ಪ್ರತಿಯೊಬ್ಬರೂ ಸಂವಿಧಾನ ಅರಿಯಲಿ

12 NRD-2
Published on

ನರಗುಂದ: ಪ್ರತಿಯೊಬ್ಬರೂ ಸಂವಿಧಾನ ಅರಿತು, ಪಾಲನೆ ಮಾಡಬೇಕು ಎಂದು ಹೆಡ್ ಕಾನ್ಸ್‌ಟೇಬಲ್ ಎಸ್.ವಿ. ಮಂತಾ ಹೇಳಿದರು.

ಪಟ್ಟಣದ ಯಡೆಯೂರ ಸಿದ್ಧಲಿಂಗೇಶ್ವರ ಪ್ರಥಮ ದರ್ಜೆ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ಮತ್ತು ಎನ್‌ಎಸ್‌ಎಸ್ ಘಟಕ ಆಶ್ರಯದಲ್ಲಿ ಅಪರಾಧ ತಡೆ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಎನ್‌ಎಸ್‌ಎಸ್ ಅಧಿಕಾರಿ ಡಿ.ಆರ್. ಕಲಬುರ್ಗಿ ಮಾತನಾಡಿ, ಆಧುನಿಕ ಯುಗದಲ್ಲಿ ಅಪರಾಧ ಕೃತ್ಯಗಳು ಹೆಚ್ಚಾಗದಂತೆ ನಾವೆಲ್ಲ ಜಾಗರೂಕತೆಯಿಂದ ಇರಬೇಕು. ಉತ್ತಮ ಮಾರ್ಗದ ಮೂಲಕ ವಿದ್ಯೆ ಪಡೆದು ಸಮಾಜಕ್ಕೆ ಮಾದರಿಯಾಗಬೇಕು ಎಂದು ತಿಳಿಸಿದರು.

ಶಿವರಾಜ ಬೆಳ್ಳೇರಿ, ಎಸ್.ಆರ್. ಮೇಟಿ, ಎ.ಎ. ನಿಲುಗಲ್ಲ, ಎಸ್.ಆರ್. ಸೌದತ್ತಿ ಇತರರಿದ್ದರು. ಅಂಜಲಿ ಬಣ್ಣನವರ ಸ್ವಾಗತಿಸಿದರು. ಚೈತ್ರಾ ಕುರಹಟ್ಟಿ ನಿರೂಪಿಸಿದರು. ರೂಪಾ ತಳವಾರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net