ರೂಮರ್ಡ್​​​ ಬಾಯ್​​ಫ್ರೆಂಡ್​​ ಜತೆ ಅನನ್ಯ ಪಾಂಡೆ ಅವರ ಹುಟ್ಟುಹಬ್ಬ ಆಚರಿಸಿಕೊಂಡ್ರಾ..? ಅನನ್ಯ ಫೋಟೋ ಕ್ಲಿಕ್ಕಿಸಿದ್ದು ಆದಿತ್ಯಾ ರಾಯ್​​ ಕಪೂರ್​​..!

Published on

ಬಾಲಿವುಡ್ ತಾರೆಯರಾದ ಆದಿತ್ಯ ರಾಯ್ ಕಪೂರ್ ಮತ್ತು ಅನನ್ಯಾ ಪಾಂಡೆ ಡೇಟಿಂಗ್​​ ಮಾಡುತ್ತಿದ್ದಾರೆ ಎಂಬ ವದಂತಿಗಳು ಕೆಲ ದಿನಗಳಿಂದಲೂ ಕೇಳಿ ಬರುತ್ತಿವೆ. ಇನ್ನು ಇವರಿಬ್ಬರೂ ಕೆಲ ಕಾರ್ಕಕ್ರಮಗಳಿಗೆ ಜತೆಯಲ್ಲೇ ಆಗಮಿಸಿ ಇಬ್ಬರೂ ಕಪಲ್ಸ್​​​ ಎಂದು ಗುರುತಿಸಿಕೊಂಡಿದ್ದಾರೆ. ಆದರೆ ಈ ವಿಚಾರ ಅದೆಷ್ಟು ಸುಳ್ಳು ಅಥವಾ ಸತ್ಯ ಅನ್ನೋದಕ್ಕೆ ಇಬ್ಬರೂ ಈವರೆಗೂ ಸ್ಪಷ್ಟನೆ ಕೊಟ್ಟಿಲ್ಲ.


ಇತ್ತೀಚೆಗಷ್ಟೆ ಈ ಜೋಡಿ ಒಂದೇ ಬಣ್ಣ ಅಂದ್ರೆ ಬ್ಲಾಕ್​​​​ ಡ್ರೆಸ್​​​ ಧರಿಸಿ ಒಟ್ಟಿಗೇ ಕಾಣಿಸಿಕೊಂಡಿದ್ದಾರೆ. ಸಾರ್ವಜನಿಕ ಕಾರ್ಯಕ್ರಮಗಳಿಗೆ ಬಂದಾಗಲೆಲ್ಲಾ ಯಾವಾಗಲೂ ಇವರಿಬ್ಬರೂ ಡೇಟಿಂಗ್​​​ ಮಾಡಿತ್ತಿದ್ದಾರೆ ಅನ್ನೋ ಕಾಮೆಂಟ್​​ಗಳು ಹೆಚ್ಚು ವೈರಲ್​ ಆಗುತ್ತಲೇ ಇರುತ್ತೆ.


ಇದೀಗ ಅನನ್ಯಾ ಪಾಂಡೆ ನಿನ್ನೆ (ಅ.30)ನೇ ತಾರೀಕು ತಮ್ಮ 25 ನೇ ವರ್ಷದ ಹುಟ್ಟುಹಬ್ಬವನ್ನ ಆಚರಿಸಿಕೊಂಡಿದ್ದಾರೆ. ಸೋಮವಾರ ರಾತ್ರಿ, ಅನನ್ಯ ಪಾಂಡೆ ಮಾಲ್ಡೀವ್ಸ್‌ನಲ್ಲಿ ತನ್ನ ಹುಟ್ಟುಹಬ್ಬದ ಆಚರಿಸಿಕೊಂಡಿದ್ದು, ಅದರ ಫೋಟೋಗಳನ್ನ ಇನ್ಸ್​​​ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.


ಅನನ್ಯಾ ಫೋಟೋಗೆ ಅಭಿಮಾನಿಗಳು ಶಭ ಹಾರೈಸಿದ್ದು, ಈ ಫೋಟೋಗಳನ್ನ ನಿಮ್ಮ ರೂಮರ್ಡ್​​ ಬಾಯ್​ಫ್ರೆಂಡ್​​ ಆದಿತ್ಯಾ ರಾಯ್​​ ಕಪೂರ್​​ ಅವರೇ ಕ್ಲಿಕ್ಕಿಸಿದ್ದ ಎಂದು ಪ್ರಶ್ನೆ ಕೂಡಾ ಮಾಡಿದ್ದಾರೆ.


ಅಭಿಮಾನಿಗಳು ಅಇತ್ಯಾ ರಾಯ್​​ ಕಪೂರ್​​​ ಅವರೇ ಈ ಫೋಟೋಗಳನ್ನ ಕ್ಲಿಕ್ಕಿಸಿದ್ದು ಎಂದು ಹೇಳುತ್ತಿದ್ದು, ಅನನ್ಯಾ ಈ ವಿಚಾರವಾಗಿ ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ.


ಈ ಫೋಟೋಗೆ ಬಂದ ಕಾಮೆಂಟ್​​ ಸೆಕ್ಷನ್​ ಊಹಾಪೋಹಗಳಿಂದ ತುಂಬಿದ್ದು, ಆದಿತ್ಯ ರಾಯ್ ಕಪೂರ್ ಕ್ಯಾಮೆರಾಮ್ಯಾನ್ ಎಂದು ನೆಟ್ಟಿಗರು ಕಾಮೆಂಟ್​​ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net