

ಮೈಸೂರು: ವಿದ್ಯುತ್ ಸ್ಪರ್ಶದಿಂದ ನಗರದ ಹೂಟಗಳ್ಳಿಯ ಎಸ್ ಆರ್‌ಎಸ್ ಬಡಾವಣೆಯಲ್ಲಿ ಮಂಗಳವಾರ ಹಸುವೊಂದು ಮೃತಪಟ್ಟಿದೆ.
ಬಡಾವಣೆ ನಿವಾಸಿ ರವಿ ಕುಮಾರ್ ಅವರಿಗೆ ಸೇರಿದ ಹಸು ಇದಾಗಿದ್ದು, ಹಸುವನ್ನು ಮನೆಯ ಮುಂಭಾಗದ ವಿದ್ಯುತ್ ಕಂಬಕ್ಕೆ ಕಟ್ಟಲಾಗಿತ್ತು. ಈ ಸಂದರ್ಭ ವಿದ್ಯುತ್ ಪ್ರವಹಿಸಿ ಹಸು ಮೃತಪಟ್ಟಿದೆ. ಸ್ಥಳಕ್ಕೆ ಹೂಟಗಳ್ಳಿ ಠಾಣೆ ಪೊಲೀಸರು, ಸೆಸ್ಕ್ ಹಾಗೂ ನಗರ ಪಾಲಿಕೆ ಅಧಿಕಾರಿಗಳು ಭೇಟಿ ನೀಡಿ ಪರಿಸೀಲಿಸಿದರು.