ಜನನ ಪತ್ರಕ್ಕೆ ಲಂಚ ಕೇಳಿದ ದಲ್ಲಾಳಿ!

Curruption (FILEminimizer)
Published on

ಕೋಲಾರ: ನಗರಸಭೆಯಲ್ಲಿ ಲಂಚದ ಹಾವಳಿ ಮಿತಿಮೀರಿದ್ದು, ದಲ್ಲಾಳಿಗಳಿಲ್ಲದೆ ಕೆಲಸ ನಡೆಯುವುದಿಲ್ಲ ಎಂಬ ಮಾತು ಕೇಳಿಬರುತ್ತಲೇ ಇದೆ. ಇದಕ್ಕೆ ಪುಷ್ಟಿ ನೀಡುವಂತೆ ನಗರಸಭೆ ಬಾಗಿಲಲ್ಲೇ ದಲ್ಲಾಳಿಯೊಬ್ಬ ಜನನ ಪ್ರಮಾಣ ಪತ್ರ ನೀಡಲು 300ರೂ.ಗೆ ಬೇಡಿಕೆಯಿಟ್ಟ ವಿಡಿಯೋ ಶನಿವಾರ ಸಾರ್ವಜನಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.


ಪ್ರಭು ಎಂಬಾತ ಮುಳಬಾಗಲು ಮೂಲದ ವೆಂಕಟೇಶ್​ಗೆ ಹಣ ನೀಡುವಂತೆ ಒತ್ತಾಯ ಮಾಡಿದ್ದಾನೆ. ನಗರಸಭೆಯಲ್ಲಿ ದಾಖಲೆ ನೀಡಿದ್ದು, ಮೊಬೈಲ್​ಗೆ ಮೆಸೇಜ್​ ಬಂದಿದೆ. ಆದರೆ ನಿನಗೇಕೆ 300ರೂ.ಕೊಡಬೇಕು ಎಂದು ಪ್ರಶ್ನಿಸಿದ್ದಕ್ಕೆ ಜನನ- ಮರಣ ಪ್ರಮಾಣ ಪತ್ರ ನೀಡಲು ಸಿಬ್ಬಂದಿಗೆ ಹಣ ಕೊಡಬೇಕು ಎಂದು ಉತ್ತರಿಸಿದ್ದಾನೆ.

ಆಗ ವೆಂಕಟೇಶ್​ ಆತ ತೋರಿಸಿದ ಮಹಿಳಾ ಸಿಬ್ಬಂದಿ ಬಳಿ ಕರೆದೊಯ್ದು ಈತ ಹೇಳುತ್ತಿರುವುದು ನಿಜವೇ ಎಂದು ಕೇಳಿದ್ದಾರೆ. ಲಂಚ ಕೇಳಲು ನೀನ್ಯಾರು? ಇದು ಸರಿಯೇ ಎಂದಾಗ ಆತ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಹಣ ಕೇಳುವ ವಿಡಿಯೋ ಇದೀಗ ವೈರಲ್​ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net