ಟೂರ್​ ಡಿ ಫ್ರಾನ್ಸ್​ಗೆ ಭಾರತದ ಹರ್ಷಿತಾ ಜಾಖಡ್​

ಟೂರ್​ ಡಿ ಫ್ರಾನ್ಸ್​ಗೆ ಭಾರತದ ಹರ್ಷಿತಾ ಜಾಖಡ್​
ಟೂರ್​ ಡಿ ಫ್ರಾನ್ಸ್​ಗೆ ಭಾರತದ ಹರ್ಷಿತಾ ಜಾಖಡ್​
Published on

ಐಗ್ಲೆ (ಸ್ವಿರ್ಜಲೆಂಡ್​): ಯುವ ಸೈಕ್ಲಿಸ್ಟ್​ ಹರ್ಷಿತಾ ಜಾಖಡ್​ ಪ್ರತಿಷ್ಠಿತ ಮಹಿಳೆಯರ ಟೂರ್​ ಡಿ ಫ್ರಾನ್ಸ್​ನಲ್ಲಿ (

Tour de France

) ಭಾಗವಹಿಸಿದ ಮೊದಲ ಭಾರತೀಯರೆನಿಸಿದ್ದಾರೆ.


ರಾಜಸ್ಥಾನದ 19 ವರ್ಷದ ಹರ್ಷಿತಾ, ಭಾನುವಾರ ಆರಂಭಗೊಂಡಿರುವ ಕೂಟದ ಸ್ಟೇಜ್​ 2ರಲ್ಲಿ ಅ್ಘಾನಿಸ್ತಾನ, ಅಲ್ಜೀರಿಯಾ, ಚಿಲಿ, ಇಥಿಯೋಪಿಯಾ, ನಮೀಬಿಯಾ, ಉಗಾಂಡದ ಆಯ್ದ ಸೈಕ್ಲಿಸ್ಟ್​ಗಳ ಜತೆ 4.5 ಕಿಮೀ ರೇಸ್​ನಲ್ಲಿ ಭಾಗವಹಿಸಿದರು.

2010ರ ಕಾಮನ್ವೆಲ್ತ್​ ಗೇಮ್ಸ್​ನಲ್ಲಿ ಸ್ಪರ್ಧಿಸಿದ್ದ ಸೈಕ್ಲಿಸ್ಟ್​ ರಾಕೇಶ್​ ಜಾಖಡ್​ ಪುತ್ರಿಯಾಗಿರುವ ಹರ್ಷಿತಾ, ಭಾರತೀಯ ಸೈಕ್ಲಿಂಗ್​ನಲ್ಲಿ ಇತ್ತೀಚೆಗೆ ಸೀನಿಯರ್​&ಜೂನಿಯರ್​ ವಿಭಾಗದಲ್ಲಿ ಬಹುತೇಕ ಎಲ್ಲ ಪದಕಗಳನ್ನು ಗೆದ್ದಿದ್ದರು. ಏಷ್ಯಾಡ್​ನಲ್ಲಿ ಅಗ್ರ 10ರೊಳಗೆ ಸ್ಥಾನ ಪಡೆಯುವುದು ಅವರ ಗುರಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net