ಕಳೆದ ಏಳು ವರ್ಷಗಳ ಅವಧಿಯಲ್ಲಿ ದೇಶದಲ್ಲಿ ಬ್ಯಾಂಕ್ ವಂಚನೆ ಕಾರಣಕ್ಕೆ ನಿತ್ಯವೂ ನಷ್ಟವಾಗಿರುವ ಮೊತ್ತ ವರ್ಷದಿಂದ ವರ್ಷಕ್ಕೆ ಇಳಿಕೆಯಾಗುತ್ತಿದೆ. ಆದರೂ, ಇದು ಕನಿಷ್ಠ 100 ಕೋಟಿ ರೂಪಾಯಿ ಇದೆ ಎಂಬುದು ಗಮನಾರ್ಹ.
ಹಣಕಾಸು ಅಕ್ರಮ, ವಂಚನೆ ಪ್ರಮಾಣ ಇಳಿಕೆಗೆ ಕ್ರಮವನ್ನು ಬಿಗಿಗೊಳಿಸಲಾಗಿದ್ದು, ಕಠಿಣ ಶಿಕ್ಷೆಯನ್ನೂ ಜಾರಿಗೊಳಿಸಲಾಗುತ್ತಿದೆ. ಹಣಕಾಸು ಅಕ್ರಮ ಪತ್ತೆ ಮತ್ತು ವರದಿ ಮಾಡುವುದು, ಅದನ್ನು ತಡೆದು ಅನುತ್ಪಾದಕ ಆಸ್ತಿ ವಸೂಲಿಗೆ ಕ್ರಮವನ್ನು ಸರ್ಕಾರ ತೆಗೆದುಕೊಂಡಿದೆ.
ಹಣಕಾಸು ವಂಚನೆ ಪ್ರಕರಣದಲ್ಲಿ ದೇಶದ ಹಣಕಾಸು ರಾಜಧಾನಿ ಮಹಾರಾಷ್ಟ್ರ ಅಗ್ರಸ್ಥಾನದಲ್ಲಿದೆ. ದೆಹಲಿ, ತೆಲಂಗಾಣ, ಗುಜರಾತ್, ತಮಿಳುನಾಡು ನಂತರದ ಸ್ಥಾನಗಳಲ್ಲಿವೆ.
ದೇಶಾದ್ಯಂತ 2015ರ ಏಪ್ರಿಲ್ 1ರಿಂದ 2021ರ ಡಿಸೆಂಬರ್ 31ರ ನಡುವಿನ ಅವಧಿಯಲ್ಲಿ ಒಟ್ಟು 2.5 ಲಕ್ಷ ಕೋಟಿ ರೂಪಾಯಿ ಬ್ಯಾಂಕ್ ವಂಚನೆ ನಡೆದಿದೆ.
ಕೆಟಗರಿಗಳಲ್ಲಿ ವಂಚನೆ ಪ್ರಕರಣ ದಾಖಲು ದುರ್ವಿನಿಯೋಗ, ಅಪರಾಧ ಉದ್ದೇಶದ ವಿಶ್ವಾಸ ವಂಚನೆ, ಪೋರ್ಜರಿ ಮಾಡಿದ ದಾಖಲೆ ನೀಡಿ ಹಣ ನಗದೀಕರಣ, ಲೆಕ್ಕ ಪುಸ್ತಕದಲ್ಲಿ ತಿದ್ದುಪಡಿ ಅಥವಾ ಕಾಲ್ಪನಿಕ ಖಾತೆ ಮತ್ತು ಆಸ್ತಿ ಪರಿವರ್ತನೆ, ಅಕ್ರಮ ಸಾಲ ಸೌಲಭ್ಯ ವಿಸ್ತರಣೆ, ನಿರ್ಲಕ್ಷ್ಯ, ನಗದು ಕೊರತೆ, ಮೋಸ ಮತ್ತು ಪೋರ್ಜರಿ, ವಿದೇಶ ವಿನಿಮಯ ವಹಿವಾಟಿನಲ್ಲಿ ಲೋಪ ಮುಂತಾದವು
ಹಣಕಾಸು ವಂಚನೆಯಲ್ಲಿ ಶೇಕಡ 83ರಷ್ಟು ಅಥವಾ 2 ಲಕ್ಷ ಕೋಟಿ ರೂ.ಗೂ ಅಧಿಕ ವಂಚನೆ ಪ್ರಕರಣ ಐದು ರಾಜ್ಯಗಳಲ್ಲೇ ಹಂಚಿಹೋಗಿದೆ.