ಸಿಯುಕೆ ಕುಲಸಚಿವ ಡಾ.ಬಿರಾದಾರ್ ರಚಿಸಿದ ಕೃತಿಯನ್ನು ಬಿಡುಗಡೆ ಮಾಡಿದ ವೆಲ್ಲೂರ್ ವಿವಿ ಕುಲಪತಿ ಪ್ರೊ.ವಿಶ್ವನಾಥನ್

ಒಡಿಸ್ಸಾದ ಭುವನೇಶ್ವರದಲ್ಲಿರುವ ಕೆಐಐಟಿ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ನಡೆದ ಭಾರತೀಯ ಆರ್ಥಿಕ ಸಂಘದ ೧೦೬ನೇ ಸಮ್ಮೇಳನದ ಸಮಾರೋಪದಲ್ಲಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಆರ್.ಆರ್.ಬಿರಾದಾರ್ ರಚಿಸಿರುವ ಗ್ರಾಮೀಣ ಕೃಷಿಯೇತರ ಆರ್ಥಿಕತೆಯ ಸುಸ್ಥಿರತೆ ಕುರಿತ ಪುಸ್ತಕವನ್ನು ವಿಐಟಿ ವೆಲ್ಲೂರ್ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಿ.ವಿಶ್ವನಾಥನ್ ಬಿಡುಗಡೆ ಮಾಡಿದರು.
IMG-20240105-WA0041
Published on

ಗ್ರಾಮೀಣ ಕೃಷಿಯೇತರ ಆರ್ಥಿಕತೆಯ ಸುಸ್ಥಿರತೆ * ಪುಅ್ತಕ


ವಿಜಯವಾಣಿ ಸುದ್ದಿಜಾಲ ಕಲಬುರಗಿ
ಒಡಿಸ್ಸಾದ ಭುವನೇಶ್ವರದಲ್ಲಿರುವ ಕೆಐಐಟಿ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ನಡೆದ ಭಾರತೀಯ ಆರ್ಥಿಕ ಸಂಘದ ೧೦೬ನೇ ಸಮ್ಮೇಳನದ ಸಮಾರೋಪದಲ್ಲಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಆರ್.ಆರ್.ಬಿರಾದಾರ್ ರಚಿಸಿರುವ ಗ್ರಾಮೀಣ ಕೃಷಿಯೇತರ ಆರ್ಥಿಕತೆಯ ಸುಸ್ಥಿರತೆ ಕುರಿತ ಪುಸ್ತಕವನ್ನು ವಿಐಟಿ ವೆಲ್ಲೂರ್ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಿ.ವಿಶ್ವನಾಥನ್ ಬಿಡುಗಡೆ ಮಾಡಿದರು.
ಪುಸ್ತಕ ಬಿಡುಗಡೆಯ ಬಳಿಕ ಮಾತನಾಡಿದ ಪ್ರೊ.ಆರ್.ಆರ್.ಬಿರಾದಾರ್, ಪುಸ್ತಕವು ಗ್ರಾಮೀಣ ಕೃಷಿಯೇತರ ಚಟುವಟಿಕೆಗಳಲ್ಲಿ (ಆರ್‌ಎನ್‌ಎಫ್‌ಎ) ಕೆಲಸ ಮಾಡುವ ಕಾರ್ಮಿಕರ ಔದ್ಯೋಗಿಕ ಬದಲಾವಣೆ ವಿವರಿಸುತ್ತದೆ. ಬಡತನ, ಆದಾಯದ ಅಸಮಾನತೆ ಮತ್ತು ಗ್ರಾಮೀಣ ಕೃಷಿಯೇತರ ಜೀವನ ಪರಿಸ್ಥಿತಿ ಮೇಲೆ ಅವುಗಳ ಪ್ರಭಾವ ಪರಿಶೀಲಿಸುತ್ತದೆ. ಭಾರತಕ್ಕೆ ಸ್ವಾತಂತ್ರÈ ಬಂದು ೭೫ ವರ್ಷಗಳಾದ ಈ ಸಂದರ್ಭದಲ್ಲಿ ಈ ಪುಸ್ತಕವು ದೇಶದ ಗ್ರಾಮೀಣ-ನಗರವಾಸಿಗಳ ಜನಸಂಖ್ಯೆ ಮತ್ತು ಸಾಕ್ಷರತೆ, ಆರೋಗ್ಯದ ಸ್ಥಿತಿ, ಆರ್ಥಿಕತೆ, ಜೀವನ ಮಟ್ಟದಲ್ಲಿನ ಅಸಮಾನತೆಯನ್ನೂ ಪರಿಶೀಲಿಸುತ್ತದೆ ಎಂದರು.
 ಇದು ಭಾರತದಲ್ಲಿನ ಗ್ರಾಮೀಣ ಆರ್ಥಿಕತೆಯ ಅಂತರ್ಗತ ಮತ್ತು ಸುಸ್ಥಿರ ಅಭಿವೃದ್ಧಿಗೆ ಸಂಭಾವ್ಯ ತೊಂದರೆ ಗುರುತಿಸುತ್ತದೆ. ಗ್ರಾಮೀಣ ಕೃಷಿಯೇತರ ಆರ್ಥಿಕತೆಯ ಸುಸ್ಥಿರ ಅಭಿವೃದ್ಧಿಗಾಗಿ ಗ್ರಾಮೀಣ-ನಗರ ಸಂಪರ್ಕಗಳ ಪ್ರಾಮುಖ್ಯತೆ ಎತ್ತಿ ತೋರಿಸುತ್ತದೆ. ಇದು ಭಾರತ ಮತ್ತು ಕರ್ನಾಟಕದಲ್ಲಿನ ಗ್ರಾಮೀಣ ಕೃಷಿಯೇತರ ಚಟುವಟಿಕೆಗಳ ಪ್ರವೃತ್ತಿ ಮತ್ತು ಮಾದರಿ ಮತ್ತು ಅವುಗಳ ಬೆಳವಣಿಗೆಗೆ ಕಾರಣವಾದ ಅಂಶ ವಿಶ್ಲೇಷಿಸಲು ಪ್ರಯತ್ನಿಸುತ್ತದೆ. ಪುಸ್ತಕವು ಗ್ರಾಮೀಣ ಕೃಷಿಯೇತರ ಚಟುವಟಿಕೆಗಳ ಬೆಳವಣಿಗೆಯ ಪ್ರಕ್ರಿಯೆ ವಿವರಿಸುತ್ತದೆ. ಜಾಗತೀಕರಣದ ಯುಗದಲ್ಲಿ ಗ್ರಾಮೀಣ ಕೃಷಿಯೇತರ ಆರ್ಥಿಕತೆಯ ಸುಸ್ಥಿರ ಅಭಿವೃದ್ಧಿಗಾಗಿ ಕಾರ್ಯತಂತ್ರ ಮತ್ತು ನೀತಿ ರೂಪಿಸಲು ಸಲಹೆ ಒದಗಿಸುತ್ತದೆ ಎಂದು ಹೇಳಿದರು.
ಪುಸ್ತಕ ಬಿಡುಗಡೆ ಮಾಡಿದ ವೆಲ್ಲೋರ್ ವಿಐಟಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಿ.ವಿಶ್ವನಾಥನ್ ಮಾತನಾಡಿ, ಪುಸ್ತಕವು ಗ್ರಾಮೀಣ ಕೃಷಿಯೇತರ ಆರ್ಥಿಕತೆಯ ಸಮಗ್ರ ಚಿತ್ರಣ ನೀಡುತ್ತದೆ. ಕ್ಷೇತ್ರ ಸಂಶೋಧನೆ ಆಧರಿಸಿರುವುದರಿಂದ, ಇದು ಗ್ರಾಮೀಣ ಕೃಷಿಯೇತರ ಆರ್ಥಿಕತೆಯ ವಾಸ್ತವಿಕ ಮತ್ತು ಸಮಕಾಲೀನ ಚಿತ್ರ ನೀಡುತ್ತದೆ. ಗ್ರಾಮೀಣ ಆರ್ಥಿಕತೆ, ಕೈಗಾರಿಕೆ, ಉದ್ಯಮಶೀಲತೆ ಮತ್ತು ಮಹಿಳಾ ಸಬಲೀಕರಣ ಕ್ಷೇತ್ರದಲ್ಲಿ ಕೆಲಸ ಮಾಡುವವರು ಈ ಪುಸ್ತಕ ಓದಬೇಕು ಎಂದರು.
ಭಾರತದ ಯೋಜನಾ ಆಯೋಗದ ಮಾಜಿ ಉಪಾಧ್ಯಕ್ಷ ಡಾ.ಮಾಂಟೆಕ್‌ಸಿAಗ್ ಅಹ್ಲುವಾಲಿಯಾ, ಹಿರಿಯ ಪತ್ರಕರ್ತ ಡಾ.ಮಹೇಂದ್ರ ದೇವ್, ಭಾರತೀಯ ಆರ್ಥಿಕ ಸಂಘದ ಅಧ್ಯಕ್ಷ ಡಾ.ತಪನಕುಮಾರ್ ಸಂಡಿಯಾಲ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net