ತೀವ್ರ ಸ್ವರೂಪ ಪಡೆದುಕೊಂಡ ಹಮೂನ್ ಚಂಡಮಾರುತ; 7 ರಾಜ್ಯಗಳಲ್ಲಿ ಕಟ್ಟೆಚ್ಚರ

Hamoon Cyclone
Published on

ನವದೆಹಲಿ: ಬಂಗಾಳ ಕೊಲ್ಲಿಯಲ್ಲಿ ಹಮೂನ್​ ಚಂಡಮಾರುತ ತೀವ್ರ ಸ್ವರೂಪ ಪಡೆದಿದ್ದು, 7 ರಾಜ್ಯಗಳಲ್ಲಿ ಕಟ್ಟೆಚ್ಚರ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಈ ಕುರಿತು ಪ್ರಕಟಣೆ ಒಂದನ್ನು ಹೊರಡಿಸಿರುವ ಹವಾಮಾನ ಇಲಾಖೆ ವಾಯುವ್ಯ ಬಂಗಾಳ ಕೊಲ್ಲಿಯಲ್ಲಿ ಹಮೂನ್ ಚಂಡಮಾರುತವು ತೀವ್ರ ಸ್ವರೂಪ ಪಡೆದಿದ್ದು, ಈಶಾನ್ಯದತ್ತ ಚಲಿಸುವ ಸಾಧ್ಯತೆಯಿದೆ ಎಂದು ಮಾಹಿತಿ ನೀಡಿದೆ.

ಮುಂದಿನ ಆರು ತಾಸಿನೊಳಗೆ ಹಮೂನ್ ಚಂಡಮಾರುತ ತೀವ್ರ ಸ್ವರೂಪ ಪಡೆಯಲಿದ್ದು, ಈಶಾನ್ಯದತ್ತ ಚಲಿಸುವಾಗ ಕ್ರಮೇಣ ದುರ್ಬಗೊಳ್ಳಲಿದೆ. ಘಂಟೆಗೆ 65 ರಿಂದ 75 ಕಿಲೋಮೀಟರ್ ಮೇಗದಲ್ಲಿ ಗಾಳಿ ಬೀಸಲಿದೆ. ಆಕ್ಟೋಬರ್ 25ರ ವೇಳೆಗೆ ಚಂಡಮಾರುತವು ಬಾಂಗ್ಲಾದೇಶದ ಕೆಪುಪಾರಾ ಮತ್ತು ಚಿತ್ತಗಾಂಗ್ ಪ್ರದೇಶವನ್ನು ದಾಟಲಿದೆ.

ಹಮೂನ್​ ಚಂಡಮಾರುತ ತೀವ್ರ ಸ್ವರೂಪ ಪಡೆದುಕೊಂಡ ಬೆನ್ನಲ್ಲೇ ಒಡಿಶಾ, ಪಶ್ಚಿಮ ಬಂಗಾಳ, ಮಣಿಪುರ, ತ್ರಿಪುರ, ಮಿಜೋರಾಂ, ಅಸ್ಸಾಂ ಮತ್ತು ಮೇಘಾಲಯದಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net