ರಾಷ್ಟ್ರೀಯ ಪುರುಷರ ಆಯೋಗ ರಚಿಸಿ

manava hakku
Published on

ಶಿವಮೊಗ್ಗ: ಸಮಾಜದಲ್ಲಿ ಪುರುಷರೂ ದೌರ್ಜನ್ಯ, ಹಿಂಸೆ ಅನುಭವಿಸುತ್ತಿದ್ದಾರೆ. ಹೀಗೆ ನೊಂದ ಪುರುಷರ ಗೋಳು ಕೇಳಲು, ಅವರಿಗೆ ನ್ಯಾಯ ಒದಗಿಸಲು ರಾಷ್ಟ್ರೀಯ ಪುರುಷರ ಆಯೋಗ ರಚಿಸಬೇಕೆಂದು ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಕಲ್ಯಾಣ ಸಂಸ್ಥೆ ಹಾಗೂ ಅಪರಾಧ ನಿಯಂತ್ರಣ ಸಂಸ್ಥೆ ರಾಷ್ಟ್ರೀಯ ಅಧ್ಯಕ್ಷ ಸಂತೋಷ್‌ಕುಮಾರ್ ಹೊನ್ನೆಗುಂಡಿ ಒತ್ತಾಯಿಸಿದರು.

ಮಹಿಳೆಯರ ಬಗ್ಗೆ ಸಮಾಜ ಮುತುವರ್ಜಿ ವಹಿಸುತ್ತದೆ. ಅವರ ಸಮಸ್ಯೆಗೆ ಸ್ಪಂದಿಸುತ್ತದೆ. ಆದರೆ ಪುರುಷರು ಅನುಭವಿಸುವ ಹಿಂಸೆ ಅನೇಕ ಬಾರಿ ದಾಖಲಾಗುವುದೇ ಇಲ್ಲ. ಪುರುಷ ಸಂಬಂಧಿತ ಚರ್ಚೆಗಳೇ ನಡೆಯುವುದಿಲ್ಲ. ಪುರುಷರು ಅಸಮಾನತೆ ಎದುರಿಸುತ್ತಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಕಳವಳ ವ್ಯಕ್ತಪಡಿಸಿದರು.

ಅತ್ಯಾಚಾರ ಸೇರಿ ಅನೇಕ ಘಟನೆಗಳಲ್ಲಿ ಪುರುಷರ ಮೇಲೆ ವೃಥಾ ತಪ್ಪು ಹೊರಿಸಲಾಗುತ್ತದೆ. ಇಂತಹ ಪುರುಷರಿಗೆ ನ್ಯಾಯ ಒದಗಿಸುವುದು, ಅವರ ಕುಟುಂಬದ ಮೂಲಭೂತ ಹಕ್ಕುಗಳನ್ನು ಕಾಪಾಡುವುದು, ಸುಳ್ಳು ದೂರುಗಳನ್ನು ಪರಿಶೀಲಿಸುವುದು, ಆಕಸ್ಮಾತ್ ಮಹಿಳೆಯರು ಕೊಟ್ಟ ದೂರು ಸುಳ್ಳೆಂದು ಸಾಬೀತಾದರೆ ಅವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸುವುದು, ಮಹಿಳೆಯರಷ್ಟೇ ಸಮಾನ ನ್ಯಾಯವನ್ನು ಪುರುಷರಿಗೂ ಕೊಡುವುದು ಪುರುಷರ ಆಯೋಗದ ಉದ್ದೇಶವಾಗಬೇಕು ಎಂದರು.

ಸಂಸ್ಥೆಯ ಸ್ಥಾಪಕ ಮತ್ತು ರಾಷ್ಟ್ರೀಯ ನಿರ್ದೇಶಕ ಅಬ್ದುಲ್ ರಜಾಕ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಫ್ತಾಬ್ ಪರ್ವೀಜ್, ರಾಜ್ಯಾಧ್ಯಕ್ಷ ಎಸ್.ನವೀನ್, ಪ್ರಧಾನ ಕಾರ್ಯದರ್ಶಿ ಜೆ.ಸಾದಿಕ್, ನಿರ್ದೇಶಕ ಮೊಹಮ್ಮದ್ ಅಯಾನ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net