೆ. ಶುಭಸಂಖ್ಯೆ:1
ಮಕರ: ಹೊಸ ಹೂಡಿಕೆದಾರರ ಆಗಮನ. ನನೆಗುದಿಗೆ ಬಿದ್ದ ಕಾರ್ಯಕ್ಕೆ ಮರುಚಾಲನೆ. ನೂತನ ಗೃಹ ಆರಂಭಕ್ಕೆ ಶುಭ ಮುಹೂರ್ತ. ಶುಭಸಂಖ್ಯೆ: 6
ಕುಂಭ: ವೃತ್ತಿ ಶಿಕ್ಷಣ ಆಯ್ಕೆಯಲ್ಲಿ ಗೊಂದಲ. ಕುಲದೇವತಾ ಸಾನಿಧ್ಯಕ್ಕೆ ಕುಟುಂಬ ಸಮೇತ ಪ್ರಯಾಣ. ಉದ್ಯೋಗಸ್ಥ ಮಹಿಳೆಗೆ ಒತ್ತಡ. ಶುಭಸಂಖ್ಯೆ: 3
ಮೀನ: ಹೃದಯ ಸಂಬಂಧಿ ಕಾಯಿಲೆಗೆ ಶಸ್ತ್ರ ಚಿಕಿತ್ಸೆ ಸಾಧ್ಯತೆ. ಕಾರ್ವಿುಕರ ಅಭಾವದಿಂದ ಬೆಳೆ ನಷ. ಸಣ್ಣಪುಟ್ಟ ವ್ಯಾಪಾರಿಗಳಿಗೆ ಲಾಭ. ಶುಭಸಂಖ್ಯೆ:2