ನಕಲಿ ಇನ್ಸ್ಟಾಗ್ರಾಂ ಖಾತೆಯ ಮೂಲಕ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಆನ್​ಲೈನ್ ಪೀಡಕನಿಗಾಯ್ತು ತಕ್ಕ ಶಾಸ್ತಿ

Crime 16 April 20
Published on

ಹೈದರಾಬಾದ್: ನಕಲಿ ಇನ್ಸ್ಟಾಗ್ರಾಂ ಖಾತೆಯ ಮೂಲಕ ಅಪ್ರಾಪ್ತ ಬಾಲಕಿಗೆ ಲೈಂಗಿಕ ದೃಶ್ಯಗಳಿರುವ ಫೋಟೋ ಮತ್ತು ಸಂದೇಶಗಳನ್ನು ಕಳುಹಿಸಿ ಕಿರುಕುಳ ನೀಡುತ್ತಿದ್ದ

ಇಲ್ಲಿಯ ಬಹದ್ದೂರ್‌ಪುರದ ಹೌಸಿಂಗ್ ಬೋರ್ಡ್ ಕಾಲೋನಿ ನಿವಾಸಿ 20 ವರ್ಷದ ದಾನಬೊಯಿನಾ ಶುಭಮ್ ಯಾದವ್ ಎಂಬಾತನನ್ನು ರಾಚಕೊಂಡ ಸೈಬರ್ ಅಪರಾಧ ಪೊಲೀಸರು ಜುಲೈ 6 ರಂದು ಬಂಧಿಸಿದ್ದಾರೆ.

ಸಂತ್ರಸ್ತ ಅಪ್ರಾಪ್ತ ಬಾಲಕಿ ನೀಡಿದ ದೂರಿನ ಆಧಾರದ ಮೇಲೆ ರಾಚಕೊಂಡ ಸೈಬರ್ ಅಪರಾಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ರಾಚಕೊಂಡ ಪೊಲೀಸ್ ಕಮಿಷನರ್ ಮಹೇಶ್ ಭಾಗವತ್ ತಿಳಿಸಿದ್ದಾರೆ.

ತನಿಖೆಯ ವೇಳೆ, ತಾಂತ್ರಿಕ ಸಾಕ್ಷ್ಯಗಳ ಆಧಾರದ ಮೇಲೆ, ಆರೋಪಿ ದಾನಬೊಯಿನಾ ಶುಭಮ್ ಯಾದವ್ ಎಂಬಾತನನ್ನು ಹೈದರಾಬಾದನ ಬಹದ್ದೂರಪುರದಲ್ಲಿರುವ ಆತನ ಮನೆಯಿಂದ ಬಂಧಿಸಲಾಗಿದೆ. ವಿಚಾರಣೆಯಲ್ಲಿ ಆತ ತಪ್ಪೊಪ್ಪಿಕೊಂಡಿದ್ದಾನೆ.

ವಿದ್ಯಾರ್ಥಿ ದೆಸೆಯಲ್ಲಿ ಆ ಬಾಲಕಿಯ ಸಹೋದರಿ ಅವನ ಸಹಪಾಠಿಯಾಗಿದ್ದಳು ಮತ್ತು ಅವರಿಬ್ಬರೂ ಉತ್ತಮ ಸ್ನೇಹಿತರಾಗಿದ್ದರೆಂದು ಆರೋಪಿ ತಿಳಿಸಿದ್ದಾನೆ.

ಆ ಸಮಯದಲ್ಲಿ ತನ್ನ ಮೊಬೈಲ್ ಫೋನ್‌ನಲ್ಲಿ ಅವಳೊಂದಿಗೆ ಫೋಟೋಗಳನ್ನು ತೆಗೆದುಕೊಂಡಿದ್ದ. ಕೆಲವು ದಿನಗಳ ನಂತರ ಅವರಿಬ್ಬರು ಒಟ್ಟಿಗೆ ಇದ್ದಾಗ ತೆಗೆದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡುವುದಾಗಿ ಬೆದರಿಕೆ ಹಾಕುವ ಮೂಲಕ ಆಕೆಯ ನಗ್ನ ಚಿತ್ರಗಳು ಮತ್ತು ವೀಡಿಯೊಗಳನ್ನು ಕಳುಹಿಸಲು ಪೀಡಿಸಲಾರಂಭಿಸಿದ. ಭಯದಿಂದಾಗಿ ಆಕೆ ತನ್ನ ಸಹೋದರಿ ಬಟ್ಟೆ ಬದಲಾಯಿಸುತ್ತಿರುವಾಗ ಫೋಟೊ ತೆಗೆದು ಆತನಿಗೆ ವಾಟ್ಸಾಪ್ ಮೂಲಕ ಹಂಚಿಕೊಂಡಿದ್ದಾಳೆ. ನಂತರ ಆತ ನಕಲಿ ಇನ್ಸ್ಟಾಗ್ರಾಂ ಖಾತೆ ಸೃಷ್ಟಿಸಿ ಆಕೆಯಿಂದ ಹಣ ಸುಲಿಗೆ ಮಾಡುವ ಉದ್ದೇಶದಿಂದ ಆ ವೀಡಿಯೊದ ಸ್ಕ್ರೀನ್‌ಶಾಟ್ ಚಿತ್ರಗಳನ್ನು, ಬ್ಲ್ಯಾಕ್‌ಮೇಲಿಂಗ್ ಸಂದೇಶಗಳನ್ನು ಸಂತ್ರಸ್ತೆಯ ಇನ್‌ಸ್ಟಾಗ್ರಾಮ್ ಖಾತೆಗೆ ಕಳುಹಿಸಲು ಪ್ರಾರಂಭಿಸಿದ.

ಅವಳು ಹಣ ನೀಡಲು ನಿರಾಕರಿಸಿದರೆ ಆತ ಆ ವೀಡಿಯೊವನ್ನು ಸೋಷಿಯಲ್ ಮೀಡಿಯಾಗಳಲ್ಲಿ ಅಪ್‌ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದ.

ಇಂಟರ್​​ನೆಟ್ ಬಳಕೆದಾರರು, ಅದೂ ವಿಶೇಷವಾಗಿ ಹುಡುಗಿಯರು, ಯಾವುದೇ ವೈಯಕ್ತಿಕ ಫೋಟೋಗಳು / ವೀಡಿಯೊಗಳನ್ನು ಸ್ನೇಹಿತರಿಗೆ ಅಥವಾ ಅಪರಿಚಿತರಿಗೆ ಹಂಚಿಕೊಂಡು ಬಲಿಪಶುವಾಗಬಾರದು. ಪರಿಹಾರಕ್ಕಾಗಿ ಸೈಬರ್ ಅಪರಾಧ ಪೊಲೀಸರನ್ನು ಸಂಪರ್ಕಿಸಲು ವಿಳಂಬ ಮಾಡಬಾರದೆಂದು ಎಂದು ಆಯುಕ್ತ ಭಾಗವತ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net