

ಚೆನ್ನೈ: 5 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ Crime news ಆರೋಪದ ಮೇಲೆ ದೇವಸ್ಥಾನದ ತಿಲಗರ್ ಎಂಬ 70 ವರ್ಷದ ಅರ್ಚಕನನ್ನು ಬಂಧಿಸಲಾಗಿದೆ. ತಮಿಳುನಾಡಿನ ಥೇಣಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಪ್ರಸಾದ ನೀಡುವ ನೆಪದಲ್ಲಿ 5 ವರ್ಷದ ಮಗು ಹಾಗೂ ಆಕೆಯ ಸ್ನೇಹಿತರನ್ನು ದೇವಸ್ಥಾನಕ್ಕೆ ಕರೆದೊಯ್ದಿದ್ದರು.
ತಿಲಗರ್ ಎಂಬ ಅರ್ಚಕ ದೇವಸ್ಥಾನದ ಹೊರಗೆ ಆಟವಾಡುತ್ತಿದ್ದ ಮಕ್ಕಳಿಗೆ ಪ್ರಸಾದ ನೀಡುವುದಾಗಿ ದೇವಸ್ಥಾನದ ಆವರಣದೊಳಗೆ ಕರೆದುಕೊಂಡು ಹೋಗಿದ್ದಾರೆ. ಆಗ ಅವರು 5 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ.ಮನೆಗೆ ಹಿಂದಿರುಗಿದ ನಂತರ ಆ ಹುಡುಗಿ ತನ್ನ ಪೋಷಕರಿಗೆ ಘಟನೆ ಕುರಿತು ವಿವರವಾಗಿ ಹೇಳಿದ್ದಾಳೆ. ಆ ಬಳಿಕ ಗ್ರಾಮಸ್ಥರು ಆ ಅರ್ಚಕನನ್ನು ಹೊಡೆಯಲು ದೇವಸ್ಥಾನದ ಬಳಿ ಜಮಾಯಿಸಿದರು.
ಇದರಿಂದ ಭಯಭೀತರಾದ ಅರ್ಚಕ ತನ್ನನ್ನು ರಕ್ಷಿಸಿಕೊಳ್ಳಲು ದೇವಸ್ಥಾನದ ಒಳಗಿನಿಂದ ಬಾಗಿಲನ್ನು ಲಾಕ್ ಮಾಡಿಕೊಂಡಿದ್ದಾನೆ. ಈ ವಿಚಾರ ತಿಳಿದ ಗ್ರಾಮಸ್ಥರು ಒಟ್ಟಾಗಿ ಬಂದು ಅರ್ಚಕನ್ನು ಥಳಿಸಲು ಸಜ್ಜಾಗಿದ್ದಾರೆ. ವಿಚಾರ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಅರ್ಚಕನನ್ನು ವಶಕ್ಕೆ ಪಡೆದಿದ್ದಾರೆ.
ಬಾಲಕಿಯ ಪೋಷಕರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪೂಜಾರಿ ತಿಲಗರ್ ವಿರುದ್ಧ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಈ ಘಟನೆ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದ್ದು, ಬಾಲಕಿಗೆ ಶೀಘ್ರ ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಿದ್ದಾರೆ.