

ನವದೆಹಲಿ: ಪ್ರಸ್ತುತ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ (Border-Gavaskar Trophy) ಟೀಮ್ ಇಂಡಿಯಾ (Team India) ಶುಭಾರಂಭ ಕಂಡಿದ್ದು, ಸರಣಿಯ ಎರಡನೇ ಪಂದ್ಯದಲ್ಲೂ ಗೆಲುವಿನ ಓಟ ಮುಂದುವರೆಸಲು ಕಠಿಣ ಅಭ್ಯಾಸ ನಡೆಸುತ್ತಿದೆ. ಇನ್ನೂ ಅಭ್ಯಾಸದ ವೇಳೆ ಟೀಮ್ ಇಂಡಿಯಾ (Team India) ಆಟಗಾರರು ಅಭಿಮಾನಿಗಳಿಗೆ ಕ್ರೀಡಾಂಗಣದತ್ತ ಬಾರದಂತೆ ಸೂಚನೆ ನೀಡಿದ್ದರು. ಇದೀಗ ರೋಹಿತ್ ಶರ್ಮ (Rohit Sharma) ಅಭಿಮಾನಿಗಳಿಗೆ ಬೈಯುತ್ತಿರುವ ಹಳೆಯ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
2011ರಲ್ಲಿ ಆಸ್ಟ್ರೇಲಿಯಾ ಪ್ರವಾಸದ ವೇಳೆ ತೆಗೆಯಲಾದ ವಿಡಿಯೋ ಇದು ಎಂದು ಹೇಳಲಾಗಿದ್ದು, ಸರಿಸುಮಾರು 13 ವರ್ಷಗಳ ಬಳಿಕ ವೈರಲ್ ಆಗಿದೆ. ರೋಹಿತ್ ಶರ್ಮ ಜೊತೆಗೆ ವೇಗಿ ಪ್ರವೀಣ್ ಕುಮಾರ್ ಕೂಡ ಅಭಿಮಾನಿಗಳಿಗೆ ಬೈದಿದ್ದು, ಈ ವಿಡಿಯೋ ಸಖತ್ ವೈರಲ್ ಆಗಿದೆ.
ವೈರಲ್ ಆಗಿರುವ ವಿಡಿಯೋ ನೋಡುವುದಾದರೆ ಅಭ್ಯಾಸದ ವೇಳೆ ಕೆಲವು ಅಭಿಮಾನಿಯೊಬ್ಬ ನಿರಂತರವಾಗಿ ಮಾತನಾಡುವ ಮೂಲಕ ಅಡ್ಡಿಪಡಿಸಲು ಯತ್ನಿಸಿದ್ದು, ಇದರಿಂದ ಕುಪಿತಗೊಂಡ ರೋಹಿತ್ ಶರ್ಮ ಅಭಿಮಾನಿಗೆ ಬಾಯಗೆ ಬಂದಂತೆ ಬೈಯುತ್ತಾರೆ. ಈ ರೀತಿ ಕುಡಿದುಕೊಂಡು ಬರುವುದಕ್ಕೆ ನಾಚಿಕೆಯಾಗಲ್ವಾ ಎಂದು ಹೇಳುತ್ತಾರೆ. ಈ ವೇಳೆ ಮದ್ಯಪ್ರವೇಶಿಸುವ ಪ್ರವೀಣ್ ಕುಮಾರ್ ಅಭಿಮಾನಿಗೆ ಗದರಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಲು ಶುರು ಮಾಡುತ್ತಾರೆ. ಈ ವಿಡಿಯೋ ಈಗ ವೈರಲ್ ಆಗಿದೆ.
ಅಡಿಲೇಡ್ನಲ್ಲಿ ನಡೆಯಲಿರುವ ಸರಣಿಯ ಎರಡನೇ ಟೆಸ್ಟ್ ಪಂದ್ಯ ಡಿಸೆಂಬರ್ 06ರಂದು ಆರಂಭವಾಗಲಿದ್ದು, ಈ ಪಂದ್ಯವನ್ನು ಪಿಂಕ್ಬಾಲ್ನಲ್ಲಿ ಆಡಲಾಗುತ್ತಿದೆ. ಭಾರತ (Team India) ಹಾಗೂ ಆಸ್ಟ್ರೇಲಿಯಾ (Australia) ನಡುವೆ ನಡೆಯಲಿರುವ 5 ಪಂದ್ಯಗಳ ಬಾರ್ಡರ್-ಗವಾಸ್ಕರ್ (Border-Gavaskar) ಟೆಸ್ಟ್ ಸರಣಿಯೂ ನವೆಂಬರ್ 22ಕ್ಕೆ ಆರಂಭವಾಗಿದ್ದು, ಜನವರಿ 7 ರವರೆಗೆ ಆಯೋಜನೆಗೊಂಡಿದೆ. ಈ ಸರಣಿ ಆಡಲು ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡವು ಆಸ್ಟ್ರೇಲಿಯಾಕ್ಕೆ ಪ್ರವಾಸ ಮಾಡಲಿದೆ. ಬಾರ್ಡರ್- ಗವಾಸ್ಕರ್ ಟ್ರೋಫಿ ಸರಣಿಯು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2023-2025 ಅಡಿಯಲ್ಲಿ ಆಡಲಾಗುತ್ತಿದೆ.