ರಾಣೆಬೆನ್ನೂರ: ಇಲ್ಲಿಯ ಹೆಸ್ಕಾಂ ಉಪ ವಿಭಾಗ-1ರ ಕಚೇರಿಯಲ್ಲಿ ಮೇ 18ರಂದು ಮಧ್ಯಾಹ್ನ 3.30ರಿಂದ 5.30 ರವರೆಗೆ ವಿದ್ಯುತ್ ಗ್ರಾಹಕರ ಸಂವಾದ ಸಭೆ ಆಯೋಜಿಸಲಾಗಿದೆ.
ನಗರ ಹಾಗೂ ಉಪ-ವಿಭಾಗ-1ಕ್ಕೆ ಸಂಬಂಧಪಟ್ಟ ಗ್ರಾಮೀಣ ಭಾಗದ ಗ್ರಾಹಕರು ಸಭೆಯಲ್ಲಿ ಭಾಗವಹಿಸಿ, ಅಹವಾಲನ್ನು ಸಲ್ಲಿಸಬಹುದು ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.