

ನ್ಯೂಯಾರ್ಕ್: ಮಹಿಳಾ ಪ್ರಯಾಣಿಕರೊಬ್ಬರ ಬ್ಯಾಗ್‌ನಿಂದ ಏಕಾಏಕಿ ಜೀವಂತ ಏಡಿಗಳು ( Crabs On Metro ) ಹೊರಬಂದು ಮೆಟ್ರೋದೊಳಗೆ ಗೊಂದಲದ ವಾತಾವರಣ ಉಂಟಾಗಿದೆ. ಈ ವೀಡಿಯೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ವೈರಲ್ ಆಗುತ್ತಿರುವ ವೀಡಿಯೊದಲ್ಲಿ ಏನಿದೆ?: ಅಮೆರಿಕದ ನ್ಯೂಯಾರ್ಕ್ ನಗರವೊಂದರಿಂದ ಹೊರಟ ಮೆಟ್ರೋದಲ್ಲಿ ಸಾವಿರಾರು ಮಂದಿ ಪ್ರಯಾಣ ಮಾಡುತ್ತಿದ್ದರು. ಮೆಟ್ರೋ ಕೋಚ್‌ನಲ್ಲಿದ್ದ ಮಹಿಳೆಯೊಬ್ಬರ ಕೈನಲ್ಲಿದ್ದ ಪೇಪರ್ ಬ್ಯಾಗ್ ಒಡೆದು ಹೋಗಿದೆ. ಈ ವೇಳೆ ಆ ಪೇಪರ್ ಚೀಲದಿಂದ ಏಡಿಗಳು ಹೊರಬರಲು ಪ್ರಾರಂಭಿಸಿದಾಗ, ಮಹಿಳೆ ಭಯದಿಂದ ಬಾಗ್ ಬಿಟ್ಟು ದೂರ ಓಡಿದ್ದಾರೆ. ಈ ವೇಳೆ ಮಹಿಳೆ ಪಕ್ಕದಲ್ಲಿ ನಿಂತಿದ್ದ ವ್ಯಕ್ತಿಯೊಬ್ಬರು ತಕ್ಷಣ ಮಹಿಳೆಗೆ ಸಹಾಯ ಮಾಡಲು ಮುಂದೆ ಬಂದರು, ಈಗಾಗಲೇ ಚೀಲದಿಂದ ಏಡಿಗಳು ಹೊರಬರಲು ಪ್ರಾರಂಭಿಸಿದ್ದವು.
ಏಡಿಗಳನ್ನು ಸುರಕ್ಷಿತವಾಗಿ ಇಡಲು ಮಹಿಳೆ ಹೆಣಗಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಅದೇ ಸಮಯದಲ್ಲಿ, ಇನ್ನಿಬ್ಬರು ಪ್ರಯಾಣಿಕರು ಏಡಿಗಳನ್ನು ಹಿಡಿದು ಹೊಸ ಚೀಲಕ್ಕೆ ಹಾಕಿದ್ದಾರೆ.
ಈ ವೀಡಿಯೊವನ್ನು Instagram ನಲ್ಲಿ @subwaycreatures ಹೆಸರಿನ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. 7 ಲಕ್ಷಕ್ಕೂ ಹೆಚ್ಚು ಜನರು ಅದನ್ನು ಇಷ್ಟಪಟ್ಟಿದ್ದಾರೆ. ಇದೇ ವೇಳೆ ಹಲವರು ಕಾಮೆಂಟ್ ಕೂಡ ಮಾಡಿದ್ದಾರೆ. ಮೆಟ್ರೋ ನೋಡಲು ಏಡಿಗಳು ಬಂದಿವೆ. ಪೇಪರ್‌ನಲ್ಲಿ ಯಾರು ಜೀವಂತ ಏಡಿಗಳನ್ನು ಯಾರು ಇಡುತ್ತಾರೆ? ಎಂಬುದು ನನಗೆ ಅರ್ಥವಾಗುತ್ತಿಲ್ಲ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ.