

ಬೆಂಗಳೂರು: ವಾಟ್ಸ್‌ಆ್ಯಪ್,ಟೆಲಿಗ್ರಾಮ್‌ಗೆ ಆ್ಯಂಡ್ರೇಡ್ ಪ್ಯಾಕೇಜ್ ಕಿಟ್ (ಎಪಿಕೆ) ಫೈಲ್ ಗಳನ್ನು ನಾನ ಸ್ವರೂಪ ಮತ್ತು ಹೆಸರಿನಲ್ಲಿ ಸೈಬರ್ ಕಳ್ಳರು ಕಳುಹಿಸಿ ವಂಚಿಸುತ್ತಿದ್ದಾರೆ.
ಇತ್ತೀಚೆಗೆ ಮದುವೆ ಆಹ್ವಾನ ಪತ್ರಿಕೆ ಸೋಗಿನಲ್ಲಿ ಎಪಿಕೆ ಫೈಲ್ ಕಳುಹಿಸಿ ಬ್ಯಾಂಕ್ ಖಾತೆಗೆ ಕನ್ನ ಹಾಕುತ್ತಿದ್ದಾರೆ. ಪ್ರತಿಯೊಂದು ರಂಗವೂ ಡಿಜಿಟಲ್ ಸ್ವರೂಪ ಪಡೆಯುತ್ತಿದ್ದು, ಅದೇ ರೀತಿಯಾಗಿ ಲಗ್ನ ಪತ್ರಿಕೆಗಳು ಸಹ ಡಿಜಿಟಲ್ ಟಚ್ ಪಡೆದಿದೆ. ವರ-ವಧುವಿನ ಪೋಟೋ ಜತೆಗೆ ವಿಡಿಯೋ ಸಮೇತ ಲಗ್ನ ಪತ್ರಿಕೆ ಸಿದ್ದಪಡಿಸಿ ವಾಟ್ಸ್‌ಆ್ಯಪ್ ಅಥವಾ ಟೆಲಿಗ್ರಾಂ ಗ್ರೂಪ್‌ಗೆ ಕಳುಹಿಸಿ ಸ್ನೇಹಿತರನ್ನು ಮತ್ತು ಸಂಬಂಧಿಕರನ್ನು ಕರೆಯುವುದು ಸರ್ವೆಸಾಮಾನ್ಯವಾಗಿದೆ.
ಇದನ್ನೇ ದುರ್ಬಳಕ್ಕೆ ಮಾಡಿಕೊಂಡ ಸೈಬರ್ ಕಳ್ಳರು, ವೆಡ್ಡಿಂಗ್ ಕಾರ್ಡ್ ಸೋಗಿನಲ್ಲಿ ಎಪಿಕೆ ಫೈಲ್ ಕಳುಹಿಸಿ ಬ್ಯಾಂಕ್ ಖಾತೆ, ವ್ಯಾಲೆಟ್ ಮತ್ತು ನೆಟ್‌ಬ್ಯಾಂಕಿಂಗ್‌ಗೆ ಕನ್ನ ಹಾಕುತ್ತಿದ್ದಾರೆ. ಇದಕ್ಕೂ ಮೊದಲು ಕ್ರೆಡಿಟ್, ಡೆಬಿಟ್ ಕಾರ್ಡ್‌ಗೆ ರಿವಾರ್ಡ್ ಪಾಯಿಂಟ್ಸ್ ಬಂದಿದೆ.
ಆನ್‌ಲೈನ್‌ನಲ್ಲಿ ಬೆಸ್ಕಾಂ, ನೀರಿನ ಬಿಲ್, ಆಸ್ತಿ ತೆರಿಗೆಯನ್ನು ಆನ್‌ಲೈನ್‌ನಲ್ಲಿ ಪಾವತಿಸಲು ಈ ಫೈಲ್ ಮೇಲೆ ಕ್ಲಿಕ್ ಮಾಡಿದರೆ ಸಾಕು ಎಂದು ದಾರಿತಪ್ಪಿಸುತ್ತಿದ್ದರು. ಬಹುತೇಕ ಎಪಿಕೆ ಫೈಲ್ ಗಳನ್ನು ಆಯಾ ಗ್ರೂಪ್‌ನ್ನು ಹ್ಯಾಕ್ ಮಾಡಿ ಅದರಲ್ಲಿನ ಒಂದು ನಂಬರ್ ಬಳಸಿಕೊಂಡು ಡಿಪಿಗೆ ಸಂಬಂಧಪಟ್ಟ ಸಂಸ್ಥೆಯ ಲೋಗೋ ಬಳಸಿಕೊಂಡು ಎಪಿಕೆ ಫೈಲ್ ಕಳುಹಿಸುತ್ತಾರೆ.
ಇದನ್ನು ನಂಬಿ ಎಪಿಕೆ ೈಲ್‌ಗಳನ್ನು ಡೌನ್‌ಲೋಡ್ ಮಾಡಿಕೊಂಡರೇ ಮೊದಲ ಹಂತದಲ್ಲಿ ಬ್ಯಾಂಕ್ ಖಾತೆ ವಿವರ ಕೇಳಲಿದ್ದು, ಮಾಹಿತಿ ಭರ್ತಿ ಮಾಡಿದರೆ ಸಾಕು ಬ್ಯಾಂಕ್ ಖಾತೆಯನ್ನು ಹ್ಯಾಕ್ ಮಾಡಿ ಅದರಲ್ಲಿನ ಹಣವನ್ನು ತಮ್ಮ ಖಾತೆಗೆ ವರ್ಗಾವಣೆ ಮಾಡಿಕೊಳ್ಳುತ್ತಾರೆ.
ಕೆಲವೊಂದು ಸಮಯದಲ್ಲಿ ಎಪಿಕೆ ಫೈಲ್ ಡೌನ್‌ಲೋಡ್ ಮಾಡಿಕೊಂಡ ಕೂಡಲೇ ಮೊಬೈಲ್ ಹ್ಯಾಕ್ ಆಗುವ ಸಾಧ್ಯತೆಗಳಿವೆ. ಆಗ ಮೊಬೈಲ್ ಬಳಕೆ ಮಾಡುವ ಕಂಟ್ರೋಲ್ ಪೂರ್ಣ ಸೈಬರ್ ಕಳ್ಳರಿಗೆ ಲಭ್ಯವಾಗಿ ಅದರಲ್ಲಿನ ಡೇಟಾವನ್ನು ಕಳವು ಮಾಡುವ ಸಾಧ್ಯತೆಗಳು ಇರಲಿದೆ.
ಇದಲ್ಲದೆ, ಬ್ಯಾಂಕ್ ಖಾತೆ ಅಥವಾ ವ್ಯಾಲೆಟ್‌ಗೆ ಮೊಬೈಲ್ ನಂಬರ್ ಲಿಂಕ್ ಆಗಿದ್ದರೇ ಸ್ವಯಂ ಚಾಲಿತವಾಗಿ ಬ್ಯಾಂಕ್ ಖಾತೆಯಲ್ಲಿನ ಹಣ ಸೈಬರ್ ಕಳ್ಳರ ಪಾಲಾಗುತ್ತದೆ. ಆದರಿಂದ ಇಂತಹ ಎಪಿಕೆ ಅಪ್ಲೀಕೇಷನ್ ಮತ್ತು ಫೈಲ್ ಗಳು ಬಂದರೇ ಬಳಕೆ ಮಾಡದಂತೆ ಸೈಬರ್ ಕ್ರೈಂ ಪೊಲೀಸರು ಸಾರ್ವಜನಿಕರಿಗೆ ಸಲಹೆ ನೀಡಿದ್ದಾರೆ.
ಗ್ರೂಪ್ ಹ್ಯಾಕ್ :
ವಾಟ್ಸ್‌ಆ್ಯಪ್ ಮತ್ತು ಟೆಲಿಗ್ರಾಮ್ ಗ್ರೂಪ್‌ಗಳಿಗೂ ಎಪಿಕೆ ಫೈಲ್ ಗಳು ಬರುತ್ತಿವೆ. ಗ್ರೂಪ್‌ನಲ್ಲಿ ಇರುವ ವ್ಯಕ್ತಿಯ ಮೊಬೈಲ್‌ನ್ನು ಹ್ಯಾಕ್ ಮಾಡಿ ಆತನ ಹೆಸರಿನಲ್ಲಿ ಎಪಿಕೆ ಫೈಲ್ ಗಳು ಸೆಂಡ್ ಮಾಡುತ್ತಾರೆ. ಆಗ ಡಿಪಿ ಲೋಗೋ ಬಳಕೆ ಮಾಡಿರುತ್ತಾರೆ. ಮೊಬೈಲ್ ನಂಬರ್ ಸೇಮ್ ಇರಲಿದ್ದು, ನೈಜ ವ್ಯಕ್ತಿಗೆ ಬಳಕೆ ಮಾಡಲು ಸಾಧ್ಯವಾಗುವುದಿಲ್ಲ. ಹ್ಯಾಕರ್ಸ್ ಗೆ ಮಾತ್ರ ಅವಕಾಶ ಇರಲಿದೆ. ಗ್ರೂಪ್ ಸದಸ್ಯನೇ ಕಳುಹಿಸಿರುವ ಅಪ್ಲೀಕೇಷನ್ ಅಥವಾ ಫೈಲ್ ಎಂದು ನಂಬಿ ಮೋಸಕ್ಕೆ ಒಳಗಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಇಂತಹ ಸಂದರ್ಭದಲ್ಲಿ ಸಹ ಸದಸ್ಯರು ಡಿಲೀಟ್ ಮಾಡಿ ಅರಿವು ಮೂಡಿಸುವುದು ಉತ್ತಮ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಏನಿದು ಎಪಿಕೆ :
ಆ್ಯಂಡ್ರೇಡ್ ಪ್ಯಾಕೇಜ್ ಕಿಟ್(ಎಪಿಕೆ) ಎಂಬ ಮಾಲ್‌ವೇರ್ ವೈರಸ್ ಕಳುಹಿಸುತ್ತಾರೆ. ಆಪರೇಟಿಂಗ್ ಸಿಸ್ಟಮ್, ಆ್ಯಪ್, ಅಪ್ಲಿಕೇಷನ್ ರವಾನೆ ಮತ್ತು ಇನ್‌ಸ್ಟಾಲ್ ಮಾಡುವ ಸಾಧನವಾಗಿದೆ. ಆ್ಯಂಡ್ರೇಡ್ ಅಪ್ಲಿಕೇಷನ್‌ನ್ನು ರನ್ ಮಾಡಲು ಮತ್ತು ಇನ್‌ಸ್ಟಾಲ್ ಮಾಡುವ ಎಲ್ಲ ಡೇಟಾ ಇದರಲ್ಲಿ ರವಾನೆ ಮಾಡುತ್ತಾರೆ. ಅದನ್ನು ನಮ್ಮ ಮೊಬೈಲ್ ಅಥವಾ ಲ್ಯಾಪ್‌ಟಾಪ್‌ನಲ್ಲಿ ರನ್ ಮಾಡಿದಾಗ ಹ್ಯಾಕ್ ಆಗಲಿದೆ.