ಮರಳಿನಲ್ಲೇ ನಿರ್ಧಾರವಾಗುತ್ತೆ ಮೊಸಳೆಯ ಲಿಂಗ! ಮೊಟ್ಟೆಯೊಡೆದಾಗ ಅದು ಗಂಡೂ ಅಲ್ಲ ಹೆಣ್ಣೂ ಅಲ್ಲ!

mosale
Published on

ಮುಂದುವರಿದ ಭಾಗ...

ಮೊಸಳೆಗಳು ಮರಿಗಳನ್ನು ಬಾಯಿಯೊಳಗೆ ಹಾಕಿಕೊಂಡು ತಂದು ನೀರಿನಲ್ಲಿ ಬಿಡುತ್ತವೆ. ನಂತರ ಮರಿಗಳು ಸ್ವತಂತ್ರವಾಗಿ ಬದುಕಬೇಕೆ ಹೊರತು ತಾಯಿ ಸಾಕುವುದಿಲ್ಲ. ಆದರೆ, ಒಂದೆರಡು ವರ್ಷಗಳ ಕಾಲ ಮರಿಗಳನ್ನು ಶತ್ರುಗಳಿಂದ ಕಾಪಾಡಲು ಪ್ರಯತ್ನಿಸುತ್ತವೆ.

ಕೆಲವು ಜಾತಿಯ ಮೊಸಳೆಗಳಲ್ಲಿ, ಗರ್ಭಿಣಿ ಮೊಟ್ಟೆ ಇಡುವ ಸಮಯದಲ್ಲಿ ಗಂಡು ಸ್ವಲ್ಪ ದೂರದಿಂದಲೇ ಅವಳನ್ನು ಕಾಯುತ್ತದೆ. ಮೊಸಳೆಗಳಿಗೆ ವರ್ಣತಂತುಗಳಿಲ್ಲ (ಕ್ರೋಮೋಸೋಮ್ಸ್), ಆದ್ದರಿಂದ ಮರಿ ಗಂಡು ಅಥವಾ ಹೆಣ್ಣು ಎಂದು ನಿರ್ಧಾರವಾಗುವುದು ಮರಳಿನಡಿಯಲ್ಲಿ ಮೊಟ್ಟೆಗೆ ಸಿಗುವ ಉಷ್ಣಾಂಶದಿಂದ. ಆದ್ದರಿಂದ ಇವು ತಮ್ಮ ವಂಶಾಭಿವೃದ್ಧಿ ಮಾಡುವುದರಲ್ಲಿ ಪರಾವಲಂಬಿಗಳು. ಆ ಮರಳಿನಲ್ಲಿ 30 ಡಿಗ್ರಿ ಸೆಂಟಿಗ್ರೇಡ್‌ಗಿಂತ ಕಡಿಮೆ ಉಷ್ಣಾಂಶ ಇದ್ದರೆ ಹೆಣ್ಣು ಮರಿಗಳಾಗುತ್ತವೆ, ಹೆಚ್ಚು ಉಷ್ಣಾಂಶವಿದ್ದರೆ ಗಂಡು ಮರಿಗಳಾಗಿ ಹುಟ್ಟುತ್ತವೆ. ಇದು ಆಮೆಗಳಲ್ಲಿ ವಿರುದ್ಧ ಕ್ರಿಯೆ. ಕೆಲವೊಮ್ಮೆ ಉಷ್ಣಾಂಶದ ವ್ಯತ್ಯಾಸದಿಂದಾಗಿ ಮೊಟ್ಟೆಗಳು ಮರಿಗಳಾಗುವುದೇ ಇಲ್ಲ. ಆದ್ದರಿಂದ ಅದು ಗುಂಡಿಯನ್ನು ತೆಗೆದು ಉಷ್ಣಾಂಶವನ್ನು ಪರಿಶೀಲಿಸುತ್ತದೆ.

ಮುಂದಿನ ದಿನಗಳಲ್ಲಿ ಹವಾಮಾನದ ವೈಪರೀತ್ಯದಿಂದಾಗಿ, ಈ ಲಿಂಗಪರಿವರ್ತನೆಯಲ್ಲಿ ವ್ಯತ್ಯಾಸವಾಗಿ ಇವುಗಳ ವಂಶಾಭಿವೃದ್ಧಿಯಲ್ಲಿ ದೊಡ್ಡಮಟ್ಟದ ಪರಿಣಾಮ ಬೀರಬಹುದು. ಕೆಲವು ಬಾರಿ ಅತಿಯಾದ ಮಳೆಯಿಂದಾಗಿ ಮರಳು ಕೊಚ್ಚಿ ಹೋಗಿ ಮೊಟ್ಟೆಗಳಿಗೆ ಸರಿಯಾದ ಉಷ್ಣಾಂಶ ದೊರೆಯದೆ ಕೆಟ್ಟು ಹೋಗಬಹುದು. ಆದ್ದರಿಂದ ಮಾನವ ಕೃಪೆಯಿಂದ ಉಂಟಾದ ಹವಾಮಾನ ವೈಪರೀತ್ಯದಿಂದಾಗಿ ಅಪರೂಪಕ್ಕೊಮ್ಮೆ ಬರುವ ರಭಸವಾದ ಮಳೆಯಿಂದ ಆಮೆ, ಮೊಸಳೆ, ಏಡಿ ಮುಂತಾದ ನೂರಾರು ಜೀವಿಗಳ ವಂಶಾಭಿವೃದ್ಧಿಗೆ ಬಹಳ ತೊಂದರೆಯಾಗುತ್ತದೆ.

ಕೆಲವು ಜಾತಿಯ ಪಕ್ಷಿಗಳು, ಕಾಡು ಹಂದಿ, ನರಿ, ಕೊಮೋಡೋ ದೈತ್ಯಹಲ್ಲಿ ಮುಂತಾದ ಇತರ ಪ್ರಾಣಿಗಳು ಮೊಸಳೆ, ಆಮೆ ಮೊಟ್ಟೆ ಇಟ್ಟಿರುವ ಸ್ಥಳವನ್ನು ಪತ್ತೆಹಚ್ಚಿ ಮರಳನ್ನು ಅಗೆದು ಮೊಟ್ಟೆಗಳನ್ನು ತಿನ್ನುತ್ತವೆ. ಆದ್ದರಿಂದ ಕೆಲವೊಮ್ಮೆ ಈ ಮೊಸಳೆಗಳು ಮೊಟ್ಟೆ ಇಟ್ಟ ಜಾಗವನ್ನು ಕಾಯುತ್ತವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net