

ಮೇಷ: ಕೆಲಸವನ್ನು ಶೀಘ್ರವಾಗಿ ಮಾಡುವಿರಿ, ಹಿರಿಯರಲ್ಲಿ ಭಕ್ತಿ-ಗೌರವ ಪ್ರಕಟ, ಸಾರ್ವಜನಿಕ ಕೆಲಸ ಕಾರ್ಯಗಳಲ್ಲಿ ಭಾಗಿಯಾಗುವಿರಿ. ಶುಭಸಂಖ್ಯೆ 6
ವೃಷಭ: ಶ್ರಮಪಟ್ಟು ಕೆಲಸ ಮಾಡಿದರೆ ಅನುಕೂಲ, ವೃತ್ತಿ ಕ್ಷೇತ್ರದಲ್ಲಿ ಮಾತಿನ ಕಲಹ, ನ್ಯಾಯಾಲಯ ಮೂಲಕ ಧನಹಾನಿ ಸಂಭವ. ಶುಭಸಂಖ್ಯೆ 5
ಮಿಥುನ: ಕಬ್ಬಿಣ ವ್ಯಾಪಾರದಲ್ಲಿ ಲಾಭ, ಅಮೂಲ್ಯ ವಸ್ತು ಪಡೆಯುವಿರಿ, ಅನ್ಯಾಯದ ವಿರುದ್ಧ ಹೋರಾಟ, ಅಲ್ಪ ಆದಾಯ, ಅಧಿಕ ಖರ್ಚು. ಶುಭಸಂಖ್ಯೆ 4
ಕಟಕ: ವ್ಯಾಪಾರದಲ್ಲಿ ಬುದ್ಧಿವಂತಿಕೆಯಿಂದ ವ್ಯವಹರಿಸಿ, ಹಿಡಿದ ಕೆಲಸವನ್ನು ಬಿಡದೇ ಸಾಧಿಸುವಿರಿ, ನಂಬಿಕಸ್ಥರಾಗಿ ದುಡಿಯುವಿರಿ. ಶುಭಸಂಖ್ಯೆ 1
ಸಿಂಹ: ಹೊಸ ವಿಚಾರಗಳಲ್ಲಿ ಆಸಕ್ತಿ, ಹಿರಿಯ ವ್ಯಕ್ತಿಗಳಿಂದ ಬೆಂಬಲ, ಶತ್ರು ನಾಶ, ಕೋಪ ಬೇಡ, ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ನಷ್ಟ . ಶುಭಸಂಖ್ಯೆ 7
ಕನ್ಯಾ: ವ್ಯಾಪಾರ ನಿರೀಕ್ಷೆಯಂತೆ ನಡೆಯುವುದು, ಆರೋಗ್ಯ ಸಮಸ್ಯೆ, ವಿದ್ಯಾರ್ಥಿಗಳಲ್ಲಿ ಗೊಂದಲ. ವಿದೇಶದಿಂದ ಮಗನ ಆಗಮನ. ಶುಭಸಂಖ್ಯೆ 2
ತುಲಾ: ಅಡಿಕೆ, ಭತ್ತ ಕೃಷಿಕರಿಗೆ ಕೆಲಸಗಾರರ ಸಮಸ್ಯೆ. ಸಾಮಾನ್ಯ ಸೌಖ್ಯಕ್ಕೆ ಧಕ್ಕೆ, ವೆಚ್ಚ ಹಿಡಿತವಿರಲಿ, ದಾಯಾದಿಗಳಿಂದ ಈ ದಿನ ದೂರವಿರಿ. ಶುಭಸಂಖ್ಯೆ6
ವೃಶ್ಚಿಕ: ಭೂಲಾಭ, ಚಂಚಲ ಮನಸ್ಸು, ನಂಬಿಕಸ್ಥರಿಂದಲೇ ಮೋಸ ಹೋಗುವ ಸಾಧ್ಯತೆ, ಅಕಾಲ ಭೋಜನ, ಆಲಸ್ಯ ಮನೋಭಾವ. ಶುಭಸಂಖ್ಯೆ 5
ಧನುಸ್ಸು: ಮತ್ಸ್ಯ ಉತ್ಪನ್ನಗಳ ವ್ಯಾಪಾರದಲ್ಲಿ ಲಾಭ ಆಗುವುದು, ಆದಾಯಕ್ಕಿಂತ ಹೆಚ್ಚು ಖರ್ಚು, ಅವಿವಾಹಿತರಿಗೆ ವಿವಾಹ ಯೋಗವಿದೆ. ಶುಭಸಂಖ್ಯೆ 3
ಮಕರ: ಸರ್ಕಾರಿ ಕೆಲಸ ವಿಳಂಬ, ಉತ್ತಮ ಬುದ್ಧಿಶಕ್ತಿ, ಮಿತ್ರರ ಸಹಾಯ, ಮಂಗಳ ಕಾರ್ಯಗಳಲ್ಲಿ ಭಾಗಿ, ಯಾರನ್ನೂ ಹೆಚ್ಚು ನಂಬಬೇಡಿ. ಶುಭಸಂಖ್ಯೆ 7
ಕುಂಭ: ಉದ್ಯೋಗ ಬದಲಾವಣೆಗೆ ಮನಸ್ಸು. ದಾನ ಧರ್ಮದಲ್ಲಿ ಆಸಕ್ತಿ, ಕುಟುಂಬದಲ್ಲಿ ನೆಮ್ಮದಿ, ಅನ್ಯರಲ್ಲಿ ಪ್ರೀತಿ, ಮನಸ್ಸಿಗೆ ನೆಮ್ಮದಿ. ಶುಭಸಂಖ್ಯೆ 6
ಮೀನ: ಪ್ರಿಯ ಜನರ ಭೇಟಿ ಸಾಧ್ಯತೆ, ಮನಸ್ಸಿನಲ್ಲಿ ಇರುವ ಭಯಭೀತಿ ನಿವಾರಣೆ, ವಿದ್ಯಾಭ್ಯಾಸದಲ್ಲಿ ಪ್ರಗತಿಯಾಗುವ ನಿರೀಕ್ಷೆ, ಧನಲಾಭ. ಶುಭಸಂಖ್ಯೆ 8