ಈ ರಾಶಿಯವರು ಹಣಕಾಸಿನ ಹೂಡಿಕೆ ಮಾಡಬಾರದು: ನಿತ್ಯಭವಿಷ್ಯ

Nitya Bhavisya Vijayavani
Published on

ಮೇಷ: ಆತುರದ ನಿರ್ಧಾರಗಳು ಬೇಡ, ನಿರೀಕ್ಷಿಸಿದಂತೆ ಫಲಿತಾಂಶ, ಒತ್ತಡಕ್ಕೆ ಒಳಗಾಗುವ ಸಾಧ್ಯತೆ. ಶುಭಸಂಖ್ಯೆ 5

ವೃಷಭ: ಮನಸ್ಥಿತಿ ಹದಗೆಡಬಹುದು, ಯೋಜನೆಗಳು ಉತ್ತಮವಾಗಿರುತ್ತವೆ, ಆರೋಗ್ಯದಲ್ಲಿ ಶಿಸ್ತು ಅವಶ್ಯ. ಶುಭಸಂಖ್ಯೆ 9

ಮಿಥುನ: ಆರ್ಥಿಕ ವಿಷಯಗಳಲ್ಲಿ ಜಾಗರೂಕತೆ, ಆದಾಯ ಉತ್ತಮವಾಗಿರುತ್ತದೆ, ಆರೋಗ್ಯದಲ್ಲಿ ವ್ಯತ್ಯಾಸ. ಶುಭಸಂಖ್ಯೆ 2

ಕಟಕ: ಆಸ್ತಿಗೆ ಸಂಬಂಧಿಸಿದ ವಿಚಾರದಲ್ಲಿ ಲಾಭ, ಒಳಿತಿಗಾಗಿ ಶ್ರಮಿಸಬೇಕು, ಅತಿಯಾದ ಖರ್ಚು. ಶುಭಸಂಖ್ಯೆ 8

ಸಿಂಹ: ಮನಸ್ಸಿನಲ್ಲಿ ಅಶಾಂತಿ, ಫಲಿತಾಂಶಗಳು ನಿಮ್ಮ ಪರವಾಗಿರಲಿವೆ, ಇತರರು ಹೇಳುವುದನ್ನು ಆಲಿಸಿ. ಶುಭಸಂಖ್ಯೆ 8

ಕನ್ಯಾ: ಹಣಕಾಸಿನ ತೊಂದರೆಗಳ ಪರಿಹಾರ, ಕುಟುಂಬದಲ್ಲಿ ಭಿನ್ನತೆ, ವ್ಯಾಪಾರಿಗಳು ಎಚ್ಚರಿಕೆಯಿಂದಿರಬೇಕು. ಶುಭಸಂಖ್ಯೆ 1

ತುಲಾ: ಸಂಘರ್ಷಗಳಿಂದ ದೂರವಿರಿ, ಆಯ್ಕೆಗಳನ್ನು ಬುದ್ಧಿವಂತಿಕೆಯಿಂದ ಆರಿಸಿ, ಶತ್ರುಗಳ ಕಾಟದಿಂದ ಮುಕ್ತಿ. ಶುಭಸಂಖ್ಯೆ 9

ವೃಶ್ಚಿಕ: ಹೋದ್ಯೋಗಿಗಳಿಂದ ಕಿರಿಕಿರಿ, ನ್ಯಾಯಾಲಯದ ಪ್ರಕರಣಗಳಲ್ಲಿ ಯಶಸ್ಸು, ಹಣಕಾಸಿನ ಹೂಡಿಕೆ ಮಾಡಬಾರದು. ಶುಭಸಂಖ್ಯೆ 7

ಧನಸ್ಸು: ಹೆಚ್ಚಿನ ಒತ್ತಡ ಎದುರಿಸಬಹುದು, ವ್ಯಾಪಾರ ವ್ಯವಹಾರಗಳಲ್ಲಿ ಜಾಗ್ರತೆ, ಏಕಾಗ್ರತೆಯಿಂದ ಕಾರ್ಯ ನಿರ್ವಹಿಸಿ. ಶುಭಸಂಖ್ಯೆ 4

ಮಕರ: ಉದ್ವೇಗಕ್ಕೊಳಗಾಗದಿರಿ, ಕೆಲಸಗಳು ಸೂಕ್ತ ಸಮಯಕ್ಕೆ ಪೂರ್ಣಗೊಳ್ಳುತ್ತವೆ, ಮಾತಿನಲ್ಲಿ ಎಚ್ಚರ ಇರಲಿ. ಶುಭಸಂಖ್ಯೆ 5

ಕುಂಭ: ವೃತ್ತಿ ಕ್ಷೇತ್ರದಲ್ಲಿ ಯಶಸ್ಸು, ಬುದ್ಧಿವಂತಿಕೆಯ ನಿರ್ಧಾರಗಳು ಅಗತ್ಯ, ಖರ್ಚುಗಳನ್ನು ನಿಯಂತ್ರಿಸಿಕೊಳ್ಳಿ. ಶುಭಸಂಖ್ಯೆ 2

ಮೀನ: ಕಷ್ಟಗಳು ಕೊನೆಗೊಳ್ಳುತ್ತವೆ, ಕಾನೂನು ತೊಂದರೆಗಳಿಂದಾಗಿ ಸಮಸ್ಯೆ, ಉತ್ತಮ ಅವಕಾಶಗಳು ಸಿಗುತ್ತವೆ. ಶುಭಸಂಖ್ಯೆ 2

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net