

ಬೆಂಗಳೂರು: ಕರೊನಾ ವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆಗಳ ಮೇಲೆ ಹ್ಯಾಕರ್ಸ್ಗಳ ಕಣ್ಣು ಬಿದ್ದಿದೆ. ಕರೊನಾ ರೋಗಿಗಳ ಚಿಕಿತ್ಸೆಗೆ ಸಂಬಂಧಿಸಿದ ಡಿಜಿಟಲ್ ಮಾಹಿತಿಯನ್ನು ಲಾಕ್ ಮಾಡಿ ದುಡ್ಡಿಗೆ ಬ್ಲಾ್ಯಕ್ವೆುೕಲ್ (ರ್ಯಾನ್ಸಮ್ೇರ್) ಮಾಡಲು ಸೈಬರ್ ಕಳ್ಳರು ಅಣಿಯಾಗುತ್ತಿದ್ದಾರೆಂಬ ಆಘಾತಕಾರಿ ಸಂಗತಿ ಬಯಲಾಗಿದೆ. ಕರೊನಾ ವಿರುದ್ಧ ಹೋರಾಟಕ್ಕೆ ಮುಂಚೂಣಿಯಲ್ಲಿ ನಿಂತಿರುವ (ಫ್ರಂಟ್ಲೈನ್) ಆಸ್ಪತ್ರೆಗಳು ಹಾಗೂ ವೈದ್ಯಕೀಯ ಸಂಸ್ಥೆಗಳೇ ಸೈಬರ್ ಕಳ್ಳರ ಟಾರ್ಗೆಟ್ ಆಗಿವೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಡೇಟಾ ಹೊಂದಿರುವ ಕಂಪ್ಯೂಟರ್ಗಳನ್ನು ಹ್ಯಾಕ್ ಮಾಡಿ ಮಾಹಿತಿ ಕದಿಯುವುದು ಪ್ರಮುಖ ಉದ್ದೇಶ. ಕಂಪ್ಯೂಟರ್ಗಳಲ್ಲಿ ಸಂಗ್ರಹಿಸಿರುವ ಡಿಜಿಟಲ್ ಮಾಹಿತಿಯ ಭದ್ರತೆಗೆ ಆಸ್ಪತ್ರೆಗಳು ಸೂಕ್ರ ಕ್ರಮ ವಹಿಸಬೇಕು.
ಹೇಗೆ ದಾಳಿ ಮಾಡ್ತಾರೆ ಹ್ಯಾಕರ್ಸ್: ಯಾವುದೋ ಇಮೇಲ್ಗೆ ಅಟ್ಯಾಚ್ ಆಗಿ ವೈರಸ್ ಅನ್ನು ಹ್ಯಾಕರ್ಸ್ ಹರಿಬಿಡುತ್ತಾರೆ. ಇಮೇಲ್ ಓಪನ್ ಮಾಡಿದ ತಕ್ಷಣ ಕಂಪ್ಯೂಟರ್ ಮಾತ್ರ ಅಲ್ಲದೆ ಸಂಪೂರ್ಣ ಡಿಎನ್ಎಸ್ (ಡೊಮೈನ್ ನೇಮ್ ಸಿಸ್ಟಮ್ ಮೇಲೆ ದಾಳಿ ಮಾಡುತ್ತದೆ. ದಾಳಿಯಾದ ಬಳಿಕ ಕಂಪ್ಯೂಟರ್ ಲಾಕ್ ಆಗುತ್ತದೆ. ಅಷ್ಟೇ ಅಲ್ಲದೇ ಹ್ಯಾಕರ್ಸ್ ನಾವು ನಿಮ್ಮ ಕಂಪ್ಯೂಟರ್ ಲಾಕ್ ಮಾಡಿದ್ದೇವೆ ಎಂದು ಹೇಳಿಕೊಳ್ಳುತ್ತಿರುವ ಮೆಸೇಜ್ ಕಂಪ್ಯೂಟರ್ ಸ್ಕ್ರೀನ್ನಲ್ಲಿ ತೋರಿಸುತ್ತದೆ. ಹೀಗಾಗಿ ಅನಾಮಿಕ, ಅನುಮಾನಾಸ್ಪದ ಇಮೇಲ್ಗಳ ಬಗ್ಗೆ ಎಚ್ಚರ ವಹಿಸುವುದು ಒಳಿತು. ಎಚ್ಚೆತ್ತುಕೊಳ್ಳದೆ ಹೋದಲ್ಲಿ ದೊಡ್ಡ ಅಪಾಯ ಎದುರಿಸ ಬೇಕಾಗುತ್ತದೆ ಎಂದು ಡೇಟಾ ಸೆಕ್ಯೂರಿಟಿ ಕೌನ್ಸಿಲ್ ಆಫ್ ಇಂಡಿಯಾ ಸಂಸ್ಥೆ ಎಚ್ಚರಿಕೆ ನೀಡಿದೆ.
ದಾಳಿಯಾದರೆ ಏನಾಗುತ್ತದೆ?: ಕಂಪ್ಯೂಟರ್ಗಳಲ್ಲಿನ ದತ್ತಾಂಶವನ್ನು ಸಂಕೇತಾಕ್ಷರಗಳಾಗಿ ಮಾರ್ಪಡಿಸುತ್ತಾರೆ. ದಾಳಿಗೆ ಒಳಗಾಗಿರುವ ಕಂಪ್ಯೂಟರ್ಗಳಲ್ಲಿ ಫೈಲ್ ಓಪನ್ ಮಾಡಲು ಸಾಧ್ಯವಿಲ್ಲ. ಹ್ಯಾಕರ್ಸ್ಗಳು ಬೇಡಿಕೆ ಇಟ್ಟಷ್ಟು ಹಣ ನೀಡಬೇಕು. ಇಲ್ಲವಾದರೆ, ದಾಖಲೆಗಳನ್ನು ಕಳೆದುಕೊಳ್ಳಲು ಸಿದ್ಧರಾಗಬೇಕಾಗುತ್ತದೆ. ದತ್ತಾಂಶ ಕಳುವಾದರೆ ವೈದ್ಯಕೀಯ ಚಿಕಿತ್ಸೆ ಸಾಧ್ಯವಾಗುವುದಿಲ್ಲ.
ಮಾಹಿತಿ ಡಿಜಿಟಲ್ ಸಂಗ್ರಹ: ಬಹುತೇಕ ಆಸ್ಪತ್ರೆಗಳು ಕರೊನಾ ವೈರಸ್ ಸೋಂಕಿತರ ಮಾಹಿತಿಯನ್ನು ಡಿಜಿಟಲ್ ವಿಧಾನದಲ್ಲಿ ಮೂಲಕ ಸಂಗ್ರಹಿಸುತ್ತಿವೆ. ಹೀಗಾಗಿ ಹ್ಯಾಕರ್ಗಳು ಆಸ್ಪತ್ರೆಯ ಡೇಟಾ ಲಾಕ್ ಮಾಡಲು ವ್ಯವಸ್ಥಿತ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿಕೊಂಡಿದ್ದಾರೆ. ಇದರಿಂದ ಆಸ್ಪತ್ರೆಗಳ ಒಟ್ಟಾರೆ ಡಿಜಿಟಲ್ ವ್ಯವಸ್ಥೆ ಹಾಗೂ ಬೇರೆ ಆರೋಗ್ಯ ಸಂಸ್ಥೆಗಳ ಜತೆಗಿನ ವ್ಯವಹಾರದ ಮಾಹಿತಿ ಕೈಗೆ ಸಿಗದಂತೆ ಮಾಡುತ್ತಾರೆ. ವೈದ್ಯಕೀಯ ಸೇವೆಯ ಡಿಜಿಟಲ್ ಕಡತಗಳನ್ನು ಒತ್ತೆ ಇಟ್ಟುಕೊಂಡು ದುಡ್ಡು ಸುಲಿಗೆ ಮಾಡುವುದೇ ಪ್ರಮುಖ ಗುರಿಯಾಗಿದೆ. ಈ ನಿಟ್ಟಿನಲ್ಲಿಯೇ ಕೆಲ ದೇಶಗಳ ಆಸ್ಪತ್ರೆಗಳ ಮೇಲೆ ಸೈಬರ್ ದಾಳಿಗೆ ಯತ್ನಿಸಿದ್ದಾರೆ.
| ಯಂಕಣ್ಣ ಸಾಗರ್