ಮನೆಗಳ್ಳತನ ಮಾಡಿದ್ದ ಅಪ್ರಾಪ್ತನ ವಶ

Crime Logo
Published on

ಬೆಂಗಳೂರು: ಮನೆಗೆ ನುಗ್ಗಿ ಚಿನ್ನಾಭರಣ ಮತ್ತು ವಜ್ರ ಆಭರಣಗಳ ಕಳವು ಮಾಡಿದ್ದ ಅಪ್ರಾಪ್ತನನ್ನು ಜಯನಗರ ಠಾಣೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಜೆ.ಪಿ.ನಗರ ನಿವಾಸಿ ೧೬ ವರ್ಷದ ಬಾಲಕನನ್ನು ವಶಕ್ಕೆ ಪಡೆದು, ಬಾಲ ನ್ಯಾಯ ಮಂಡಳಿಗೆ ಹಾಜರು ಪಡಿಸಲಾಗಿದೆ. ಈತನಿಂದ ೮ ಲಕ್ಷ ರೂ. ಮೌಲ್ಯದ ೮೩ ಗ್ರಾಂ ಚಿನ್ನಾಭರಣ ಮತ್ತು ವಜ್ರದ ಆಭರಣಗಳು ಮತ್ತು ೪೯ ಸಾವಿರ ರೂ. ನಗದು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈತನ ವಿಚಾರಣೆಯಲ್ಲಿ ಗಿರಿನಗರ ಮತ್ತು ಬನಶಂಕರಿ ಹಾಗೂ ಜಯನಗರ ಠಾಣೆಗಳಲ್ಲಿ ದಾಖಲಾಗಿದ್ದ ಬೈಕ್ ಕಳವು ಪ್ರಕರಣಗಳು ಪತ್ತೆಯಾಗಿವೆ. ಬಾಲಕ ಇತ್ತೀಚೆಗೆ, ಜಯನಗರದ ೫ನೇ ಬ್ಲಾಕ್ ನಿವಾಸಿ ದ್ವಾರಕನಾಥ್ ಎಂಬುವರ ಮನೆಯ ಹಿಂಬದಿ ಮೆಟ್ಟಿಲ ಮೂಲಕ ಮನೆಯೊಳಗೆ ಹೋಗಿದ್ದ. ಬಳಿಕ ಬೀರುವಿನ ಕೀ ತೆಗೆದು, ೨.೫ ಲಕ್ಷ ರೂ. ನಗದು, ೧ ವಜ್ರದ ಉಂಗುರ, ೨ ಜತೆ ವಜ್ರದ ಕಿವಿಯೋಲೆ, ಒಂದು ವಜ್ರದ ಮೂಗುತಿ ಸೇರಿ ೧೪ ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡು ಅಪ್ರಾಪ್ತನನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net