ಗುಂಡೇಟಿಗೆ ಬಲಿಯಾದ ಮನೀಶ್​ ಶೆಟ್ಟಿ ಸಾಮಾನ್ಯದವನಲ್ಲ; ಬನ್ನಂಜೆ ರಾಜನ ಆಪ್ತ !

Manish Shetty
Published on

 ಬೆಂಗಳೂರು: ಇಂದು ಸಂಜೆ 9ಗಂಟೆಯಷ್ಟೊತ್ತಿಗೆ ನಡೆದ ಬಾರ್​ ಮಾಲೀಕನ ಕೊಲೆ ನಗರವನ್ನು ಬೆಚ್ಚಿಬೀಳಿಸಿದೆ. ಆರ್​ಎಚ್​​ಪಿ ರಸ್ತೆಯಲ್ಲಿರುವ ಡುಯೆಟ್​ ಲೇಡಿಸ್ ಬಾರ್​ ನಡೆಸುತ್ತಿದ್ದ ಮನೀಶ್​ ಶೆಟ್ಟಿಯನ್ನು, ಬಾರ್​ ಮುಂಭಾಗ ಬೈಕ್​​ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ.

ಸ್ಥಳಕ್ಕೆ ನಗರ ಪೊಲೀಸ್ ಕಮಿಷನರ್​ ಕಮಲ್ ಪಂಥ್​ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ದುಷ್ಕರ್ಮಿಗಳು ರಿವಾಲ್ವರ್​ನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದು, ಶ್ವಾನದಳ, ವಿಧಿ ವಿಜ್ಞಾaನ ತಂಡವೂ ಇಲ್ಲಿಗೆ ಆಗಮಿಸಿದೆ.

ಕೊಲೆಯಾದ ಮನೀಶ್​ ಶೆಟ್ಟಿ ಭೂಗತ ಪಾತಕಿ ಬನ್ನಂಜೆ ರಾಜನೊಂದಿಗೆ ಗುರುತಿಸಿಕೊಂಡಿದ್ದ. ಅಲ್ಲದೆ, ರವಿ ಪೂಜಾರಿಯ ಆಪ್ತರಲ್ಲೊಬ್ಬ ಎನ್ನಲಾಗಿದೆ. ಅಷ್ಟೇ ಅಲ್ಲ ಬೆಂಗಳೂರನ್ನು ಬೆಚ್ಚಿಬೀಳಿಸಿದ್ದ ಚೆಮ್ಮನೂರು ದರೋಡೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ. ಈತನ ವಿರುದ್ಧ ಮಂಗಳೂರು ಹಾಗೂ ಮುಂಬೈನಲ್ಲಿ ಹಲವು ಕೇಸ್​ಗಳು ದಾಖಲಾಗಿದ್ದವು.

ಅಪರಾಧ ಲೋಕದಲ್ಲಿ ಇಷ್ಟೆಲ್ಲ ಇತಿಹಾಸ ಇರುವ ಮನೀಶ್​ ಶೆಟ್ಟಿಯನ್ನು ಇಂದು ಅಪರಿಚತರು, ಹೆಲ್ಮೆಟ್​, ಮಾಸ್ಕ್​ ಹಾಕಿಕೊಂಡು ಬಂದು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಎರಡು ಗುಂಡು ಹಾರಿಸಿ, ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net