ಟಿಪ್ಪು, ಬಾಬರ್, ಗಜನಿ-ಗೋರಿ, ಮೊಘಲರನ್ನು ಟೀಕೆ ಮಾಡಿದರೆ ಸಿದ್ದು ಏಕೆ ಎದೆ ಬಡಿದುಕೊಳ್ತಾರೆ: ಸಿ. ಟಿ.ರವಿ

CTravi-siddu
Published on

ಚಿಕ್ಕಮಗಳೂರು: ದೇಶವನ್ನು ಲೂಟಿ ಮಾಡಿರುವವರ ಬಗ್ಗೆ ಹೇಳಿದರೆ ಸಿದ್ದರಾಮಯ್ಯನವರು ಏಕೆ ಮಾತನಾಡುತ್ತಾರೆ, ಅವರು ಏಕೆ ಎದೆ ಬಡಿದುಕೊಳ್ಳುತ್ತಾರೆ ಎಂಬುದು ಅರ್ಥವಾಗಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.

ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ಆರ್​ಎಸ್​ಎಸ್​ಗೂ ನಮಗೂ ವೈಚಾರಿಕ ಸಂಬಂಧವಿದೆ. ನಾವು ಅದರಿಂದ ಪ್ರೇರಣೆಯಾಗಿದ್ದೇವೆ. ಅವರಿಗೆ ಟಿಪ್ಪು, ಬಾಬರ್​, ಔರಂಗಜೇಬ್​​, ಗಜನಿ ಜತೆ ಯಾವ ಸಂಬಂಧ ಇದೆ ಎಂದು ಹೇಳಲಿ ಎಂದು ಪ್ರಶ್ನಿಸಿದ್ದಾರೆ.

ಟಿಪ್ಪು ಕಳ್ಳ, ಕನ್ನಡ ವಿರೋಧಿ, ಅತ್ಯಾಚಾರಿ ಅಂದ್ರೆ ಇವರೇಕೆ ಮುಖ ಒರೆಸಿಕೊಳ್ತಾರೆ.ಇವರಿಗೂ ಟಿಪ್ಪು-ಔರಂಗಜೇಬಿಗೂ ಏನು ಸಂಬಂಧವಿದೆ. ಇವರು ಏಕೆ ಎದೆ ಬಡಿದುಕೊಳ್ಳುತ್ತಾರೆ ಎಂಬುದು ಅರ್ಥವಾಗುತ್ತಿಲ್ಲ ಎಂದಿದ್ದಾರೆ.

ನಮಗೆ ಬಸವಣ್ಣ, ನಾರಾಯಣಗುರು, ವಿವೇಕಾನಂದ, ರಾಮ, ಕೃಷ್ಣ, ಕನಕದಾಸರ ಜೊತೆ ಸಾಂಸ್ಕೃತಿಕ ಸಂಬಂಧವಿದೆ, ಇವರು ಕೂಡ ಗಜನಿ-ಗೋರಿ ಹಾಗೂ ಮೊಘಲರ ಬಗ್ಗೆ ಇರುವ ನಂಟನ್ನು ಹೇಳಲಿ ಎಂದು ಸವಾಲು ಹಾಕಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net