ಕ್ರೆಡಿಟ್ ಕಾರ್ಡ್ ಅಪ್‌ಡೇಟ್ ನೆಪದಲ್ಲಿ ವಂಚನೆ

ATM
Published on

ಬೆಂಗಳೂರು: ಕ್ರೆಡಿಟ್ ಕಾರ್ಡ್ ರಿವಾರ್ಡ್ ಪಾಯಿಂಟ್ಸ್ ಹೆಚ್ಚಿಸಿಕೊಳ್ಳುವಂತೆ ವಿದ್ಯಾರ್ಥಿಗೆ ನಂಬಿಸಿ ಸೈಬರ್ ಕಳ್ಳರು ಖಾತೆಗೆ 90 ಸಾವಿರ ರೂ. ಕನ್ನ ಹಾಕಿದ್ದಾರೆ.

ಮಲ್ಲೇಶ್ವರದ ಸಿ.ವಿ. ರಾಮನ್ ರಸ್ತೆಯ ಕೆ.ಬಿ. ಮುಕೇಶ್‌ಕುಮಾರ್ ವಂಚನೆಗೆ ಒಳಗಾದ ವಿದ್ಯಾರ್ಥಿ. ಕೇಂದ್ರ ಸಿಇಎನ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 7ರಂದು ಮುಕೇಶ್‌ಕುಮಾರ್‌ಗೆ ಅಪರಿಚಿತ ವ್ಯಕ್ತಿ ಕರೆ ಮಾಡಿ, ನಿಮ್ಮ ಐಸಿಐಸಿಐ ಕ್ರೆಡಿಟ್ ಕಾರ್ಡ್ ರಿವಾಡ್ಸ್ ಪಾಯಿಂಟ್ಸ್ ಹೆಚ್ಚಿಸಿಕೊಳ್ಳುವಂತೆ ಸಲಹೆ ನೀಡಿದ್ದ. ಅದಕ್ಕೆ ಮುಕೇಶ್ ಒಪ್ಪಿಕೊಂಡಾಗ ಅಪ್ಲಿಕೇಷನ್ ಡೌನ್‌ಲೋಡ್ ಮಾಡಿಕೊಂಡು ಅಪ್‌ಡೇಟ್ ಮಾಡುವಂತೆ ಸೂಚಿಸಿ ಲಿಂಕ್ ಸಹ ಕಳುಹಿಸಿದ್ದ.

ಇದನ್ನು ನಂಬಿದ ಮುಕೇಶ್ ಕುಮಾರ್, ಅಪ್ಲಿಕೇಷನ್ ಡೌನ್‌ಲೋಡ್ ಮಾಡಿಕೊಂಡು ಕ್ರೆಡಿಟ್ ಕಾರ್ಡ್ ನಂಬರ್ ನಮೂದು ಮಾಡಿದಾಗ ಸ್ವಲ್ಪ ಹೊತ್ತಿಗೆ ಕಾರ್ಡ್‌ನಿಂದ 89,247 ರೂ.ಗಳು ಬೇರೆ ಖಾತೆಗೆ ವರ್ಗಾವಣೆ ಆಗಿದೆ. ಇತ್ತ ಮುಕೇಶ್ ಏನಾಯಿತು ಎಂದು ಪರಿಶೀಲನೆ ನಡೆಸುವಷ್ಟರಲ್ಲಿ ಅಪರಿಚಿತ ವ್ಯಕ್ತಿ ಮೊಬೈಲ್ ಆ್ ಮಾಡಿಕೊಂಡು ಸಂಪರ್ಕ ಕಡಿತ ಮಾಡಿಕೊಂಡಿದ್ದ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net