

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಗೋವುಗಳ ಆರೈಕೆಗೆ ವಿಶೇಷ ಗಮನ ನೀಡಲಾಗುತ್ತಿದೆ. ಆದರೆ ಗೋಮೂತ್ರ ಮತ್ತು ಗೋಮಲದಿಂದ ( Cow Dung ) ಆರೋಗ್ಯ ಸಮಸ್ಯೆ ನಿವಾರಣೆಯಾಗುತ್ತದೆ ಎಂಬ ಕಲ್ಪನೆಯೂ ಜನರಲ್ಲಿದೆ. ಇದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ನಾವು ಯಾಕೆ ಹಸುವಿನ ಸಗಣಿಯ ಕುರಿತಾಗಿ ಮಾತನಾಡುತ್ತಿದ್ದೇವೆ ಎನ್ನುವ ಕುರಿತಾಗಿ ನಿಮಗೆ ತಿಳಿಸಿಕೊಡಿಲಿದ್ದೇವೆ....
ಪಲ್ಯ ಜತೆ ಚಪಾತಿ ತಿನ್ನುವ ಬದಲಾಗಿ ವ್ಯಕ್ತಿಯೊಬ್ಬ ಸಗಣಿ ಬೆರೆಸಿ ತಿಂದಿದ್ದಾನೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಪೇಮಸ್ ಆಗೋಕೆ ನಮ್ ಜನ ಏನ್ ಬೇಕಾದ್ರೂ ಮಾಡ್ತಾರೆ ಅಂತ ನೆಟ್ಟಿಗರು ಮಾತನಾಡಿಕೊಂಡಿದ್ದಾರೆ.
ವಿಡಿಯೋದಲ್ಲಿ ಏನಿದೆ?: (Cow Dung )
ಆದರೆ ವ್ಯಕ್ತಿಯೊಬ್ಬ ಕೈಯಲ್ಲಿ ಚಪಾತಿ ಹಿಡಿದು ದನದ ಸಗಣಿಯ ಮುಂದೆ ಕುಳಿತಿದ್ದಾನೆ. ಆ ನಂತರ ಚಪಾತಿಯ ಮೇಲೆ ಸಾಸ್ ನಂತೆ ಸಗಣಿ ಹರಡಿ ಸುತ್ತಿಕೊಂಡು ಬಾಯಿಗೆ ಹಾಕಿಕೊಂಡು ತಿನ್ನತೊಡಗಿದ. ಅದ್ಭುತ ಎಂದು ತಲೆ ಅಲ್ಲಾಡಿಸಿ ಬಾಯಿಗೆ ಹಾಕಿಕೊಂಡ. ಇದಕ್ಕೆ ಸಂಬಂಧಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಘಟನೆ ನಡೆದಿದ್ದು ಎಲ್ಲಿ? ಯಾವಾಗ? ಯಾಇ ಹೀಗೆ ಮಾಡಿದ್ದಾನೆ ಎನ್ನುವ ಮಾಹಿತಿ ಗೊತ್ತಿಲ್ಲ.. ಆದ್ರೆ ಈ ವಿಡಿಯೋ ನೋಡಿದ ನೆಟ್ಟಿಗರು 'ಬಾಬೋಯ್.. ಯಾರಾದ್ರೂ ಮೆಂಟಲ್ ಆಸ್ಪತ್ರೆಗೆ ಕರೆದುಕೊಂಡು ಹೋಗ್ಬೇಕು..' ಎಂದು ಕಮೆಂಟ್ ಮಾಡುತ್ತಿದ್ದಾರೆ. ಎರಡು ದಿನಗಳ ಹಿಂದೆ ಶೇರ್ ಮಾಡಲಾದ ಈ ವಿಡಿಯೋ ವೈರಲ್ ಆಗಿದ್ದು, 2.3 ಮಿಲಿಯನ್ ವೀಕ್ಷಣೆಗಳು ಮತ್ತು ಕಾಮೆಂಟ್‌ಗಳು ಬಂದಿವೆ.