

ಕೋಲಾರ: ಮಾವಿನ ಕಣಜ, ಟೊವ್ಯಾಟೊ ನಾಡಲ್ಲಿ ಹವಾಮಾನ ವೈಪರಿತ್ಯದಿಂದ ಉತ್ಪನ್ನದಲ್ಲಿ ಭಾರೀ ಕುಸಿತ ಕಂಡುಬಂದಿರುವುದು ಒಂದೆಡೆಯಾದರೆ, ಅಕಾಲಿಕ ಮಳೆ ಶೇ. 33 ಫಸಲನ್ನು ಹಾಳುವಾಡಿದೆ. ಜಿಲ್ಲೆಯಲ್ಲಿ 2325 ಹೆಕ್ಟೇರ್‌ನಲ್ಲಿ ಬೆಳೆ ನಷ್ಟವಾಗಿದ್ದು, 11.53 ಕೋಟಿ ರೂ.ಗೂ ಅಧಿಕ ನಷ್ಟ ಸಂಭವಿಸಿದೆ ಎಂದು ಕಂದಾಯ, ತೋಟಗಾರಿಕೆ ಇಲಾಖೆ ಅಧಿಕಾರಿಗಳ ಜಂಟಿ ಸರ್ವೇಯಲ್ಲಿ ಅಂದಾಜಿಸಲಾಗಿದೆ.
ಕಳೆದ ವರ್ಷ ಕಡೆಯ ಮೂರು ತಿಂಗಳು ಸುರಿದ ಅಕಾಲಿಕ ಮಳೆ ರೈತರನ್ನು ಜರ್ಜರಿತರನ್ನಾಗಿಸಿತ್ತು. ಟೊವ್ಯಾಟೊ ಬೆಳೆಯಲು ಹಿಂದೆ, ಮುಂದೆ ನೋಡುವಂತಾಗಿತ್ತು. ಆಗ ಬೆಳೆ ನಷ್ಟದ ಜತೆಗೆ ಈ ವರ್ಷದ ಏಪ್ರಿಲ್ ತನಕ ಬೆಲೆಯೂ ಸಿಗದೆ ಸಾಲದ ಸುಳಿಗೆ ಸಿಲುಕಿ ಕಣ್ಣೀರಲ್ಲಿ ಕೈತೊಳೆಯುವ ಪರಿಸ್ಥಿತಿ ಅನ್ನದಾತನದಾಗಿತ್ತು. ಇನ್ನೇನು ಮೇನಲ್ಲಿ ಟೊವ್ಯಾಟೊಗೆ ಬೆಲೆ ಏರಿಕೆಯಾಗುತ್ತಿದ್ದು, ವಾವು ಫಸಲು ಕಡಿಮೆ ಇರುವುದರಿಂದ ಬೆಲೆ ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದ ರೈತನಿಗೆ ಪೂರ್ವಮುಂಗಾರು ಗಾಳಿಯೊಂದಿಗೆ ಅಬ್ಬರಿಸಿದ್ದರಿಂದ ಅಲ್ಪಸ್ವಲ್ಪವಿದ್ದ ವಾವು ಫಸಲಲ್ಲಿ ಅರ್ಧದಷ್ಟು ನೆಲಕಚ್ಚಿದ್ದು, ಕಂಗಾಲಾಗುವಂತೆ ವಾಡಿದೆ.
ಜಿಲ್ಲೆಯಲ್ಲಿ 50ಸಾವಿರ ಹೆಕ್ಟೇರ್‌ನಲ್ಲಿ ಮಾವು ಬೆಳೆಯಲಾಗಿದ್ದು, ಹವಾವಾನ ವೈಪರೀತ್ಯದಿಂದ ಶೇ.30 ಫಸಲು ನಿರೀಕ್ಷಿಸಲಾಗಿತ್ತು. ಮಾಸಾಂತ್ಯಕ್ಕೆ ಮಾವು ಮಾರುಕಟ್ಟೆಗೆ ಬರುವ ಸಾಧ್ಯತೆ ನಿಶ್ಚಿತವಾಗಿತ್ತು. ಆದರೆ ಬಿರುಗಾಳಿಯೊಂದಿಗೆ ಸುರಿದ ಅಕಾಲಿಕ ಮಳೆ ಇದ್ದ ಫಸಲಲ್ಲೂ ಶೇ.33 ನೆಲಕಚ್ಚುವಂತೆ ವಾಡಿತು. ಕೂಡಲೇ ರೈತರ ಕಷ್ಟಕ್ಕೆ ಸ್ಪಂದಿಸಿದ ಜಿಲ್ಲಾಡಳಿತ ಅಧಿಕಾರಿಗಳನ್ನು ತೋಟಗಳಿಗೆ ಕಳುಹಿಸಿ ನಷ್ಟದ ಅಂದಾಜನ್ನು ಸಂಗ್ರಹಿಸಿ ಪರಿಹಾರ ಕೋರಿ ಸರ್ಕಾರಕ್ಕೆ ಸಮಗ್ರವರದಿ ಸಲ್ಲಿಸಲು ತಯಾರಿ ನಡೆಸಿದೆ.
ಜಿಲ್ಲೆಯಲ್ಲಿ ಗಾಳಿ, ಮಳೆಗೆ 1910 ಹೆಕ್ಟೇರ್‌ನಲ್ಲಿ ಮಾವು, 233ಹೆಕ್ಟೇರ್‌ನಲ್ಲಿ ಟೊವ್ಯಾಟೊ, 25 ಹೆಕ್ಟೇರ್‌ನಲ್ಲಿ ಕ್ಯಾಪ್ಸಿಕಂ, 157 ಹೆಕ್ಟೇರ್‌ನಲ್ಲಿ ಇತರೆ ಉತ್ಪನ್ನಗಳು ನಾಶವಾಗಿರುವುದು ಸಮೀಕ್ಷೆಯಲ್ಲಿ ಪತ್ತೆಯಾಗಿದೆ. ತೋಟಗಾರಿಕೆ ಮತ್ತು ಕಂದಾಯ ಅಧಿಕಾರಿಗಳು ತೋಟದಲ್ಲಿ ರೈತನ ಜತೆ ಜಿಪಿಎಸ್ ಅಳವಡಿಸಿರುವ ಪೋಟೋ ತೆಗೆದು ಬೆಳೆ ನಮೂದಾಗಿರುವ ಪಹಣಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್ ಸೇರಿ ಇತರ ಅಗತ್ಯ ದಾಖಲೆಗಳನ್ನು ಸಂಗ್ರಹಿಸಿದ್ದಾರೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯಿಂದ ಪ್ರಸ್ತುತ ಹೆಕ್ಟೇರ್ ತೋಟಗಾರಿಕೆ ಬೆಳೆಗೆ ನಷ್ಟಪರಿಹಾರವಾಗಿ 13.500 ರೂ., ಮಾವಿಗೆ 18ಸಾವಿರ ರೂ.ಪರಿಹಾರ ಒದಗಿಸಲಾಗುತ್ತಿದೆ. ಈ ಮೊತ್ತ ಸಾಕಾಗುವುದಿಲ್ಲ. ಬೆಳೆ ವಾಡಲು ಲಕ್ಷಾಂತರ ರೂ.ಖರ್ಚು ಬರುವುದರಿಂದ ಎಕರೆಗೆ ಕನಿಷ್ಠ 2ರಿಂದ 3ಲಕ್ಷ ರೂ.ಗಳನ್ನಾದರೂ ನೀಡಬೇಕೆಂಬ ಕೂಗು ರೈತಾಪಿವಲಯದಿಂದ ಕೇಳಿ ಬರುತ್ತಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರ ಈ ನಿಟ್ಟಿನಲ್ಲೂ ಗಂಭೀರ ಚಿಂತನೆ ವಾಡುವ ಅವಶ್ಯಕತೆ ಇದೆ ಎಂಬುದು ಪ್ರಜ್ಞಾವಂತ ಕೃಷಿಕರ ಅಭಿಪ್ರಾಯವಾಗಿದೆ.
ಜಿಲ್ಲೆಯಲ್ಲಿ ಏಪ್ರಿಲ್ ಮತ್ತು ಮೇನಲ್ಲಿ ಸುರಿದ ಅಕಾಲಿಕ ಮಳೆ ಮತ್ತು ಬಿರುಗಾಳಿಗೆ ವಾವು ಹೆಚ್ಚಿನ ಪ್ರದೇಶದಲ್ಲಿ ಹಾನಿಗೊಳಗಾಗಿದೆ. ಇತರ ತೋಟಗಾರಿಕೆ ಬೆಳೆಗಳೂ ನೆಲಕಚ್ಚಿ ರೈತರಿಗೆ ಲಕ್ಷಾಂತರ ರೂ.ನಷ್ಟವಾಗಿದೆ. ಕಂದಾಯ ಮತ್ತು ತೋಟಗಾರಿಕೆ ಅಧಿಕಾರಿಗಳು ಜಂಟಿ ಸರ್ವೇ ನಡೆಸಿ ವರದಿ ಸಲ್ಲಿಸಿದ್ದಾರೆ. ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಶ್ರೀ ಕ್ರಮ ಕೈಗೊಳ್ಳುವ ಭರವಸೆಯನ್ನು ತೋಟಗಾರಿಕೆ ಸಚಿವರು ನೀಡಿದ್ದಾರೆ. ಸರ್ಕಾರ ಪರಿಹಾರ ಮೊತ್ತ ಬಿಡುಗಡೆ ವಾಡುತ್ತಿದ್ದಂತೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಯಮಗಳ ಪ್ರಕಾರ ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣ ಜಮೆಯಾಗುತ್ತದೆ. ವೆಂಕಟ್‌ರಾಜಾ, ಜಿಲ್ಲಾಧಿಕಾರಿ, ಕೋಲಾರ. ಜಿಲ್ಲೆಯಲ್ಲಿ ಕಳೆದ ತಿಂಗಳಿಂದ ಸುರಿದ ಅಕಾಲಿಕ ಮಳೆಯಿಂದ ರೈತರಿಗೆ ಆಗಿರುವ ಬೆಳೆ ನಷ್ಟದ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗಿದೆ. ಶ್ರೀನಿವಾಸಪುರ ತಾಲೂಕು ಸೇರಿ ಜಿಲ್ಲೆಯಾದ್ಯಂತ ವಾವು ಹೆಚ್ಚಿನ ಪ್ರವಾಣದಲ್ಲಿ ಹಾನಿಗೊಳಗಾಗಿದೆ. ಟೊವ್ಯಾಟೊ, ಪಪ್ಪಾಯ, ಕ್ಯಾಪ್ಸಿಕಂ ಸೇರಿ ಇತರ ಬೆಳೆಗಳೂ ನಾಶವಾಗಿವೆ. ಪರಿಹಾರ ಬಿಡುಗಡೆ ಬಗ್ಗೆ ಸರ್ಕಾರ ಕ್ರಮ ತೆಗೆದುಕೊಳ್ಳಲಿದೆ. ಎಂ.ಗಾಯತ್ರಿ, ತೋಟಗಾರಿಕೆ ಉಪನಿರ್ದೇಶಕರು, ಕೋಲಾರ. ಕಳೆದ ವರ್ಷ ಕಾಯಿ ಕೀಳುವುದಕ್ಕಿಂತ ತಿಂಗಳ ಹಿಂದೆ ಮಳೆ ಸುರಿದಿದ್ದರಿಂದ ನೀರಿನಾಂಶ ಹೆಚ್ಚಾಗಿ ಹಣ್ಣುಗಳು ರುಚಿ ಕಳೆದುಕೊಂಡು ಕಡಿಮೆ ಬೆಲೆಗೆ ವಾರಬೇಕಾಯಿತು. ಲಾಕ್‌ಡೌನ್‌ನಿಂದ ಕೊಳ್ಳುವವರೂ ಇಲ್ಲದೆ ತೋಟಗಳಲ್ಲೇ ವಾವು ಕೊಳೆಯುವಂತಾಯಿತು. ಈ ಬಾರಿ ಫಸಲು ಕಡಿಮೆ ಇತ್ತಾದರೂ ಬೆಲೆ ಸಿಗಬಹುದೆಂದು ನಿರೀಕ್ಷಿಸಿದ್ದೆವು. ಆದರೆ ಅಕಾಲಿಕ ಮಳೆ ಮತ್ತೆ ನಮ್ಮನ್ನು ಕಷ್ಟನಷ್ಟದ ಪಾಲಾಗುವಂತೆ ವಾಡಿದೆ. ಸರ್ಕಾರ ಪರಿಹಾರ ಕೊಟ್ಟರೂ ಏನೇನೂ ಸಾಕಾಗುವುದಿಲ್ಲ. ಪರಿಹಾರ ಹೆಚ್ಚಿಸಬೇಕು. ಜಿ.ಕೃಷ್ಣೇಗೌಡ, ಆನೇಪುರ, ವಾಲೂರು ತಾಲೂಕು