

ಅಹಮದಾಬಾದ್: ಪೊಲೀಸ್ ಅಧಿಕಾರಿಗಳು ಎಂದು ಹೇಳಿಕೊಂಡ ಸೈಬರ್ ಖದೀಮರು(Cyber Criminals) ಇಲ್ಲಿನ ಬಿಲ್ಡರ್ ಒಬ್ಬರಿಗೆ ಬರೊಬ್ಬರಿ 1 ಕೋಟಿ ರೂ. ವಂಚಿಸಿದ ಘಟನೆ ಬೆಳಕಿಗೆ ಬಂದಿದೆ.
ಅಧಿಕಾರಿಗಳ ಸೋಗಿನಲ್ಲಿ ನನಗೆ 1 ಕೋಟಿ ರೂ ವಂಚಿಸಿದ್ದಾರೆ ಎಂದು ಆರೋಪಿಸಿ, ಈ ಬಗ್ಗೆ ಬಿಲ್ಡರ್ (ಹೆಸರು ಉಲ್ಲೇಖಿಸಿಲ್ಲ) ಅಹಮದಬಾದ್ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಮೇರೆಗೆ ಕೇಸ್ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಪ್ರಕರಣದ ಹಿನ್ನೆಲೆ:
ಇದೇ ವರ್ಷ ಜು.3 ರಂದು ಖದೀಮರು ಬಿಲ್ಡರ್ಗೆ ಕರೆ ಮಾಡಿದ್ದು, ''ಮುಂಬೈನ ಅಂದೇರಿ ಫೆಡ್ಎಕ್ಸ್ ಕೊರಿಯರ್ ಕಂಪನಿಯ ಪ್ರತಿನಿಧಿ ಎಂದು ಹೇಳಿಕೊಂಡ ವ್ಯಕ್ತಿ. ಈ ಪಾರ್ಸೆಲ್ನಲ್ಲಿ 550 ಗ್ರಾಂ ಡ್ರಗ್ಸ್ ಇದೆ. ಹೀಗಾಗಿ, ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್ಸಿಬಿ) ಅಧಿಕಾರಿಗಳು ನಿಮ್ಮ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಹೇಳಿ ಕರೆ ಕಟ್ ಮಾಡಿದ್ದಾನೆ. ಬಳಿಕ ಎನ್ಸಿಬಿ ಅಧಿಕಾರಿಗಳು ಎಂದು ವಿಡಿಯೋ ಕಾಲ್ ಮಾಡಿ, ಡ್ರಗ್ಸ್ ಬಗ್ಗೆ ಹೇಳಿಕೆ ನೀಡುವಂತೆ ಒತ್ತಾಯಿಸಿದ್ದಾರೆ. ಬಳಿಕ ಸ್ಕೈಪ್ ವಿಡಿಯೋ ಕಾಲ್ ಮೂಲಕ ಕರೆ ಮಾಡಿ, ನಾನು ಪ್ರದೀಪ್ ಸಾವಂತ್ ಈ ಠಾಣೆಯ ಅಧಿಕಾರಿ ಎಂದು ವಿಡಿಯೋದಲ್ಲಿ ತೋರಿಸಿದ್ದಾನೆ.
ಈ ಕೇಸ್ ಅನ್ನು ಇಡಿ, ಸಿಬಿಐಗೆ ವಹಿಸಲಾಗುವುದು ಎಂದು ಬೆದರಿಸಿದ್ದಾರೆ. ಅಲ್ಲದೇ, ಇತ್ತೀಚಿಗೆ ಬಿಲ್ಡರ್ 50 ಕೋಟಿ ರೂ. ಭೂ ವ್ಯವಹಾರದ ಬಗ್ಗೆ ದಾಖಲೆ ಸಮೇತ ವಿವರಿಸಿದ್ದಾರೆ. ಬಳಿಕ ಕೊನೆಯ ಅವಕಾಶ ಕೊಡುವುದಾಗಿ ಹೇಳಿ, 1 ಕೋಟಿ ರೂ. ಕೊಟ್ಟರೆ ಪ್ರಕರಣವನ್ನು ಮುಚ್ಚಿ ಹಾಕಲಾಗುವುದು ಎಂದು ನಂಬಿಸಿ ಬ್ಯಾಂಕ್ ಮೂಲಕ ಖದೀಮರು ತಮ್ಮ ಖಾತೆ ಹಣ ವರ್ಗಾವಣೆ ಮಾಡಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇನ್ನೂ ಫೆಡ್ಎಕ್ಸ್ ಕೊರಿಯರ್ ಕಂಪನಿಗೆ ತೆರಳಿದ ಬಿಲ್ಡರ್ ಸಂಪೂರ್ಣ ಮಾಹಿತಿ ಕಲೆ ಹಾಕಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ,(ಏಜೆನ್ಸೀಸ್).