ಧಮ್​ ಇದ್ರೆ ಹೊಡಿ ನನ್ನ, ದಿಲ್​ ಇದ್ರೆ ತಡಿ ನನ್ನ … ಡಾಲಿ ಹೀಗೆ ಹೇಳಿದ್ದು ಯಾರಿಗೆ?

Dhananjay Padya - Collage
Published on

ಬೆಂಗಳೂರು: 'ಧಮ್​ ಇದ್ರೆ ಹೊಡಿ ನನ್ನ, ದಿಲ್​ ಇದ್ರೆ ತಡಿ ನನ್ನ ...' ಹಾಗಂತ ನಟ ಡಾಲಿ ಧನಂಜಯ್​ ಚಾಲೆಂಜ್​ ಮಾಡಿದ್ದಾರೆ. ಅವರು ಸವಾಲು ಎಸೆದಿದ್ದು ಯಾರಿಗೆ? ಎಂಬ ಪ್ರಶ್ನೆ ಸಹಜ. ಕೆಲವು ತಿಂಗಳುಗಳ ಹಿಂದೆ ಅವರ 'ಹೆಡ್​ ಬುಷ್​' ಚಿತ್ರಕ್ಕೆ ಕೆಲವು ವಲಯಗಳಿಂದ ಸಾಕಷ್ಟು ಪ್ರತಿರೋಧ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲೇನಾದರೂ ಅವರು ಯಾರಿಗಾದರೂ ಸವಾಲು ಎಸೆದಿದ್ದಾರಾ?

ಗೊತ್ತಿಲ್ಲ. ಆದರೆ, ಧನಂಜಯ್​ ತಮ್ಮ ಟ್ವಿಟರ್​ನಲ್ಲೊಂದು ಪದ್ಯ ಬರೆದುಕೊಂಡಿದ್ದಾರೆ. ಈಗಾಗಲೇ ಅವರು ಹಲವು ಪದ್ಯಗಳನ್ನು ರಚಿಸಿದ್ದಾರೆ. ಚಿತ್ರಗಳಿಗೆ ಹಾಡುಗಳನ್ನು ಬರೆದಿದ್ದಾರೆ. ಮುಂದಿನ ವಾರ ಬಿಡುಗಡೆಯಾಗಲಿರುವ 'ಆರ್ಕೆಸ್ಟ್ರಾ ಮೈಸೂರು' ಚಿತ್ರಕ್ಕೆ ಎಲ್ಲ ಹಾಡುಗಳನ್ನೂ ಬರೆದಿದ್ದಾರೆ. ಅದೇ ರೀತಿ ಅವರು ಒಂದು ಪದ್ಯ ಬರೆದುಕೊಂಡಿದ್ದಾರೆ. ಅದು ಯಾರನ್ನು ಉದ್ದೇಶಿಸಿ ಬರೆದಿದ್ದು ಎಂದು ಹೇಳುವುದು ಕಷ್ಟ. ತಮ್ಮನ್ನು ತುಳಿಯಲು ಪ್ರಯತ್ನಿಸುವ ಯಾರಿಗೇ ಆದರೂ ಇರಬಹುದು. ಒಟ್ಟಿನಲ್ಲಿ ಎಷ್ಟೇ ತುಳಿಯುವುದಕ್ಕೆ ಪ್ರಯತ್ನಿಸಿದರೂ, ಇನ್ನೊಂದು ರೀತಿಯಲ್ಲಿ ಎದ್ದು ಬರುತ್ತೇನೆ ಎನ್ನುವಂತಿದೆ ಈ ಪದ್ಯದ ತಾತ್ಪರ್ಯ.

ಇಷ್ಟಕ್ಕೂ ಈ ಪದ್ಯದಲ್ಲೇನಿದೆ. ನೀವೇ ಓದಿ ...

ಸುಟ್ಟು ಸುಟ್ಟು ಸುಟ್ಟಾಕು ನನ್ನ

ಸುಟ್ಟು ಬೆಳಕಾಗಿ ಉರಿವೆ!

ಮುಚ್ಚಾಕು ಮಣ್ಣಲ್ಲೇ ನನ್ನ

ಮರವಾಗಿ ಬೆಳೆವೆ!

ಹಾರಾಡೋ ಹಕ್ಕಿಗೆ ಇಲ್ಲಿ

ಯಾವುದೇ ಗಡಿಯ ಹಂಗು!

ಹಸಿದಂತ ಮಂದಿಗೆ ಇಲ್ಲಿ

ಗೆಲ್ಲೋದೊಂದೇ ಗಂಗು!

ಧಮ್​ ಇದ್ರೆ ಹೊಡಿ ನನ್ನ

ದಿಲ್​ ಇದ್ರೆ ತಡಿ ನನ್ನ!

- ಡಾಲಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net