ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ಹಿತಶತ್ರುಗಳ ಕಾಟ ಹೆಚ್ಚಾಗಬಹುದು

Nitya Bhavisya Vijayavani
Published on

ಮೇಷ: ಉದ್ಯೋಗಸ್ಥ ಮಹಿಳೆಯರಿಗೆ ಶುಭದಾಯಕ ದಿನ. ಮಕ್ಕಳು ವಿದ್ಯಾಭ್ಯಾಸದಲ್ಲಿ ಗಮನಹರಿಸಿ. ಆಸ್ತಿ ವಿಚಾರದಲ್ಲಿ ಗೊಂದಲ. ಶುಭಸಂಖ್ಯೆ: 9

ವೃಷಭ: ತರಕಾರಿ ವ್ಯಾಪಾರಿಗಳಿಗೆ ಲಾಭ. ಹಿರಿಯ ಅಧಿಕಾರಿ ಗಳಿಂದ ಸಹಾಯ. ಕಚ್ಚಾವಸ್ತುಗಳ ಪೂರೈಕೆದಾರರಿಗೆ ಲೆಕ್ಕಪತ್ರಗಳ ಸಮಸ್ಯೆ. ಶುಭಸಂಖ್ಯೆ:1

ಮಿಥುನ: ಬಟ್ಟೆ ವ್ಯಾಪಾರಸ್ಥರಿಗೆ ಅಶುಭ. ವೃತ್ತಿಯಲ್ಲಿ ಹಿತಶತ್ರುಗಳ ಕಾಟ ಹೆಚ್ಚಾಗಬಹುದು. ಕಾರ್ಯ ನಿಮಿತ್ತ ದೂರದೂರಿಗೆ ಪ್ರಯಾಣ. ಶುಭಸಂಖ್ಯೆ: 3

ಕಟಕ: ರಿಯಲ್ ಎಸ್ಟೇಟ್ ಉದ್ಯಮದವರಿಗೆ ಶುಭದಿನ. ಹಿರಿಯರ ಆರೋಗ್ಯದ ವಿಚಾರದಲ್ಲಿ ಎಚ್ಚರ. ಕ್ರೀಡಾಪಟುಗಳಿಗೆ ಯಶಸ್ಸು. ಶುಭಸಂಖ್ಯೆ:9

ಸಿಂಹ: ಆರೋಗ್ಯ ಕ್ಷೇತ್ರದ ಕೆಲಸಗಾರರಿಗೆ ಆದಾಯ. ಮಹಿಳೆಯರಿಗೆ ಉದ್ಯೋಗ ಸ್ಥಳದಲ್ಲಿ ಗೌರವ. ವಿದ್ಯಾರ್ಥಿಗಳು ಸವಾಲು ಸ್ವೀಕರಿಸಿ. ಶುಭಸಂಖ್ಯೆ:4

ಕನ್ಯಾ: ಕೃಷಿಕರಿಗೆ ಉತ್ತಮ ಲಾಭ ಬರಲಿದೆ. ಸ್ಥಿರಾಸ್ತಿ ಖರೀದಿಯ ಚಿಂತನೆ. ಇವೆಂಟ್ ಮ್ಯಾನೇಜ್​ವೆುಂಟ್ ವೃತ್ತಿಯವರಿಗೆ ಲಾಭ. ಶುಭಸಂಖ್ಯೆ:8

ತುಲಾ: ಗುಡಿ ಕೈಗಾರಿಕೆಯವರಿಗೆ ಶುಭ. ಭೂ ವ್ಯವಹಾರದಲ್ಲಿ ಉತ್ತಮ ಲಾಭ. ಎಲೆಕ್ಟ್ರಾನಿಕ್ಸ್ ವ್ಯಾಪಾರಸ್ಥರಿಗೆ ನಿರೀಕ್ಷಿತ ಹಣ ಬರುವುದು. ಶುಭಸಂಖ್ಯೆ:1

ವೃಶ್ಚಿಕ: ಕೆಲವು ಗೊಂದಲಗಳ ನಿವಾರಣೆ. ಸಾಪ್ಟ್​ವೇರ್ ವಿಭಾಗದವರಿಗೆ ಶುಭ. ಪೂಜಾ ವಸ್ತುಗಳ ಮಾರಾಟಸ್ಥರಿಗೆ ಅಭಿವೃದ್ಧಿ. ಶುಭಸಂಖ್ಯೆ:5

ಧನುಸ್ಸು: ರಫ್ತುಉದ್ದಿಮೆದಾರರಿಗೆ ಲಾಭ. ಪಿತ್ರಾರ್ಜಿತ ಆಸ್ತಿಯಿಂದ ಆದಾಯ ದೊರೆಯುವುದು. ಲೇವಾದೇವಿ ವ್ಯವಹಾರದಲ್ಲಿ ಎಚ್ಚರಿಕೆ. ಶುಭಸಂಖ್ಯೆ:1

ಮಕರ: ಸರ್ಕಾರಿ ನೌಕರರಿಗೆ ಜನರ ಬೆಂಬಲ ಸಿಗುವುದು. ಔಷಧ ತಯಾರಕರಿಗೆ ಒಳ್ಳೆಯ ದಿನ. ಸಗಟು ವ್ಯಾಪಾರಸ್ಥರಿಗೆ ಬೇಡಿಕೆ. ಶುಭಸಂಖ್ಯೆ:9

ಕುಂಭ: ವಸ್ತ್ರ ವ್ಯಾಪಾರದಲ್ಲಿ ಅಭಿವೃದ್ಧಿ ಆಗಲಿದೆ. ಹೋಟೆಲ್ ಉದ್ಯಮದಲ್ಲಿ ಲಾಭಕ್ಕೆ ಕೊರತೆಯಾಗದು. ದೇವತಾ ಕಾರ್ಯಗಳಲ್ಲಿ ಭಾಗಿ. ಶುಭಸಂಖ್ಯೆ: 3

ಮೀನ: ಬಿತ್ತನೆ ಬೀಜಗಳ ಮಾರಾಟಗಾರರಿಗೆ ನಷ್ಟವಾಗುವ ಸಾಧ್ಯತೆ. ಕೆಲಸಕಾರ್ಯಗಳಲ್ಲಿ ಅಭಿವೃದ್ಧಿ. ಕಾರ್ವಿುಕರಿಗೆ ಶುಭದಿನ. ಶುಭಸಂಖ್ಯೆ: 7

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net