

ಕೋಲಾರ: ಮೈಕ್ರೋ ಫೈನಾನ್ಸ್ ಕಿರುಕುಳ್ಛಕ್ಕೆ ಕಡಿವಾಣ ಹಾಕಲು ಸರ್ಕಾರ ಕ್ರಮಕೈಗೊಂಡಿದ್ದು, ಸಾಲ ವಸೂಲಿ ನೆಪದಲ್ಲಿ ರೈತರು ಅಥವಾ ಮಹಿಳೆಯರಿಗೆ ತೊಂದರೆ ನೀಡಿದರೆ ಕ್ರಿಮಿನಲ್ ಪ್ರಕರಣ ದಾಖಲಿಸಲು ಸೂಚಿಸಲಾಗಿದ್ದು, ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಹೇಳಿದರು.
ಗಣರಾಜ್ಯೋತ್ಸವದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೈಕ್ರೋ ಫೈನಾನ್ಸ್ಗಳನ್ನು ನಿಯಂತ್ರಿಸಲು ಸರ್ಕಾರ ಮುಂದಾಗಿದ್ದು, ಈ ವಿಚಾರದಲ್ಲಿ ಯಾವುದೇ ರಾಜಿಯಿಲ್ಲ ಎಂದರು.
ಡಿಸಿಸಿ ಬ್ಯಾಂಕಿನಿಂದ ಮಹಿಳೆಯರಿಗೆ, ರೈತರಿಗೆ ಸಾಲ ವಿತರಣೆ ಮಾಡದ ಬಗ್ಗೆ ಜಿಲ್ಲಾಧಿಕಾರಿಗಳಿಂದ ವರದಿ ಪಡೆದುಕೊಂಡು ಮುಂದಿನ ಕ್ರಮವಹಿಸಲಾಗುವುದು. ಇನ್ನು ಚುನಾವಣೆಯ ಬಗ್ಗೆ ತಡೆಯಾೆ ಇದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಮಂಚೇನಹಳ್ಳಿ, ಚೇಳೂರು ತಾಲೂಕುಗಳಿಗೂ ನಿರ್ದೇಶಕ ಸ್ಥಾನ ಕಲ್ಪಿಸಬೇಕು ಎಂಬ ವಿಚಾರ ಇದೆ. ಈ ಎಲ್ಲ ಗೊಂದಲ ನಿವಾರಣೆಯಾಗಬೇಕಿದೆ ಎಂದು ತಿಳಿಸಿದರು.
ಎತ್ತಿನಹೊಳೆ ಯೋಜನೆಯಡಿ ನೀರು ನೀಡುವ ಜವಾಬ್ದಾರಿ ನಮ್ಮ ಸರ್ಕಾರದ ಮೇಲಿದೆ. ಆದರೆ, ಯಾವಾಗ ಪೂರ್ಣ ಆಗುತ್ತದೆ ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಕೆಸಿ ವ್ಯಾಲಿ ನೀರಿನಿಂದ ಯಾವುದೇ ತೊಂದರೆಯಾಗಿಲ್ಲ, ತರಕಾರಿಗಳ ಮೇಲೆ ಪರಿಣಾಮ ಇಲ್ಲವೆಂದು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ನವರು, ಹಲವು ವಿವಿಗಳ ವಿಜ್ಞಾನಿಗಳು ಪರೀೆ ಮಾಡಿ ಹೇಳಿವೆ. ಕೆಸಿವ್ಯಾಲಿ ನೀರಿಗೆ 3ನೇ ಹಂತದ ಶುದ್ದೀಕರಣ ಅವಶ್ಯ ಇಲ್ಲ ಎಂದರು.
ಎಂಎಲ್ಸಿ ಅನಿಲ್ಕುಮಾರ್, ಡಿಸಿ ಡಾ.ಎಂ.ಆರ್.ರವಿ, ಜಿಪಂ ಸಿಇಒ ಪ್ರವಿಣ್ ಪಿ.ಬಾಗೇವಾಡಿ, ಎಸ್ಪಿ ಬಿ.ನಿಖಿಲ್, ನಗರಸಭೆ ಅಧ್ಯೆ ಲ್ಮದೇವಮ್ಮ ಇದ್ದರು.
*ಅಭಿವೃದ್ಧಿಗೆ ಆದ್ಯತೆ
ಭೂಮಿಪೂಜೆಗಳು, ಶಂಕುಸ್ಥಾಪನೆ ನಡೆಯುತ್ತಲೇ ಇವೆ. ಅವೆಲ್ಲವೂ ಅಭಿವೃದ್ಧಿಯಲ್ಲವೇ?, ಅಲ್ಲದೆ ಬಂಗಾರಪೇಟೆ&ಕೆಜಿಎಫ್ ನಡುವೆ ಇಂಟಿಗ್ರೇಟೆಡ್ ಟೌನ್ಶಿಪ್ ಮಾಡುತ್ತೇವೆ. ಇದಕ್ಕಾಗಿ 300 ಎಕರೆ ಮಂಜೂರು ಆಗಿದೆ. ರಿಂಗ್ ರಸ್ತೆಗೆ 100 ಕೋಟಿ ರೂ. ನೀಡಿದ್ದನ್ನು ಕೇಂದ್ರ ಸರ್ಕಾರ ಯಾವುದೇ ನೋಟಿಸ್ ನೀಡದೆ ವಾಪಸ್ ಪಡೆದಿದ್ದು, ಮಾರ್ಚ್ ಬಜೆಟ್ನಲ್ಲಿ ಇದರ ಬಗ್ಗೆ ಚರ್ಚಿಸಿ ಅನುದಾನ ನೀಡಲಾಗುವುದು ಎಂದು ಸಚಿವ ಸುರೇಶ್ ಅಭಿವೃದ್ಧಿ ಕುರಿತ ಸುದ್ದಿಗಾರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ನನ್ನ ವಿಚಾರವಾಗಿ ಬಂಗಾರಪೇಟೆ ಶಾಸಕರು ಮಾತನಾಡಿದ್ದು, ಎಲ್ಲ ಶಾಸಕರು, ಸಂಸದರು, ಒಂದೇ ಕುಟುಂಬದವರು. ಜಿಲ್ಲೆಯ ಅಭಿವೃದ್ಧಿ ವಿಚಾರದಲ್ಲಿ ಜಗಳ ಆಡುವುದು ಬೇಡ.
* ಮಹಾನಗರ ಪಾಲಿಕೆಯ ಆಸೆ
ಕೋಲಾರವನ್ನು ಮಹಾನಗರ ಪಾಲಿಕೆ ಮಾಡಲು 3 ಲಕ್ಷ ಜನಸಂಖ್ಯೆ ಇರಬೇಕು. ಈಗ 2.5 ಲಕ್ಷ ಇದೆ. ರಾಯಚೂರು, ಹಾಸನ ಮಹಾನಗರ ಪಾಲಿಕೆಗೆ ಸಚಿವ ಸಂಪುಟದಲ್ಲಿ ಒಪ್ಪಿಗೆ ಆಗಿದೆ. ಮುಂದೆ ಕೋಲಾರವನ್ನೂ ಮಾಡಲಾಗುವುದು ಎಂದು ಸಚಿವರು ಮಾಹಿತಿ ನೀಡಿದರು.
ಬಾಕ್ಸ್..
ಹಂತಹಂತವಾಗಿ ಅಭಿವೃದ್ಧಿ
ೇತ್ರದ ವಿಚಾರವಾಗಿ ಸರ್ಕಾರಿ ಮೆಡಿಕಲ್ ಕಾಲೇಜು, ಎಪಿಎಂಸಿಗೆ ಜಾಗ, ರಿಂಗ್ ರಸ್ತೆ ಬಹು ದೊಡ್ಡ ಸಮಸ್ಯೆಯಾಗಿದ್ದು, ಹಂತಹಂತವಾಗಿ ಬಗೆಹರಿಸಲು ಯೋಜನೆ ರೂಪಿಸಲಾಗಿದ್ದು, ಸರ್ಕಾರದ ಮೇಲೆ ಒತ್ತಡ ತಂದು ಕೆಲಸ ಪೂರ್ಣಗೊಳಿಸಲಾಗುವುದು ಎಂದು ಕೋಲಾರ ಶಾಸಕ ಕೊತ್ತೂರು ಮಂಜುನಾಥ್ ಭರವಸೆ ನೀಡಿದರು.