ಮಗಳ ಆಸೆಯನ್ನು ಈಡೇರಿಸಲು 'ಬಾರ್ಬಿ'ಯಾದ ಅಪ್ಪ!

b2
Published on

ಸಾಮಾನ್ಯವಾಗಿ ಅಪ್ಪ ಏನು ಹೇಳಿದ್ರು ತಂದು ಕೊಡ್ತಾರೆ ಅಥವಾ ಮಾಡ್ತಾರೆ ಅನ್ನೋದು ಹೆಣ್ಣು ಮಕ್ಕಳಿಗೆ ಗೊತ್ತಿರೋ ವಿಚಾರ. ಬಾರ್ಬಿ ಚಿತ್ರ ಇದೀಗ ಗಲ್ಲಾ ಪೆಟ್ಟಿಗೆಯನ್ನ ಭರಿಸುವಲ್ಲಿ ಯಶಸ್ವಿಯಾಗಿದ್ದು, ಬಾರ್ಬಿಯಂತೆ ಡ್ರೆಸ್​​ ಮಾಡಿಕೊಳ್ಳೋದು ಸಹ ಟ್ರೆಂಡಿಂಗ್​​​ನಲ್ಲಿದೆ.


ನಿಮ್ಮ ಮಕ್ಕಳು ಹೀಗೆ ಹೇಳಿದರೆ ಏನು ಮಾಡುತ್ತೀರಿ? ಬಹಳವೆಂದರೆ ಗುಲಾಬಿ ಶರ್ಟ್​ ತೊಟ್ಟುಕೊಳ್ಳುತ್ತೀರಿ ತಾನೆ? ಆದರೆ ಈ ಅಪ್ಪಮಹಾಶಯ ಮಾತ್ರ ಮಗಳ ಆಸೆಯನ್ನು ಈಡೇರಿಸಲು ಬಾರ್ಬಿಯಂತೆ ಅಲಂಕರಿಸಿಕೊಂಡು ಬಾರ್ಬಿ ಸಿನೆಮಾ ನೋಡಲು ಥಿಯೇಟರ್​ಗೆ ಮಗಳನ್ನು ಕರೆದೊಯ್ದಿದ್ದಾರೆ!
‘ಅಪ್ಪಾ ನನ್ನನ್ನು ಬಾರ್ಬಿ ಸಿನೆಮಾದ ಮೊದಲ ಪ್ರದರ್ಶನಕ್ಕೆ ಕರೆದೊಯ್ಯು ಎಂದು ಮಗಳು ಹೇಳಿದ್ದಾಳೆ.

ಆದರೆ ವಿಷಯ ಇದಲ್ಲ. ಈ ಸಿನೆಮಾಗೆ ಹೋಗುವಾಗ ನೀನೂ ಗುಲಾಬಿ ಬಣ್ಣದ ಬಟ್ಟೆಯನ್ನೇ ಧರಿಸಬೇಕು ಎಂದು ಸವಾಲನ್ನು ಹಾಕಿದ್ದಾಳೆ. ಅಪ್ಪ ಒಂದಿನಿತು ಮುಜುಗರಕ್ಕೆ ಒಳಗಾಗದೆ ಮಗಳ ಮಾತನ್ನು ಪಾಲಿಸಿದ್ದಾನೆ!

ಎಲಿಝರ್ ರೋಡ್ರಿಗಸ್ ಹೆರ್ನಾಂಡೇಝ್ ಎನ್ನುವವರು ತಮ್ಮ ಮಗಳಿಗಾಗಿ ಗುಲಾಬಿಯಲ್ಲಿ ತಾವು ಅರಳಿ ನಿಂತ ಫೋಟೋಗಳನ್ನು ಫೇಸ್​ಬುಕ್​ನಲ್ಲಿ ಪೋಸ್ಟ್ ಮಾಡಿದ್ದಾರೆ. ಈತನಕ ಈ ಪೋಸ್ಟ್​ ಅನ್ನು 2,000 ಜನರು ಹಂಚಿಕೊಂಡಿದ್ದಾರೆ. 1,500 ಜನರು ಲೈಕ್ ಮಾಡಿದ್ದಾರೆ. 1,100 ಜನರು ಪ್ರತಿಕ್ರಿಯಿಸಿದ್ದಾರೆ. ಈ ಪೋಸ್ಟ್ ಸ್ಪ್ಯಾನಿಷ್ ಮೂಲದಲ್ಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net