ಅಡುಗೆ ಅನಿಲ ಸಿಲಿಂಡರ್​ ಸ್ಫೋಟಗೊಂಡು ತಾಯಿ, ಮಗಳು ಸಾವು

Death
Published on

ಬಳ್ಳಾರಿ: ಅಡುಗೆ ಅನಿಲ ಸಿಲಿಂಡರ್​ ಸ್ಫೋಟಗೊಂಡು ತಾಯಿ ಹಾಗೂ ಮಗಳು ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ಸಂಜೀವರಾಯನ ಕೋಟೆಯಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ.

ಪಾರ್ವತಿ ಹಾಗೂ ಹುಲಿಗೆಮ್ಮ ಮೃತಪಟ್ಟವರು. ಇಂದು ಬೆಳಗ್ಗೆ ಅಡುಗೆ ಮಾಡಲು ಸ್ಟೌವ್​ ಹಚ್ಚಲು ತೆರಳಿದ ವೇಳೆ ಸಿಲಿಂಡರ್​ ಸ್ಫೋಟಗೊಂಡಿದೆ. ಸಿಲಿಂಡರ್​ನಲ್ಲಿ ಅನಿಲ ಸೋರಿಕೆಯಾದ್ದರಿಂದ ಸ್ಫೋಟಗೊಂಡಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

ಸಿಲಿಂಡರ್​ ಸ್ಫೋಟಕ್ಕೆ ಮನೆ ಜಖಂಗೊಂಡಿದೆ ಎಂದು ತಿಳಿದು ಬಂದಿದೆ. ಬಳ್ಳಾರಿ ಗ್ರಾಮಾಂತರ ಪೊಲೀಸರು ಪರಿಶೀಲನೆ ನಡೆಸಿ ಕೇಸು ದಾಖಲಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net