ಒತ್ತಡಮುಕ್ತ ಜೀವನಶೈಲಿ ರೂಪಿಸಿಕೊಳ್ಳಿ

sports
ರೋಟರಿ ವಲಯ 11ರ ಕ್ರೀಡೋತ್ಸವವನ್ನು ಡಾ. ತಿಪ್ಪೇಶ್ ಉದ್ಘಾಟಿಸಿ ಕ್ರೀಡಾಪಟುಗಳಿಗೆ ಶುಭ ಕೋರಿದರು. ಎಚ್.ಎಂ.ಸುರೇಶ್, ಬಿ.ಎ.ಸಂತೋಷ್, ಜಿ.ಕಿರಣ್, ಜಿ.ವಿಜಯಕುಮಾರ್, ಜಿ.ಎನ್.ಪ್ರಕಾಶ್ ಇತರರಿದ್ದರು.
Published on

ಶಿವಮೊಗ್ಗ: ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳುವುದರಿಂದ ದೈಹಿಕ ಸಾಮರ್ಥ್ಯ ವೃದ್ಧಿಯಾಗುವ ಜತೆಯಲ್ಲಿ ಬುದ್ಧಿಶಕ್ತಿ ಚುರುಕಾಗುತ್ತದೆ ಎಂದು ಕೆಳದಿ ಶಿವಪ್ಪನಾಯಕ ಕೃಷಿ ಕಾಲೇಜಿನ ಡೀನ್ ಡಾ. ತಿಪ್ಪೇಶ್ ಅಭಿಪ್ರಾಯಪಟ್ಟರು.

ಕೃಷಿ ಕಾಲೇಜಿನ ಆವರಣದಲ್ಲಿ ವಲಯ 11ರ ರೋಟರಿ ಕ್ರೀಡೋತ್ಸವ ಉದ್ಘಾಟಿಸಿ ಮಾತನಾಡಿ, ನಾವು ಒತ್ತಡದ ಜೀವನಶೈಲಿಯಲ್ಲಿ ಸಾಗುತ್ತಿದ್ದೇವೆ. ಒತ್ತಡಮುಕ್ತ ಜೀವನಶೈಲಿ ರೂಪುಗೊಳ್ಳಲು ಕ್ರೀಡೆ, ಸಾಂಸ್ಕೃತಿಕ, ಮನೋರಂಜನೆ ಜೀವನದ ಅವಿಭಾಜ್ಯ ಅಂಗವಾಗಬೇಕು ಎಂದು ತಿಳಿಸಿದರು.

ರೋಟರಿ ವಲಯ 11ರ ಸಹಾಯಕ ಗವರ್ನರ್ ಎಚ್.ಎಂ.ಸುರೇಶ್ ಮಾತನಾಡಿ, ರೋಟರಿ ಸದಸ್ಯರಲ್ಲಿ ಅಗಾಧ ಪ್ರತಿಭೆಯಿದೆ. ಅನೇಕರು ರಾಜ್ಯ, ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ. ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ಖಿನ್ನತೆ ಕಡಿಮೆ ಮಾಡುವುದರ ಜತೆಗೆ ದೈಹಿಕ, ಮಾನಸಿಕವಾಗಿ ಸದೃಢಗೊಳ್ಳಲು ಸಾಧ್ಯ. ಪರಸ್ಪರ ಒಡನಾಟ, ಪ್ರೀತಿ, ವಿಶ್ವಾಸ ವೃದ್ಧಿಸುತ್ತದೆ ಎಂದರು.

ಶಿವಮೊಗ್ಗ ಸೆಂಟ್ರಲ್ ಕ್ಲಬ್ ಅಧ್ಯಕ್ಷ ಜಿ.ಕಿರಣ್ ಮಾತನಾಡಿದರು. ವಲಯ ಕ್ರೀಡಾ ಸಂಯೋಜಕ ಬಿ.ಎ.ಸಂತೋಷ್, ವಲಯ ಸೇನಾನಿ ಮಂಜುನಾಥ ಕದಂ, ಟಿ.ಆರ್.ಸಂತೋಷ್, ನಿರಂಜನ್ ಹೆಗಡೆ, ಅನಿಲ್‌ಕುಮಾರ್, ಗಿರೀಶ್, ಈಶ್ವರ್, ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್, ಜಿಲ್ಲಾ ಮಾಜಿ ಗವರ್ನರ್ ಜಿ.ಎನ್.ಪ್ರಕಾಶ್, ಡಾ. ಗುಡದಪ್ಪ ಕಸಬಿ, ರವಿ ಕೋಟೋಜಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net