

ಬೆಂಗಳೂರು: ಕರೊನಾ ವ್ಯಾಕ್ಸಿನ್ ಪಡೆದ ನರ್ಸ್ಗಳ ಆರೋಗ್ಯದಲ್ಲಿ ಏರುಪೇರಾಗಿದ್ದು, ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಶುಕ್ರವಾರ ಮಧ್ಯಾಹ್ನ ನರ್ಸ್ಗಳಾದ ಪ್ರಿಯಾಂಕ, ಕಲ್ಪನಾ, ಶ್ರೀಷಾ, ಪೂಜಾ, ವೈಷ್ಣವಿ ಮತ್ತು ಅಕ್ಷತಾ ಕರೊನಾ ಲಸಿಕೆ ಪಡೆದಿದ್ದರು. ಇದಾದ ಕೆಲವೇ ಗಂಟೆಗಳಲ್ಲಿ ಅವರಿಗೆ ಜ್ವರ, ತಲೆನೋವು ಕಾಣಿಸಿಕೊಂಡು ವಾಂತಿಯಾಗಿದೆ. ಅಂದು ಸಂಜೆ 7 ಗಂಟೆ ಸುಮಾರಿಗೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿರಿ ಕುಡಿದ ಅಮಲಿನಲ್ಲಿ ಒಂಟಿ ಮಹಿಳೆ ಇದ್ದ ಮನೆಗೆ ನಡುರಾತ್ರಿ ನುಗ್ಗಿದ! ಮುಂದೆ ಆಗಿದ್ದೆಲ್ಲವೂ ಅವಾಂತರ
ನರ್ಸ್ಗಳ ಆರೋಗ್ಯದಲ್ಲಿ ಸಮಸ್ಯೆ ಇಲ್ಲ. ಸಣ್ಣ-ಪುಟ್ಟ ಇನ್ಪೆಕ್ಷನ್ ಕಾಣಿಸಿಕೊಂಡಿದೆ. ಸದ್ಯ ಸುಧಾರಿಸಿಕೊಳ್ಳುತ್ತಿದ್ದಾರೆ ಎಂದು ಕಲಬುರಗಿ ಡಿಎಚ್ಒ ಡಾ. ರಾಜಶೇಖರ ಮಾಲಿ ವಿವರಿಸಿದ್ದಾರೆ.
ಕರೊನಾ ವ್ಯಾಕ್ಸಿನ್ ಪಡೆದ ಕೆಲವರು ಅಸ್ವಸ್ಥರಾಗುತ್ತಿರುವ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಸಹಜ ಆತಂಕ ಮೂಡಿದೆ.