Cow Ate Hen Alive: ಕೋಳಿಯನ್ನು ಜೀವಂತವಾಗಿ ತಿಂದ ಹಸು! ವಿಡಿಯೋ ವೈರಲ್

Cow Ate Hen Alive
Published on

Cow Ate Hen Alive : ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಂತ ಆಘಾತಕಾರಿ ವಿಡಿಯೋ ವೈರಲ್ ಆಗಿದ್ದು, ಅದರಲ್ಲಿ ಹಸುವೊಂದು ಕೋಳಿಯನ್ನು ಜೀವಂತವಾಗಿ ಅಗಿಯುತ್ತಿರುವುದನ್ನು ಕಾಣಬಹುದು. ಈ ವೀಡಿಯೋ ನೋಡಿದ ನೆಟಿಜನ್‌ಗಳು ಆಶ್ಚರ್ಯ ಪಡುವುದಲ್ಲದೆ ವಿಡಿಯೋ ರೆಕಾರ್ಡ್ ಮಾಡಿದವರ  ವಿರುದ್ಧವಾಗಿ ಆಕ್ರೋಶ ಹೊರ ಹಾಕುತ್ತಿದ್ದಾರೆ.

ವೈರಲ್ ಆಗುತ್ತಿರುವ ವೀಡಿಯೊದಲ್ಲಿ, ಹಸುವನ್ನು ಹಗ್ಗದಿಂದ ಕಟ್ಟಿ ಅದರ ಸುತ್ತಲೂ ಹಲವಾರು ಕೋಳಿಗಳು ತಿರುಗಾಡುತ್ತಿರುವುದನ್ನು ನೀವು ನೋಡಬಹುದು. ಹಸು ಬಾಯಿಯಿಂದ ಕೋಳಿಯನ್ನು ತೆಗೆದುಕೊಂಡು ಜೀವಂತವಾಗಿಯೇ ಜಗಿಯುತ್ತಿರುವುದನ್ನು ನೀವು ನೋಡುತ್ತೀರಿ. ಇದು ನಿಜವಾಗಿಯೂ ಆಘಾತಕಾರಿ ದೃಶ್ಯವಾಗಿದೆ, ಏಕೆಂದರೆ ಸಾಮಾನ್ಯವಾಗಿ ಜನರು ಹಸುಗಳನ್ನು ಸಸ್ಯಾಹಾರಿ ಎಂದು ಪರಿಗಣಿಸುತ್ತಾರೆ. ಆದರೆ ಈ ವಿಡಿಯೋದಲ್ಲಿ ಹಸು ಜೀವಂತವಾಗಿಯೇ ಕೋಳಿಯನ್ನು ತಿನ್ನುತ್ತಿದೆ.

ಈ ಅತ್ಯಂತ ಆಘಾತಕಾರಿ ವೀಡಿಯೊವನ್ನು ಸಾಮಾಜಿಕ ಮಾಧ್ಯಮ ವೇದಿಕೆ Instagram ನಲ್ಲಿ @discoverwildpaws ಹೆಸರಿನ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಬಳಕೆದಾರರು ನನ್ನ ಕಣ್ಣುಗಳನ್ನು ಇನ್ನೂ ನಂಬಲಾಗುತ್ತಿಲ್ಲ ಎಂಬ ಶೀರ್ಷಿಕೆಯನ್ನು ನೀಡಿದ್ದಾರೆ. ಆದರೆ  ಈ ಘಟನೆ ನಡೆದಿರುವುದು ಏಲ್ಲಿ? ಯಾವಾಗ? ಎಐ ತಂತ್ರಜ್ಞಾನ ಬಳಕೆ ಮಾಡಲಾಗಿದ್ಯಾ ಎನ್ನುವ ಕುರಿತಾಗಿ ಯಾವುದೇ ಮಾಹಿತಿ ಇಲ್ಲ...

ಹಸು ಇದನ್ನು ಹೇಗೆ ಮಾಡುತ್ತದೆ ಎಂದು ಯೋಚಿಸುವ ಜನರು ಆಶ್ಚರ್ಯ ಪಡುತ್ತಾರೆ. ಏಕೆಂದರೆ ಇಂತಹ ದೃಶ್ಯವನ್ನು ನೋಡಿದ್ದು ಅಪರೂಪ. 'ಹಸು ನಿಜವಾಗಿಯೂ ಕೋಳಿಯನ್ನು ಜೀವಂತವಾಗಿ ತಿಂದಿದೆಯೇ?'.. ವಿಡಿಯೋ ಮಾಡುತ್ತಾ ನಿಂತಿದ್ದೀರಲ್ಲ ಎಂದು ಕಾಮೆಂಟ್​​ ಮಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net