ಉಡುಪಿಯಲ್ಲಿ ಕೋವಿಡ್ ಲಸಿಕಾ ಮಹಾಮೇಳಕ್ಕೆ ಚಾಲನೆ

Published on

ಉಡುಪಿ: ಜಿಲ್ಲಾ ಮಟ್ಟದ ಕೋವಿಡ್ ಲಸಿಕಾ ಮಹಾಮೇಳಕ್ಕೆ ಸೋಮವಾರ ಬೆಳಗ್ಗೆ ಹನುಮಂತ ನಗರ ಮಾದರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಚಾಲನೆ ನೀಡಲಾಯಿತು.‌ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ಕೆ.ರಘುಪತಿ ಭಟ್ ಚಾಲನೆ ನೀಡಿದರು.

ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ ಜಿಲ್ಲೆಯಲಿ ಮೊದಲ ಡೋಸ್ ಲಸಿಕಡ ಶೇ.25 ಆಗಿದೆ. ಎರಡನೇ ಡೋಸ್ ಶೇ.7 ಆಗಿದೆ. ಮೂರನೆ ಅಲೆ ಬರುವ ವೇಳೆಗೆ ಲಸಿಕೆ ಪ್ರಕ್ರಿಯೆ ಪೂರ್ಣಗೊಂಡಿರಬೇಕು. ಎಲ್ಲರೂ ತಪ್ಪದೆ ಲಸಿಕೆ ಹಾಕಿಸಿಕೊಂಡು ಕೋವಿಡ್ ಬಗ್ಗೆ ಜಾಗ್ರತೆ ವಹಿಸುವಂತೆ ಸಲಹೆ ನೀಡಿದರು.

ಜಿಲ್ಲೆಯಲ್ಲಿ ಒಂದೇ ದಿನ 30 ಸಾವಿರ ಮಂದಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ.

ಶಾಸಕ ಕೆ .ರಘುಪತಿ ಭಟ್, ಡಿಸಿ .ಜಿ.ಜಗದೀಶ್, ಜಿಲ್ಲಾ ಪಂಚಾಯಿತಿ ಸಿಇಒ ಡಾ.ನವೀನ್ ಭಟ್, ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್ , ಉಪಾಧ್ಯಕ್ಷೆ ಲಕ್ಷ್ಮೀ ಕೊಳ, ಎಡಿಸಿ ಸದಾಶಿವ ಪ್ರಭು ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net