ಲಾರ್ಡ್ಸ್ ರೋಮಾಂಚನ! : ಸೌರವ್ ಗಂಗೂಲಿ ಹುಟ್ಟುಹಬ್ಬಕ್ಕೆ ‘ದಾದಾ’ಗಿರಿ ಫಸ್ಟ್ ಲುಕ್ ರಿವೀಲ್

ದಾದಾ ಚಿತ್ರದ ಫಸ್ಟ್ ಲುಕ್​
ದಾದಾ ಚಿತ್ರದ ಫಸ್ಟ್ ಲುಕ್​
Published on

ಪ್ರಮುಖ ಮುಖ್ಯಾಂಶಗಳು

  • ದಾದಾ ಚಿತ್ರದ ಫಸ್ಟ್ ಲುಕ್ ನಲ್ಲಿ ಮಿಂಚಿದ ನಟ ರಾಜಕುಮಾರ್ ರಾವ್​
  • ಕ್ರಿಕೆಟ್ ಲೋಕದಲ್ಲಿ ಇಂದಿಗೂ ಮರೆಯದ ಘಟನೆಯನ್ನು ಮರುಸೃಷ್ಟಿಸಿದ ಚಿತ್ರತಂಡ
  • ಸ್ವತ: ಗಂಗೂಲಿಯೇ ಫಸ್ಟ್ ಲುಕ್ ನೋಡಿ ಫಿದಾ
ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಬಯೋಪಿಕ್ ‘ದಾದಾ’ ಚಿತ್ರದಲ್ಲಿ ಬಾಲಿವುಡ್ ನಟ ರಾಜಕುಮಾರ್ ರಾವ್ ಅಭಿನಯಿಸುತ್ತಿರುವುದು ಗೊತ್ತಿದೆ. ಕೆಲ ತಿಂಗಳ ಹಿಂದೆಯಷ್ಟೇ ಸಿನಿಮಾದ ಟೈಟಲ್ ಘೋಷಣೆಯಾಗಿ, ಕೋಲ್ಕತದ ಈಡನ್ ಗಾರ್ಡನ್‌ನಲ್ಲಿ ಮುಹೂರ್ತ ನೆರವೇರಿಸಲಾಗಿತ್ತು. ‘ಉಡಾನ್’, ‘ಲುಟೇರಾ’, ‘ಟ್ರ್ಯಾಪ್ಡ್’ ಖ್ಯಾತಿಯ ವಿಕ್ರಮಾದಿತ್ಯ ಮೋಟ್ವಾನೆ ಈ ಬಯೋಪಿಕ್‌ಗೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಇನ್ನು ಬುಧವಾರ (ಜು.8) ಸೌರವ್ ಗಂಗೂಲಿ 54ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಚಿತ್ರತಂಡ ಫಸ್ಟ್ ಲುಕ್ ರಿಲೀಸ್ ಮಾಡಿದೆ. ಮಾಜಿ ನಾಯಕನ ಕ್ರೀಡಾ ಬದುಕಿನಲ್ಲಿ ಮಹತ್ವ ಅನಿಸಿದ್ದ ಘಟನೆಯನ್ನು ಸ್ಟ್ ಲುಕ್ ಮೂಲಕ ತೋರಿಸಲಾಗಿದೆ. 2002ರಲ್ಲಿ ಭಾರತ ಕ್ರಿಕೆಟ್ ತಂಡ ನ್ಯಾಟ್‌ವೆಸ್ಟ್ ತ್ರಿಕೋನ ಸರಣಿಗೆ ಇಂಗ್ಲೆಂಡ್ ಪ್ರವಾಸಕ್ಕೆ ಕೈಗೊಂಡಿತ್ತು. ಲಾರ್ಡ್ಸ್‌ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ತಂಡ ರೋಚಕವಾಗಿ ಗೆದ್ದಿತ್ತು. ಬಾಲ್ಕನಿಯಲ್ಲಿ ನಿಂತಿದ್ದ ಸೌರವ್ ಗಂಗೂಲಿ ಟಿ-ಶರ್ಟ್ ಬಿಚ್ಚಿ ವಿಜಯೋತ್ಸವ ಆಚರಿಸಿ, ಹಿಂದಿನ ಪಂದ್ಯದಲ್ಲಿ ದುರ್ವರ್ತನೆ ತೋರಿದ್ದ ಇಂಗ್ಲೆಂಡ್ ಆಟಗಾರರಿಗೆ ಪ್ರತ್ಯುತ್ತರ ನೀಡಿದ್ದರು. ಈ ಘಟನೆ ಇಂದಿಗೂ ಗಂಗೂಲಿ ಅಭಿಮಾನಿಗಳು ಸೇರಿ ಭಾರತ ಕ್ರಿಕೆಟ್ ತಂಡದ ಇತಿಹಾಸದಲ್ಲಿ ಅಚ್ಚಳಿಯಾಗಿ ಉಳಿದಿದೆ. ಇದೀಗ ‘ದಾದಾ’ ಚಿತ್ರತಂಡ ಬಯೋಪಿಕ್‌ನಲ್ಲಿ ಈ ದೃಶ್ಯವನ್ನು ಮರಸೃಷ್ಟಿಸಿದ್ದು, ಅದೇ ಘಟನೆಯ ಫಸ್ಟ್ ಲುಕ್ ರಿಲೀಸ್ ಮಾಡಿ, ಗಂಗೂಲಿ ಹುಟ್ಟುಹಬ್ಬಕ್ಕೆ ಉಡುಗೊರೆಯಾಗಿ ನೀಡಿದೆ. ಹಾಗೆಯೇ ಸಿನಿಮಾದ ರಿಲೀಸ್ ಡೇಟ್ ಕೂಡ ಅನೌನ್ಸ್ ಮಾಡಲಾಗಿದ್ದು, 2027ರ ಮೇ 14ರಂದು ಸಿನಿಮಾ ತೆರೆ ಮೇಲೆ ಬರಲಿದೆ. -ಏಜೆನ್ಸೀಸ್

ಲುಕ್‌ಗೆ ಗಂಗೂಲಿ ಏನಂದ್ರು?

‘ದಾದಾ’ ಫಸ್ಟ್-ಲುಕ್‌ಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸ್ವತಃ ಸೌರವ್ ಗಂಗೂಲಿ ಈ ಅಚ್ಚರಿ ಗಿಫ್ಟ್ ನೋಡಿ ಖುಷಿಗೊಂಡಿದ್ದಾರೆ. ಜಾಲತಾಣದಲ್ಲಿ ಫಸ್ಟ್ ಲುಕ್ ಹಂಚಿಕೊಂಡು, ‘ಹುಟ್ಟುಹಬ್ಬಕ್ಕೆ ಅತ್ಯುತ್ತಮ ಉಡುಗೊರೆಯಿದು. ರಾಜಕುಮಾರ್ ರಾವ್ ತೆರೆಯ ಮೇಲೆ ನೀವು ನನ್ನ ಕವರ್ ಡ್ರೈವ್ ಹೊಡೆಯುವುದನ್ನು ನೋಡಲು ನಾನು ಕಾತುರನಾಗಿದ್ದೇನೆ’ ಎಂದು ಪ್ರತಿಕ್ರಿಯಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net