More

    ಬಾಲಿವುಡ್​ನಲ್ಲಿ ಕನ್ನಡ ನಿರ್ದೇಶಕರು; ಹಿಂದಿಯಲ್ಲಿ ಪವನ್, ಹರಿ, ರಾಜ್ ಆ್ಯಕ್ಷನ್-ಕಟ್

    ಕನ್ನಡದ ಸಿನಿಮಾಗಳು ಪ್ಯಾನ್ ಇಂಡಿಯಾ ಸದ್ದು ಮಾಡುತ್ತಿವೆ. ‘ಕೆಜಿಎಫ್ ಚಾಪ್ಟರ್ 2’, ‘ಕಾಂತಾರ’ ಸಿನಿಮಾಗಳನ್ನು ನೋಡಿ, ಬಾಲಿವುಡ್ ಕೂಡ ಬೆಚ್ಚಿಬಿದ್ದಿದೆ. ಅದರ ನಡುವೆಯೇ ಕನ್ನಡದ ಕೆಲವು ನಿರ್ದೇಶಕರು ಬಾಲಿವುಡ್​ನತ್ತ ಮುಖ ಮಾಡಿದ್ದು, ಹಿಂದಿ ಚಿತ್ರಗಳಿಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಪುಟ್ಟಣ್ಣ ಕಣಗಾಲ್, ಗಿರೀಶ್ ಕಾರ್ನಾಡ್, ರಾಜೇಂದ್ರ ಸಿಂಗ್ ಬಾಬು ಅವರಂತಹ ದಿಗ್ಗಜರು, ಈ ಹಿಂದೆಯೇ ಬೇರೆ ಭಾಷೆಗಳಲ್ಲಿ ಸಿನಿಮಾ ನಿರ್ದೇಶಿಸಿದ್ದರು. ರಾಮ್ೋಪಾಲ್ ವರ್ವ, ಪೂರಿ ಜಗನ್ನಾಥ್, ಮಣಿರತ್ನಂ ಅವರಂತಹ ಪರಭಾಷಾ ನಿರ್ದೇಶಕರು, ಕನ್ನಡದಲ್ಲೂ ಸಿನಿಮಾ ಮಾಡಿದ್ದಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಪ್ಯಾನ್ ಇಂಡಿಯಾ ಟ್ರೆಂಡ್ ಜೋರಾಗಿದ್ದು, ಅದರ ನಡುವೆಯೇ ಕನ್ನಡದ ಮೂವರು ನಿರ್ದೇಶಕರು ಹಿಂದಿ ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

    | ಹರ್ಷವರ್ಧನ್ ಬ್ಯಾಡನೂರು ಬೆಂಗಳೂರು

    ಹರಿ ಸಂತು ಪಪ್ಪಿ ಲವ್!

    ನಿರ್ದೇಶಕ ಹರಿ ಸಂತೋಷ್ ಕೂಡ ಸದ್ಯ ಬಾಲಿವುಡ್​ನಲ್ಲಿ ಬಿಜಿಯಾಗಿದ್ದಾರೆ. ‘ಅಲೆಮಾರಿ’, ‘ಡವ್’, ‘ಡಾರ್ಲಿಂಗ್’, ‘ಕಾಲೇಜ್ ಕುಮಾರ’, ‘ಬಿಚ್ಚುಗತ್ತಿ’ ಜತೆಗೆ ಕಳೆದ ವರ್ಷ ‘ಬೈಟೂ ಲವ್’ ಚಿತ್ರ ನಿರ್ದೇಶಿಸಿದ್ದ ಹರಿ ಸಂತೋಷ್, ಇದೀಗ ‘ಪಪ್ಪಿ ಲವ್’ ಎಂಬ ಹಿಂದಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ‘ಇತ್ತೀಚೆಗಷ್ಟೆ ಲಂಡನ್ ಶೆಡ್ಯುಲ್ ಮುಗಿಸಿಕೊಂಡು ವಾಪಸ್ ಬಂದಿದ್ದೇನೆ. 35 ದಿನಗಳ ಕಾಲ ಅಲ್ಲಿ ಶೂಟಿಂಗ್ ಮಾಡಿದೆ. ಇನ್ನು ಶೇಕಡಾ 30ರಷ್ಟು ಚಿತ್ರೀಕರಣ ಬಾಕಿಯಿದೆ. ದೆಹಲಿಯಲ್ಲಿ ಇದೇ ತಿಂಗಳು ಹೊಸ ಶೆಡ್ಯುಲ್ ಪ್ರಾರಂಭವಾಗಲಿದೆ. ‘ಪಪ್ಪಿ ಲವ್’ ನೈಜ ಘಟನೆಗಳ ಆಧಾರಿತ ಚಿತ್ರ. ಬೆಂಗಳೂರಿನ ಹುಡುಗನೊಬ್ಬ ಹೊರದೇಶಕ್ಕೆ ಹೋದಾಗ ನಡೆದ ಘಟನೆ ಸುತ್ತ ಚಿತ್ರದ ಕಥೆ ಸುತ್ತುತ್ತದೆ. ಚಿತ್ರದಲ್ಲಿ ತನುಜ್ ವೀರ್ವಾನಿ ನಾಯಕನಾಗಿ ನಟಿಸುತ್ತಿದ್ದಾರೆ. ಸಿನಿಮಾ ತುಂಬ ಚೆನ್ನಾಗಿ ಮೂಡಿಬರುತ್ತಿದೆ. ನೇರವಾಗಿ ಓಟಿಟಿಯಲ್ಲಿ ಬಿಡುಗಡೆ ಮಾಡಲಿದ್ದೇವೆ. ಜತೆಗೆ ಕೆಲವೇ ದಿನಗಳಲ್ಲಿ ಕನ್ನಡದಲ್ಲೂ ಹೊಸ ಸಿನಿಮಾ ಘೋಷಣೆ ಮಾಡಲಿದ್ದೇನೆ’ ಎಂದು ತಮ್ಮ ಬಾಲಿವುಡ್ ಡೆಬ್ಯೂ ಹಾಗೂ ಮುಂದಿನ ಚಿತ್ರದ ಬಗ್ಗೆ ಹೇಳಿಕೊಳ್ಳುತ್ತಾರೆ ಹರಿ.

    ಪವನ್ ಒಡೆಯರ್ ನೋಟರಿ

    ನಿರ್ದೇಶಕ ಪವನ್ ಒಡೆಯರ್ ಕಳೆದ ಒಂದು ವರ್ಷದಿಂದ ಬಾಲಿವುಡ್ ಚಿತ್ರದ ನಿರ್ದೇಶನದಲ್ಲಿ ಬಿಜಿಯಿದ್ದಾರೆ. ಕಳೆದ ಡಿಸೆಂಬರ್​ನಲ್ಲಿ ತೆರೆಕಂಡ ‘ರೇಮೊ’ ಪ್ರಚಾರಕ್ಕಾಗಿ ಬ್ರೇಕ್​ನಲ್ಲಿದ್ದ ಅವರು, ಇದೀಗ ಮತ್ತೆ ಮೊದಲ ಹಿಂದಿ ಚಿತ್ರದ ಕೆಲಸಗಳಲ್ಲಿ ತೊಡಗಿದ್ದಾರೆ. ಚಿತ್ರದ ಹೆಸರು ‘ನೋಟರಿ’. ‘ನನ್ನ ಸಿನಿಮಾಗಳ ರಿಮೇಕ್ ಮತ್ತು ಡಬ್ಬಿಂಗ್​ಗೆ ಮೊದಲಿಂದಲೂ ಬೇಡಿಕೆಯಿತ್ತು. ‘ಗೂಗ್ಲಿ’, ‘ರಣವಿಕ್ರಮ’ ಚಿತ್ರಗಳಿಗೆ ಡಬ್ಬಿಂಗ್​ಗೆ ಆಗಲೇ ಕೇಳಿದ್ದರು. ‘ಗೋವಿಂದಾಯ ನಮಃ’ ಚಿತ್ರದ ತೆಲುಗು ರಿಮೇಕ್ ‘ಪೋಟುಗಾಡು’ ನಾನೇ ನಿರ್ದೇಶಿಸಿದ್ದೆ. ಆದರೆ, ನೇರವಾಗಿ ಒಂದು ಹಿಂದಿ ಸಿನಿಮಾ ಮಾಡಬೇಕು ಅಂತಂದುಕೊಂಡಿದ್ದೆ. ಅನುಷ್ಕಾ ಶರ್ವ, ರವೀನಾ ಟಂಡನ್, ವಿದ್ಯಾ ಬಾಲನ್ ಅಂತಹ ಸ್ಟಾರ್ ನಟಿಯರ ಜತೆ ಆಕ್ಟ್ ಮಾಡಿರುವ ಪರಂಬ್ರತಾ ಚಟರ್ಜಿ ‘ನೋಟರಿ’ ನಾಯಕ. ಅವರಿಗೆ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಪತ್ನಿ, ಗೀತಾ ಬಸ್ರಾ ನಾಯಕಿಯಾಗಿದ್ದಾರೆ. ಇದು ಗೀತಾ ಕಮ್್ಯಾಕ್ ಸಿನಿಮಾ ಕೂಡ. ಜತೆಗೆ ಮನೋಜ್ ಜೋಶಿ, ದಲೀಪ್ ತಾಹಿಲ್​ರಂತಹ ದಿಗ್ಗಜ ನಟರು ಪ್ರಮುಖ ತಾರಾಗಣದಲ್ಲಿದ್ದಾರೆ. ಇದೊಂದು ವಿಡಂಬನಾತ್ಮಕ ಹಾಸ್ಯ ಚಿತ್ರ. ಸದ್ಯ ಸಿನಿಮಾದ ಎಡಿಟಿಂಗ್ ಕೆಲಸಗಳು ನಡೆಯುತ್ತಿವೆ’ ಎಂದು ತಮ್ಮ ಮೊದಲ ಹಿಂದಿ ಚಿತ್ರದ ಬಗ್ಗೆ ಹೇಳಿಕೊಳ್ಳುವ ಪವನ್ ಒಡೆಯರ್, ಮಾರ್ಚ್ ಅಥವಾ ಏಪ್ರಿಲ್​ನಲ್ಲಿ ‘ನೋಟರಿ’ ಬಿಡುಗಡೆ ಮಾಡುವ ಆಲೋಚನೆಯಲ್ಲಿದ್ದಾರೆ.

    ಇಂದು ತೆರೆಗೆ ಗಿರಿದೇವ್ ರಾಜ್ ವೈ

    ಈ ಹಿಂದೆ ‘ಜೀರೋ, ಮೇಡ್ ಇನ್ ಇಂಡಿಯಾ’ ಎಂಬ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ಗಿರಿದೇವ್ ರಾಜ್, ಇದೀಗ ‘ವೈ’ ಎಂಬ ಬಾಲಿವುಡ್ ಚಿತ್ರ ನಿರ್ದೇಶಿಸಿದ್ದಾರೆ. ಇದೊಂದು ಸೈಕಲಾಜಿಕಲ್ ಹಾರರ್ ಚಿತ್ರವಾಗಿದ್ದು, ಇಂದು ದೇಶಾದ್ಯಂತ ಬಿಡುಗಡೆಯಾಗುತ್ತಿದೆ. ವಿಶೇಷ ಅಂದರೆ ನಿರ್ದೇಶಕ ಗಿರಿದೇವ್ ರಾಜ್ ಮಾತ್ರವಲ್ಲ ನಾಯಕ ಯುವನ್ ಹರಿಹರನ್, ಛಾಯಾಗ್ರಾಹಕ ಕಾರ್ತಿಕ್ ಮಳ್ಳೂರ್ ಸೇರಿದಂತೆ ಬಹುತೇಕ ತಾಂತ್ರಿಕ ತಂಡ ಕನ್ನಡದವರೇ ಆಗಿದ್ದಾರೆ. ‘ನಾಯಕ ಯುವನ್ ಹರಿಹರನ್, ರೋಷನ್ ತನೇಜಾ ಆಕ್ಟಿಂಗ್ ಸ್ಕೂಲ್​ನಲ್ಲಿ ತರಬೇತಿ ಪಡೆದಿದ್ದಾರೆ ಮತ್ತು ನಾಯಕಿ ಲಯೋನಿಲಾಗೆ ಇದು ಮೊದಲ ಸಿನಿಮಾ. ಮುಂಬೈ, ಬೆಂಗಳೂರು, ಮಂಗಳೂರಿನಲ್ಲಿ ಚಿತ್ರೀಕರಣ ಮಾಡಿದ್ದೇವೆ. ‘ಕೆಜಿಎಫ್’, ‘ಕಾಂತಾರ’, ‘777 ಚಾರ್ಲಿ’ ಚಿತ್ರಗಳ ಬಳಿಕ ಪರಭಾಷೆಯವರು ಕನ್ನಡ ಚಿತ್ರರಂಗವನ್ನು ನೋಡುವ ರೀತಿಯೇ ಬದಲಾಗಿದೆ. ಗೌರವದಿಂದ ಕಾಣುತ್ತಾರೆ. ಕನ್ನಡ ಚಿತ್ರಗಳ ಬಗ್ಗೆ ಅವರೇ ಮಾತನಾಡುತ್ತಾರೆ. ತುಂಬ ಹೆಮ್ಮೆಯೆನಿಸುತ್ತದೆ’ ಎಂದು ಖುಷಿಯಿಂದ ಹೇಳಿಕೊಳ್ಳುತ್ತಾರೆ ಗಿರಿದೇವ್ ರಾಜ್. ಅಂದಹಾಗೆ ಅವರ ಮುಂದಿನ ಚಿತ್ರ ಕೂಡ ಹಿಂದಿ ಪ್ರಾಜೆಕ್ಟ್ ಆಗಿರಲಿದೆಯಂತೆ.

    ಸ್ಮಶಾನದ ಹಾದಿಯಲ್ಲಿ ಕಣ್ಣು ತೆರೆದ ‘ಶವ’!; ಮಹಿಳೆ ಮೃತಪಟ್ಟಳು ಎಂದು ವೈದ್ಯರು ದೃಢೀಕರಿಸಿದ್ದರೂ ಸಂಭವಿಸಿದ ಅಚ್ಚರಿ!

    ಮನೆ ಬಾಗಿಲಲ್ಲಿ ಕಸ, ಬೆಡ್​ರೂಮ್​ನಲ್ಲಿದ್ದ ಚಿನ್ನಾಭರಣ ನಾಪತ್ತೆ; ಎಚ್ಚರಿಕೆ ಸಾರ್ವಜನಿಕರೇ.. ಈ ಬಗ್ಗೆ ಇರಲಿ ಗಮನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts