ಮಾಲಿನ್ಯ ಮುಕ್ತ ಭಾರತಕ್ಕೆ ಸೈಕಲ್ ಯಾತ್ರೆ

polution free
Published on

ಉಪ್ಪಿನಂಗಡಿ: ಪ್ರಧಾನಿ ನರೇಂದ್ರ ಮೋದಿಯವರ ಕಲ್ಪನೆಯ ಮಾಲಿನ್ಯ ಮುಕ್ತ ಭಾರತ ಸಾಕಾರಗೊಳಿಸುವ ನಿಟ್ಟಿನಲ್ಲಿ ಜನಜಾಗೃತಿಗಾಗಿ ಏಕಾಂಗಿಯಾಗಿ ಸೈಕಲ್ ಯಾತ್ರೆ ಕೈಗೊಂಡಿರುವ ಬೃಜೇಶ್ ಶರ್ಮ(33) ಭಾನುವಾರ ಉಪ್ಪಿನಂಗಡಿಗೆ ಆಗಮಿಸಿದರು.

ಸೈಕಲ್‌ನಲ್ಲಿ ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆಯಲ್ಲಿ ಸೈಕಲ್ ದೂಡಿಕೊಂಡು ಬಂದ ಬೃಜೇಶ್ ಅವರ ಸಂಕಷ್ಟ ಕಂಡು ಇಲ್ಲಿನ ರಿಕ್ಷಾ ಚಾಲಕರು ಸಹಾಯಕ್ಕೆ ಮುಂದಾದರು. ಪ್ಲಾಸ್ಟಿಕ್ ಬಳಕೆ ದುಷ್ಪರಿಣಾಮಗಳ ಬಗ್ಗೆ ಅರಿವು, ಸಾವಯವ ಕೃಷಿಯ ಮಹತ್ವ ಪ್ರಸಾರಿಸಬೇಕು ಎಂಬಿತ್ಯಾದಿ ಉದ್ದೇಶದಿಂದ 2019ರ ಸೆಪ್ಟೆಂಬರ್ 17ರಂದು ಪ್ರಾರಂಭಿಸಿದ ಸೈಕಲ್ ಯಾತ್ರೆ ಈಗಾಗಲೇ 9 ರಾಜ್ಯ ಸಂದರ್ಶಿಸಿ ಕರ್ನಾಟಕ ಪ್ರವೇಶಿಸಿದೆ. ದೇಶದ ಪ್ರಾಕೃತಿಕ ಸೊಬಗನ್ನು ಕಣ್ಣಾರೆ ಕಾಣುವ ಸೌಭಾಗ್ಯ ನನಗೊದಗಿದೆ ಎಂದು ವಿವರಿಸಿದ ಬೃಜೇಶ್, ಈಗಾಗಲೇ 36,000 ಕಿ.ಮೀ. ಕ್ರಮಿಸಿ 32 ಲಕ್ಷ ವಿದ್ಯಾರ್ಥಿಗಳನ್ನು, 9 ಲಕ್ಷ ರೈತರನ್ನು ಸಂಪರ್ಕಿಸಿ ಮಾಲಿನ್ಯ ರಹಿತ ದೇಶದ ನಿರ್ಮಾಣಕ್ಕೆ ಕೈ ಜೋಡಿಸಲು ವಿನಂತಿಸಲಾಗಿದೆ ಎಂದರು.

ಉಪ್ಪಿನಂಗಡಿಯ ಸಾಮಾಜಿಕ ಮುಂದಾಳು ಕೈಲಾರ್ ರಾಜಗೋಪಾಲ ಭಟ್ ಅವರಿಗೆ ಆತಿಥ್ಯ ಒದಗಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net