

ನವದೆಹಲಿ: ಕೋವಿಡ್-19 ಸೋಂಕು ಆವರಿಸಿದ್ದರಿಂದ ಜಗತ್ತಿನಾದ್ಯಂತ ವಾಣಿಜ್ಯಿಕ ಚಟುವಟಿಕೆಗಳಿಗೆ ಹಿನ್ನಡೆಯಾಗಿದೆ. ಇಂಥ ಸಂದರ್ಭದಲ್ಲಿ ಓಹಿಯೋದ ಬೇಕರಿಯೊಂದರಲ್ಲಿ ಡೋನಟ್ ಖರೀದಿಸಿದ್ದ ವ್ಯಕ್ತಿಯೊಬ್ಬರು ಕರೆ ಮಾಡಿ ‘ನಿಮಗೆ ಒಂದು ಸಾವಿರ ಡಾಲರ್ ಪಾವತಿಸಲು ಇಚ್ಛಿಸುತ್ತೇನೆ’ ಎಂದು ಹೇಳಿ ಅಷ್ಟನ್ನು ಪಾವತಿಸಿದ್ದರು. ಇದು ಅಲ್ಲಿಯ ಉದ್ಯೋಗಿಗಳನ್ನು ಚಕಿತಗೊಳಿಸಿದೆ. ‘
ಆ ಬೇಕರಿಯ ಕಾಯಂ ಗ್ರಾಹಕರಾದ ವ್ಯಕ್ತಿ, ‘ನಾನು ನಿಮಗೆ ಸಹಾಯ ಮಾಡಲೇಬೇಕು’ ಎಂದು ಹಾಗೆ ಮಾಡಿದ್ದರು. ‘ಕೋವಿಡ್-19 ಸೋಂಕಿನಿಂದಾಗಿ ಮುಕ್ಕಾಲು ಪಾಲು ಆದಾಯವನ್ನು ಕಳೆದುಕೊಂಡ ಬೇಕರಿ ಸಂಕಷ್ಟದಲ್ಲಿತ್ತು. ಈಗ ಈ ಅನಿರೀಕ್ಷಿತ ನೆರವಿನಿಂದ ಅನುಕೂಲವಾಗಿದೆ’ ಎಂದು ಬೇಕರಿಯ ಮ್ಯಾನೇಜರ್ ಎಮಿಲಿ ಸ್ಮಿತ್ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ.