ಬುಸುಗುಟ್ಟಿದ ಹಾವು...60 ಅಡಿ ಆಳದ ಬಾವಿಗೆ ಬಿದ್ದ ಗೋವು

Cow
Published on

ಕೋಲಾರ: ಹುಲ್ಲನ್ನು ಮೇಯುವುದರಲ್ಲಿ ಮಗ್ನವಾಗಿದ್ದ ಹಸು, ತನ್ನ ಮುಂದೆ ಏಕಾಏಕಿ ಬಂದ ಹಾವನ್ನು ನೋಡಿ, ತೀವ್ರ ಕಂಗಾಲಾಗಿ ಬಾವಿಗೆ ಬಿದ್ದ ಘಟನೆ ಬಂಗಾರಪೇಟೆ ತಾಲೂಕಿನಲ್ಲಿ ನಡೆದಿದೆ.

ಬೂದಿಕೋಟೆ ಹೋಬಳಿಯ ಆಲಂಬಾಡಿ ಗ್ರಾಮದ ವೆಂಕಟೇಶ್​ ಎಂಬುವರಿಗೆ ಸೇರಿದ ಹಸು ಬಾವಿಯೊಂದರ ಪಕ್ಕ ಹುಲುಸಾಗಿ ಬೆಳೆದ ಹುಲ್ಲನ್ನು ಮೇಯುತ್ತಿತ್ತು. ಹೀಗೆ ಮೇಯುತ್ತ ಮುಂದೆ ಹೋಗುತ್ತಿದ್ದ ಹಸುವಿಗೆ ಮುಂದೆ ಒಂದು ಹಾವು ಕಾಣಿಸಿದೆ. ಆ ಹಾವೂ ಕೂಡ ಹಸುವನ್ನು ನೋಡಿ ಬುಸುಗುಟ್ಟಿದೆ. ಹೆದರಿ ಕಂಗಾಲಾದ ಹಸು ಸುಮಾರು 60 ಅಡಿ ಆಳದ ಬಾವಿಗೆ ಬಿದ್ದು ಪರದಾಡುವಂತಾಯಿತು. ಇದನ್ನೂ ಓದಿ: ರಾಗಿಣಿ ವಾಟ್ಸ್​ಆ್ಯಪ್​​​ನಲ್ಲಿ ‘ಶ್ರೀ’ ಎಂದು ಸೇವ್​ ಆಗಿದ್ದವ ಅರೆಸ್ಟ್​; ನಟಿ ಇಲ್ಲದಾಗಲೂ ಫ್ಲ್ಯಾಟ್​ಗೆ ಹೋಗಿದ್ದ !

ಆದರೆ ಬಾವಿಯಲ್ಲಿ ತುಂಬ ನೀರು ಇಲ್ಲದ ಕಾರಣ ಹಸು ಮುಳಗದೆ ಅಪಾಯದಿಂದ ಪಾರಾಯಿತು. ನಂತರ ಯಂತ್ರಗಳ ಮೂಲಕ ಹಸುವನ್ನು ಎತ್ತಲಾಗಿದೆ. ಈ ಗೋವನ್ನು ಸುಮಾರು 2 ಗಂಟೆಗಳ ಸತತ ಕಾರ್ಯಾಚರಣೆ ನಂತರ ಬಾವಿಯಿಂದ ಮೇಲಕ್ಕೆತ್ತಲಾಗಿದೆ. ಆದರೆ ಹಸುವಿನ ಒಂದು ಕಾಲು ಮುರಿದಿದ್ದು, ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net