Biryani Offer : ಕೇವಲ 3 ರೂ.ಗೆ ಬಿರಿಯಾನಿ! ಈ ಬಂಪರ್ ಆಫರ್ ಬೆಳಗ್ಗೆ 9 ರಿಂದ ಮಧ್ಯಾಹ್ನ 12 ರವರೆಗೆ ಮಾತ್ರ....

biryani
Published on

ಆಂಧ್ರಪ್ರದೇಶ: ಬಿರಿಯಾನಿಯನ್ನು ಇಷ್ಟಪಡದವರೇ ಇಲ್ಲ. ಬಿರಿಯಾನಿ ಹೆಸರು ಹೇಳಿದರೆ ಸಾಕು ಜನ ಉತ್ಸುಕರಾಗಿ ಅದನ್ನು ತಿನ್ನಲು ಕಾಯುತ್ತಿರುತ್ತಾರೆ. ಸಾಮಾನ್ಯವಾಗಿ ಹೊಟೇಲ್ ಮತ್ತು ರೆಸ್ಟೊರೆಂಟ್​​ಗಳಲ್ಲಿ ಬಿರಿಯಾನಿಯ ಬೆಲೆ ಇತರ ಖಾದ್ಯಗಳಿಗೆ ಹೋಲಿಸಿದರೆ ತುಸು ಹೆಚ್ಚಾಗಿರುತ್ತದೆ. ಆದರೆ ಇಲ್ಲೊಂದು ಕಡೆ ಕೇವಲ 3 ರೂ.ಗೆ ಬಿರಿಯಾನಿ ( Biryani Offer  ) ಸಿಗುತ್ತದೆ. ಇಷ್ಟು ಕಡಿಮೆ ಬೆಲೆಗೆ ಬಿರಿಯಾನಿ ಎಂದರೇ ನೀವು ಆಶ್ಚರ್ಯ ಪಡುತ್ತೀರಾ? ಕೇಳಲು ಕೊಂಚ ಅಚ್ಚರಿ ಎನಿಸಿದ್ರು ಕೂಡಾ ಇದು ನಿಜ. ಹಾಗಾದರೆ ಆ ರೆಸ್ಟೋರೆಂಟ್ ಎಲ್ಲಿದೆ? ಯಾಕೆ ಈ ಬಂಪರ್ ಆಫರ್? ಅದರ ಬಗ್ಗೆ ತಿಳಿದುಕೊಳ್ಳೋಣ...

Chettinad Biryani

ಆಂಧ್ರಪ್ರದೇಶದ ಏಲೂರು ಜಿಲ್ಲೆಯ ಜಂಗಾರೆಡ್ಡಿ ಗುಡೆಮ್‌ನಲ್ಲಿ ಹೊಸದಾಗಿ ತೆರೆದಿರುವ ರೆಸ್ಟೋರೆಂಟ್‌ವೊಂದರಲ್ಲಿ ಕೇವಲ 3 ರೂ.ಗೆ ಬಿರಿಯಾನಿ ನೀಡಲಾಗುತ್ತದೆ. ಜಂಗಾರೆಡ್ಡಿ ಗುಡೆಮ್‌ನಲ್ಲಿ ಹೊಸ ಶಾಖೆಯನ್ನು ಪ್ರಾರಂಭಿಸಿದೆ. ಈ ರೆಸ್ಟೋರೆಂಟ್ ಉದ್ಘಾಟನಾ ಸಮಾರಂಭದ ಸಂದರ್ಭದಲ್ಲಿ, ರೆಸ್ಟೋರೆಂಟ್ ಮ್ಯಾನೇಜರ್ ಖಾದ್ಯ ಪ್ರಿಯರಿಗೆ ಕಣ್ಮನ ಸೆಳೆಯುವ ಬಂಪರ್ ಕೊಡುಗೆಯನ್ನು ಘೋಷಿಸಿದ್ದಾರೆ.

Biryani

ಕೇವಲ 3 ರೂಪಾಯಿ ಕೊಟ್ಟರೆ ಸಾಕು, ಒಂದು ವಾರದವರೆಗೆ ಸುತ್ತಲಿನ ಪ್ರದೇಶಗಳಲ್ಲಿ ಪ್ರಚಾರ ಮಾಡಿದರು. ಬಿರಿಯಾನಿ ಆಫರ್‌ನಿಂದಾಗಿ ನಿರೀಕ್ಷೆಗೂ ಮೀರಿ ಜನರು ರೆಸ್ಟೋರೆಂಟ್‌ಗೆ ಆಗಮಿಸಿದ್ದಾರೆ. ಗ್ರಾಹಕರಿಗೆ ಯಾವುದೇ ತೊಂದರೆಯಾಗದಂತೆ ರೆಸ್ಟೋರೆಂಟ್‌ ಹೊರಗೆ ಸರತಿ ಸಾಲುಗಳನ್ನು ವಿಶೇಷವಾಗಿ ಸ್ಥಾಪಿಸಿದೆ.

ಈ ಕೊಡುಗೆಯು ಬೆಳಗ್ಗೆ 9 ರಿಂದ ಮಧ್ಯಾಹ್ನ 12 ರವರೆಗೆ ಮಾತ್ರ ಮಾನ್ಯವಾಗಿರುತ್ತದೆ. ಈ ಬಂಪರ್ ಆಫರ್ ಕೇವಲ ಮೂರು ತಾಸಿಗೆ ಸಿಗುತ್ತಿದ್ದಂತೆ ಸಾವಿರಾರು ಜನ ಅಲ್ಲಿಗೆ ಬಂದಿದ್ದರು. ಗ್ರಾಹಕರು ಸರದಿ ಸಾಲಿನಲ್ಲಿ ಬಂದು 3 ರೂ. ಕೊಟ್ಟು ಬಿರಿಯಾನಿ ಪ್ಯಾಕೆಟ್ ತೆಗೆದುಕೊಂಡು ಹೋಗಿದ್ದಾರೆ. ಸಮಯ ಮುಗಿದ ನಂತರ ಅನೇಕರು ನಿರಾಶೆಯಿಂದ ಮನೆಗೆ ಹೋಗಿದ್ದಾರೆ. ಸುಮಾರು 5 ಸಾವಿರ ಮಂದಿ ಈ ಆಫರ್ ಬಳಸಿದ್ದಾರೆ ಎಂದು ರೆಸ್ಟೋರೆಂಟ್ ಮಾಲೀಕರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net